You are here
Home > Koppal News > ಶಾಲಾ ಆವರಣದಲ್ಲಿ ಗಾಂಧಿ ಜಯಂತಿ ಕಾರ್ಯಕ್ರಮ

ಶಾಲಾ ಆವರಣದಲ್ಲಿ ಗಾಂಧಿ ಜಯಂತಿ ಕಾರ್ಯಕ್ರಮ

ಭಾಗ್ಯನಗರದ ಜ್ಞಾನ ಬಂಧು ಪ್ರಾಥಮಿಕ ಶಾಲಾ ಆವರಣದಲ್ಲಿ ಗಾಂಧಿ ಜಯಂತಿ ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿಂದ ಜರುಗಿತು.  ಬೆಳಿಗ್ಗೆ ೮:೦೦ ಗಂಟೆಗೆ ಸಂಸ್ಥೆಯ ಅಧ್ಯಕ್ಷರಾದ   ದಾನಪ್ಪ ಜಿ.ಕೆ ಅವರು ಗಾಂಧೀಜಿಯವರ ಭಾವಚಿತ್ರಕ್ಕೆ ಪೂಜೆ ಮಾಡುವುದರಮೂಲಕ ಹಾಗೂ ೪ ನೇ ತರಗತಿಯ ವಿದ್ಯಾರ್ಥಿಗಳಿಂದ ಗಾಂಧೀಜಿಯವರ ನೆಚ್ಚಿನ ಪ್ರಾರ್ಥನೆಯಾದ ರಘುಪತಿ ರಾಘವ ರಾಜಾರಾಮ್ ಹಾಡುವುದರ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಿದರು.
ವಿದ್ಯಾರ್ಥಿಗಳು ಗಾಂಧೀಜಿಯವರ ಜೀವನ ಮತ್ತು ಸಾಧನೆಗಳ ಬಗ್ಗೆ ತಮ್ಮದೇ ಆದ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಹಾಗೂ ನಮ್ಮ ಶಾಲೆಯ ಸಹ ಶಿಕ್ಷಕಿಯರು ಗಾಂಧೀಜಿಯವರ ಬಾಲ್ಯ ಜೀವನದ ಬಗ್ಗೆ ಅವರ ಆದರ್ಶಗಳ ಬಗ್ಗೆ ಮಕ್ಕಳಿಗೆ ತಿಳಿಸಿದರು. ಸಂಸ್ಥೆಯ ಅಧ್ಯಕ್ಷರಾದ ದಾನಪ್ಪ ಜಿ.ಕೆ ಅವರು ಮಾತನಾಡಿ ಗಾಂಧೀಜಿಯವರ ಬಾಲ್ಯ ಜೀವನದ ಕುರಿತು ಅವರ ಆತ್ಮಚರಿತ್ರೆಯಲ್ಲಿರುವ ಅನೇಕ ನೀತಿ ಕಥೆಗಳನ್ನು ಮಕ್ಕಳಿಗೆ ತಿಳಿಸುವುದು ಒಳ್ಳೆಯದೆಂದು ಹೇಳಿದರು ಹಾಗೂ ಸವೆದ ದಾರಿಯಲ್ಲಿ ಹೋಗುವದರಿಂದ ಗುರಿ ಮುಟ್ಟಲಾಗದು ನಿಜವಾದ ದಾರಿಯನ್ನು ಕಂಡುಕೊಂಡು ನಿರ್ಭೀತಿಯಿಂದ ಅದನ್ನು ಅನುಸರಿಸುವದರಲ್ಲಿಯೇ ನಾವು ನಿಜವಾದ ಗುರಿಯನ್ನು ಮುಟ್ಟುತ್ತೇವೆ ಎಂದು ಹೇಳಿದರು. ಇಂತಹ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿ ಮಕ್ಕಳಲ್ಲಿರುವ ಭಾಷಣ ಮಾಡುವ ಪ್ರತಿಭೆಯನ್ನು ಗುರುತಿಸಿ ಅವರಲ್ಲಿ ಉತ್ತಮ ಪ್ರವೃತ್ತಿಯನ್ನು ಬೆಳೆಸಲು ಶಿಕ್ಷಕರು ಪ್ರಯತ್ನಿಸಬೇಕೆಂದು ಸಲಹೆ ನೀಡಿದರು. ಈ ಕಾರ್ಯಕ್ರಮದ ನಿರೂಪಣೆಯನ್ನು ಶಾಲೆಯ ಸಹ ಶಿಕ್ಷಕಿಯಾದ ರಾಧಾ ಪಾತ್ರದ್ ನೆಡೆಸಿಕೊಟ್ಟರು.   

Leave a Reply

Top