fbpx

’ಪಡಸಾಲೆ’ ಕೇಂದ್ರಕ್ಕೆ ಡಿಸಿ ಆರ್.ಆರ್. ಜನ್ನು ಚಾಲನೆ

 :

ಸಾರ್ವಜನಿಕರ ಸೇವೆಗಾಗಿ ನಗರದ ತಹಸಿಲ್ದಾರರ ಕಛೇರಿ ಕಟ್ಟಡದಲ್ಲಿ ಕಂದಾಯ ಇಲಾಖೆಯಿಂದ ನೂತನವಾಗಿ ಜಾರಿಗೊಳಿಸಲಾದ ಪಡಸಾಲೆ ಯೋಜನೆ ಕೌಂಟರ್‌ಗೆ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಸೋಮವಾರದಂದು ಚಾಲನೆ ನೀಡಿದರು.

  ಪಡಸಾಲೆ ಯೋಜನೆಯಲ್ಲಿ ಒಂದೇ ಸೂರಿನಡಿ ಕಂದಾಯ ಇಲಾಖೆಯ ವಿವಿಧ ಯೋಜನೆಗಳಾದ ಪಹಣಿ ವಿತರಣೆ, ಹಕ್ಕು ಬದಲಾವಣೆಗೆ ಅರ್ಜಿ ಸ್ವೀಕೃತಿ, ಅಟಲ್ ಜನಸ್ನೇಹಿ ಕೇಂದ್ರ, ಆಧಾರ್ ನೊಂದಣಿ ಕೇಂದ್ರ, ಸಕಾಲ ಸಹಾಯವಾಣಿ ಕೇಂದ್ರಗಳ ಸೇವೆಗಳನ್ನು ಪಡೆಯಬಹುದಾಗಿದೆ.  ಪಡಸಾಲೆ ಕೇಂದ್ರವು ಸಾರ್ವಜನಿಕರಿಗೆ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ, ಸಾರ್ವಜನಿಕರ ಅರ್ಜಿಗಳನ್ನು ಭರ್ತಿಮಾಡಲು ಬ್ಯಾಂಕ್ ಮಾದರಿಯಲ್ಲಿ ರೈಟಿಂಗ್ ಪ್ಯಾಡ್, ಮೊಬೈಲ್ ಚಾರ್ಜ್‌ರ್ ವ್ಯವಸ್ಥೆ ಹಾಗೂ ಎಲ್‌ಇಡಿ ಟಿವಿ ಮುಖಾಂತರ ಇಲಾಖೆಯ ವಿವಿಧ ಯೋಜನೆಗಳ ಮಾಹಿತಿಯನ್ನು ಪ್ರಚುರಪಡಿಸುವ ವ್ಯವಸ್ಥೆ ಒಳಗೊಂಡಿದೆ.     
      ಅಪರ ಜಿಲ್ಲಾಧಿಕಾರಿ ಸುರೇಶ ಇಟ್ನಾಳ್, ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ, ಕೊಪ್ಪಳ ತಹಶೀಲ್ದಾರ ಪುಟ್ಟರಾಮಯ್ಯ,  ಕಾರ್ಯಾಲಯದ ಸಿಬ್ಬಂದಿ ಹಾಗೂ ಇತರರು ಇದ್ದರು. 
Please follow and like us:
error

Leave a Reply

error: Content is protected !!