ನೂರು ದಿನದ ಸಾಧನೆಯಲ್ಲಿ ಸಾವಿರ ಸಾವಿರ ಸಮಸ್ಯೆ ಮರೆಯದಿರಲಿ

ರಾಜ್ಯ ಕಾಂಗ್ರೆಸ್? ಸಕಾ೯ರ ನೂರು ದಿನ ಪೂರೈಕೆ ಮಾಡಿದ ತಕ್ಷಣವೆ  ಘೋಷಣೆ ಮಾಡಿದ ನೂರಾರು ಯೋಜನೆಗಳಲ್ಲಿ ಅನೇಕ ಯೋಜನೆಯನ್ನು ನೂರು ದಿನದಲ್ಲಿಯೇ ಜಾರಿ ತರಲಾಗಿದೆ ಎಂದು ಹೇಳುತ್ತಿದೆ.  ಆದರೆ, ರಾಜ್ಯದಲ್ಲಿ ಇನ್ನು ಅನೇಕ ಜ್ವಲಂತ ಸಮಸ್ಯೆಗಳಿಗೆ ಕಾಯಕಲ್ಪ ಸಿಗದಂತಾಗಿದೆ. ಹೀಗಾಗಿ ಸಾಧನೆ ಮಾಡುವ ಜೊತೆಗೆ ಪ್ರಾದೇಶಿಕವಾರು ಸಮಸ್ಯೆ ಆಲಿಸಿ ವರದಿ ತಯಾರಿಸಿ ಸೂಕ್ತ ದಾರಿ ಮಾಡಲು ಸಕಾ೯ರ ಮುಂದಾಗಬೇಕಿರುವುದು ಅವಶ್ಯವಾಗಿದೆ.
ರಾಜ್ಯದಲ್ಲಿನ ಬಡ ಕುಟುಂಬಗಳಿಗೆ ಕಡಿಮೆ ದರದಲ್ಲಿ ಆಹಾರ ಧಾನ್ಯ ವಿತರಣೆ ಮಾಡಬೇಕು ಎನ್ನುವ ಸಕಾ೯ರದ ಸದುದ್ದೇಶವೆ ಸರಿ. ಆದರೆ, ಒಂದನ್ನು ಅತ್ಯಂತ ಕಡಿಮೆ ದರದಲ್ಲಿ ನೀಡಿ ಮತ್ತೊಂದನ್ನು ದುಭಾರಿ ದರದಲ್ಲಿ ಖರೀದಿ ಮಾಡಿ ಜೀವನ ಮಟ್ಟವನ್ನು ನಡೆಸಬೇಕಾಗುತ್ತಿದೆ. ಹೀಗಾಗಿ ಕಡಿಮೆ ದರ ಎಂದು ಹೇಳುವುದಕ್ಕಷ್ಟೆ ಯೋಜನೆ  ಸುಲಭವಾಗಿದೆ. ಆದರೆ, ಅಧಿಕ ದರದಲ್ಲಿ ದೊರೆಯುತ್ತಿರುವ ಪ್ರತಿ ವಸ್ತುವಿನ ದರವನ್ನು ಸಕಾ೯ರ ಹೇಳುತ್ತಿಲ್ಲ. ಇದರ ಬೆಲೆ  ಜನ ಸಾಮಾನ್ಯರಿಗೆ  ಬಿಸಿ ತುಪ್ಪದಲ್ಲಿ ಕೈಯನ್ನಿಟ್ಟಂತಿದೆ. ಹೀಗಾಗಿ  ಖರೀದಿ ಮಾಡುವುದು ತುಂಬ ಕಷ್ಟದ ಕೆಲಸ. ಕಡಿಮೆ ದರದಲ್ಲಿ ಅಕ್ಕಿ ರಾಗಿ, ಗೋಧಿ ವಿತರಣೆ ಮಾಡಿದ್ದು ಉತ್ತಮ ಯೋಜನೆ. ಆದರೆ, ಅದರಲ್ಲಿಯೇ ಕೋಟಿ ಕೋಟಿ ಲೆಕ್ಕದಲ್ಲಿ  ಅಕ್ರಮ ನಡೆಯುತ್ತಿರುವುದು ಮಾಧ್ಯಮದಿಂದ ಗೊತ್ತಾರದರೂ  ತನಿಖೆಯ ವೇಳೆ ಅದರ ಸ್ವರೂಪವೇ ಬದಲಾಗಿ ಹೋಗುತ್ತದೆ.
ಯಾವುದೇ ಸಕಾ೯ರವಿರಲಿ ಶಿಕ್ಷಣಕ್ಕೆ ಸಾವಿರಾರು ಕೋಟಿ ಅನುದಾನ ಮೀಸಲಿಡಲಾಗುತ್ತದೆ, ಆದರೆ. ಕೋಟಿ ಕೋಟಿ ಅನುದಾನ ಇಲಾಖೆಯ ಖಾತೆಯಲ್ಲಿ ಕೊಳೆತು ಬಳಿಕ ಮತ್ತೆ ಸಕಾ೯ರಕ್ಕೆ ಆ ಹಣ ವಾಪಾಸಾದ ಅನೇಕ ಉದಾಹರಣೆಗಳಿವೆ. ಈ  ಬಗ್ಗೆ ಯಾರು ಪ್ರಸ್ತಾಪ ಮಾಡದೇ ಇರುವುದು ದುರಂತದ ಸಂಗತಿ.
 ಜಾರಿ ತಂದ ಯೋಜನೆಗಳನ್ನೆ ಸಮಪ೯ಕವಾಗಿ ಬಳಕೆ ಮಾಡಿಕೊಳ್ಳದೆ ಹಳೆ ಯೋಜನೆಗಳಿಗೆ ಹೊಸ ಹೆಸರನ್ನಿಟ್ಟು  ಆಡಳಿತಾವಧಿಯಲ್ಲಿ ತಮ್ಮ ಯೋಜನೆ ಎಂದು ಬೀಗುವ  ಪಕ್ಷದವರೇ ಹೆಚ್ಚಾಗಿದ್ದಾರೆ. ಜಾರಿ ತಂದ ಯೋಜನೆ ಎಷ್ಟು ಸಮಪ೯ಕವಾಗಿ  ನಡೆಯುತ್ತಿದೆ. ಎನ್ನುವುದ ಗಮನ ನೀಡುವುದಂತು ದೂರದ ಮಾತು.
ಯಾವುದೇ ಸಕಾ೯ರ ಆಡಳಿತದ ಚುಕ್ಕಾಣಿ ಹಿಡಿಯಲಿ. ಮೊದಲು  ರಾಜ್ಯದಲ್ಲಿ  ಯುವ ಜನತೆಯ ಶಕ್ತಿ-ಯುಕ್ತಿಯನ್ನು ಬಳಕೆ ಮಾಡಿಕೊಳ್ಳುವುದು ತುಂಬಾ ಅವಶ್ಯವಾಗಿದೆ. ಆದರೆ,  ರಾಜ್ಯದಲ್ಲಿ ಅಂತ ಕೆಲಸವನ್ನು ಯಾವುದೇ ಸಕಾ೯ರ ಮಾಡದೇ ಇರುವುದು ವಿಶಾಧನೀಯ ಸಂಗತಿ. ಬದಲಿಗೆ ನಿರುದ್ಯೋಗ ಯುವಕರಿಗೆ ನಿರುದ್ಯೋಗ ಭತ್ಯೆ ನೀಡಲು ಚಿಂತಿಸಿ  ಯುವ ಜನತೆಯನ್ನು ಮತ್ತಷ್ಟು  ನಿರುದ್ಯೋಗಿಯನ್ನಾಗಿ ಮಾಡುತ್ತಿದೆ. ರಾಜ್ಯ ಮಟ್ಟದಲ್ಲಿ ನೂರು ಸೀಟುಗಳ ಭತಿ೯ ಕರೆದರೆ ಲಕ್ಷಾಂತರ ಯುವಕರು ಅದಕ್ಕೆ ಅಜಿ೯ ಹಾಕಲು ಸಾವಿರಾರು ರುಪಾಯಿ ವ್ಯಯ ಮಾಡುತ್ತಾರೆ,. ಆದರೆ,  ಅವರು ವ್ಯಯ ಮಾಡಿದ ಎಲ್ಲ ಹಣವು ಸಕಾ೯ರದ ಖಜಾನೆಗೆ ಸೇರುತ್ತದೆ. ಆದರೆ, ಅವರಿಗೆ  ಉದ್ಯೋಗ ದೊರೆಯುತ್ತಿಲ್ಲ , ಹೀಗಾಗಿ ಯುವ ಜನತೆಯಲ್ಲಿ ಆಸಕ್ತಿ ಶಕ್ತಿ, ಚಾಣಾಕ್ಷತ ಇದ್ದರೂ,. ಹುದ್ದೆ ಇರದೇ  ಸತ್ತ ಶವಗಳಂತಾಗುವ ಸ್ಥಿತಿ ರಾಜ್ಯದಲ್ಲಿ ಈಗಲೂ ಇದೆ. ಇದು ಭಾರತದ ಭವಿಷ್ಯದ ನಷ್ಟವೇ ಸರಿ.
ಸಕಾ೯ರ ಆಡಳಿತಕ್ಕೆ ಬಂದಾಕ್ಷಣ ಯುಕರಿಗೆ ಕೆಲಸ ನೀಡಲಿ, ಇದರಿಂದ ದುಡಿಯುವ ಶಕ್ತಿ,  ಜೀವನ ಕಟ್ಟು ಯುಕ್ತಿ ಯುವಕರಲ್ಲಿ ಮೂಡುತ್ತದೆ. ಅಲ್ಲದೇ, ಇಂದಿನ ಆಡಂಬರದ ಜೀವನದಲ್ಲಿ ಯುವ ಜನತೆ ಮಾರು ಹೋಗಿ ದುಶ್ಟಚಕ್ಕೆ ಬಲಿಯಾಗುತ್ತಿದ್ದಾರೆ.  ಇದರಿಂದ ಅನೇಕ ಅವಘಡಗಳೇ ನಡೆದಿವೆ. ಕುಟುಂಬವೇ ಯುವಕರ ಚಟಕ್ಕೆ ಸವ೯ ನಾಶವಾಗಿದೆ. ಹೀಗಾಗಿ  ಶಾಲೆಯಲ್ಲಿ ಗುರು ಮಸ್ತಕಕ್ಕೆ ಅಕ್ಷರವನ್ನಾಕಿದರೆ, ಸಕಾ೯ರ ಯುವ ಜನತೆಗೆ ಕೈ ತುಂಬ ಹುದ್ದೆ ನೀಡಿ ದುಡಿದು ತಿನ್ನವು ಕೆಲಸ  ಕಲಿಸಬೇಕಿದೆ. ಅದನ್ನು ಬಿಟ್ಟು ಕಡಿಮೆ ದರದಲ್ಲಿ ಎಲ್ಲವನ್ನು ಕೊಟ್ಟು ನಿರುದ್ಯೋಗಿಯನ್ನಾಗಿ ಮಾಡಿ ಕೇವಲ ಚುನಾವಣೆಯ ಸಂದಭ೯ದಲ್ಲಿ ಯುವಕರು ಓಡಾಡಿ ತಮ್ಮ ಪರ ಮತ ಹಾಕಲಿ ಎಂದು ಅವರನ್ನು ಬಳಕೆಯ ಅಸ್ತ್ರವನ್ನಾಗಿ ಉಪಯೋಗ ಮಾಡಬಾರದು. ಇದರಿಂದ  ಯುವಕನ ಶಕ್ತಿಯನ್ನೆ ನಾಶ ಮಾಡಿದಂತಾಗುತ್ತದೆ.
ಸಕಾ೯ರ ಯೋಜನೆ ಮಾಡುವುದೊಂದೆ ಯೋಚನೆ ಮಾಡುತ್ತದೆ. ಮಾಡಿದ ಯೋಜನೆ ಎಷ್ಟರ ಮಟ್ಟಿಗೆ ಜನ ಸಾಮಾನ್ಯ ವಗ೯ಕ್ಕೆ ತಲುಪುತ್ತಿದೆ. ಎಷ್ಟು ಜನರು ಪ್ರಾಮಾಣಿಕವಾಗಿ ಯೋಜನೆಯ ಲಾಭ ಪಡೆಯುತ್ತಿದ್ದಾರೆ.  ಯೋಜನೆ ಸಾಧಕ-ಭಾದಕಗಳ ಕುರಿತು ಜಾರಿಯಾದ ಬಳಿಕ ಯಾರು ಯೋಚನೆ ಮಾಡುವುದಿಲ್ಲ. ಜೊತೆಗೆ ಯಾವುದೋ ಒಂದು ಸಕಾ೯ರ ಯೋಜನೆಯನ್ನು ಜಾರಿ ತಂದು ಅನುಷ್ಟಾನ ಮಾಡಿದರೆ, ಅಷ್ಟರಲ್ಲಿಯೇ ಮತ್ತೊಂದು ಸಕಾ೯ರ ರಾಜ್ಯದಲ್ಲಿ ಚುಕ್ಕಾಣಿ ಹಿಡಿದು  ದ್ವೇಷ ರಾಜಕಾರಣ ಮಾಡಿ  ಹಳೆ ಸಕಾ೯ರಗಳ ಯೋಜನೆಯನ್ನೇ ತಗೆದು ಹಾಕವುದಂತೂ ಈಗ ಸವೆ೯ ಸಾಮಾನ್ಯವಾಗಿದೆ.  ಈ ಬಗ್ಗೆ ಸಕಾ೯ರದ ಮಟ್ಟದಲ್ಲಿ ಶಾಶ್ವಕ ಒಂದು ವಿಧೇಯಕ ತರುವುದು ಅವಶ್ಯವಾಗಿದೆ.
ಕೇಂದ್ರದಲ್ಲಿ ಸತತ  ಆರು ದಶಕಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್? ಸಕಾ೯ರ ಈಗಲೂ ಹಳ್ಳಿಗಾಡು ಪ್ರದೇಶದಲ್ಲಿ ಆಶ್ರಯ ಮನೆಯನ್ನು ನೀಡಿದ್ದೂ ಬಿಟ್ಟರೆ ಮತ್ತೇನೂ ನೀಡಿಲ್ಲ. ಉಳಿದವೆಲ್ಲವೂ  ಉಳ್ಳವರ ಪಾಲಾಗಿವೆ. ಹಾಗೆಂದ ಮಾತ್ರಕ್ಕೆ ರಾಜ್ಯದಲ್ಲಿ ಈ ಹಿಂದೆ ಆಡಳಿತ ನಡೆಸಿದ ಬಿಜೆಪಿ ಸಕಾ೯ರ ಐದು ವಷ೯ದ ಅವಧಿಯಲ್ಲಿ ರಾಜ್ಯಕ್ಕೆ ಮಾಡಿದ್ದಾದರೂ ಏನು ಎನ್ನುವುದು ರಾಜ್ಯದ ಜನತೆಯ ಮಿಲಿಯನ್? ಡಾಲರ್? ಪ್ರಶ್ನೆ ಕಾಡುತ್ತಿವೆ.
ಹೀಗಾಗಿ  ನೂರು ಸಾಧನೆ ಮಾಡಿ ಬೀಗುವುದಕ್ಕಿಂತ ನೂರಾರು ಸಮಸ್ಯೆಯ ಬಗ್ಗೆ ಕಾಳಜಿ ವಹಿಸುವುದು ಅವಶ್ಯವಾಗಿದೆ.

                                                                ದತ್ತಪ್ಪ ಕಮ್ಮಾರ
                                                                ಮುದ್ದಾಬಳ್ಳಿ
                                                                ದೂರವಾಣಿ -೯೫೯೧೭೦೫೯೫೫
                                                                                                         
     

Please follow and like us:
error