You are here
Home > Koppal News > ರಾಷ್ಟ್ರಮಟ್ಟದ ಹಿಂದಿ ವಿಚಾರ ಸಂಕಿರಣ

ರಾಷ್ಟ್ರಮಟ್ಟದ ಹಿಂದಿ ವಿಚಾರ ಸಂಕಿರಣ

ಕೊಪ್ಪಳ: ಶ್ರೀ ಗವಿಸಿದ್ಧೇಶ್ವರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಹಿಂದಿ ವಿಭಾಗದಿಂದ ಮಾರ್ಚ ೬ ಮತ್ತು ೭ ಎರಡು ದಿನಗಳ ಕಾಲ ’ಹಿಂದಿ ಮತ್ತು ಕನ್ನಡ ದಲಿತ ಸಾಹಿತ್ಯದಲ್ಲಿ ಸಾಮಾಜಿಕ ಚಿಂತನೆ’ ಎಂಬ ವಿಷಯದ ಮೇಲೆ ರಾಷ್ಟ್ರಮಟ್ಟದ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ದಿನಾಂಕ ೦೬.೦೩.೨೦೧೨ರಂದು ನಗರಸಭೆ ಮಾಜಿ ಅಧ್ಯಕ್ಷರಾದ   ಮುದಿಯಪ್ಪ ಕವಲೂರ ಅವರು ಸಂಕಿರಣಕ್ಕೆ ಚಾಲನೆ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ಎಸ್. ಎಲ್. ಮಾಲಿಪಾಟೀಲ್ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣವನ್ನು ಡಾ. ವಿ. ಕೃಷ್ಣ. ಕೇಂದ್ರೀಯ ವಿಶ್ವವಿದ್ಯಾಲಯ ಹೈದ್ರಾಬಾದ್ ಇವರು ಮಾಡಲಿದ್ದಾರೆ. ಈ ವಿಚಾರ ಸಂಕಿರಣದಲ್ಲಿ ಡಾ. ಸುರೇಶ ಮುಳೆ, ಪ್ರೊ. ಧನ್ಯಕುಮಾರ ಬಿರಾಜದಾರ, ಡಾ. ಮಾರುತಿ ಸಿಂಧೆ, ಡಾ. ಬಸವರಾಜ ಬಾರಕೇರ, ಡಾ. ರಾಜಕುಮಾರ ನಾಯಕ, ಡಾ. ಎಸ್. ಎನ್ ಶಿವರಡ್ಡಿ, ಡಾ. ಬಾಲಚಂದ್ರ ತೊಂಡಿಹಾಳ, ಡಾ. ಟಿ. ಎಸ್. ಪವಾರ, ಶ್ರೀ ಸತೀಶಕುಮಾರ ಶ್ರೀವಾಸ್ತವ್, ಶ್ರೀ ವಿಠ್ಠಪ್ಪ ಗೋರಂಟ್ಲಿ ಮುಂತಾದವರು ಎರಡು ದಿನಗಳ ಕಾಲ ಈ ರಾಷ್ಟ್ರಮಟ್ಟದ ವಿಚಾರ ಸಂಕಿರಣದಲ್ಲಿ ವಿವಿಧ ವಿಷಯಗಳ ಮೇಲೆ ಉಪನ್ಯಾಸವನ್ನು ನೀಡಲಿದ್ದಾರೆಂದು ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ. ದಯಾನಂದ ಸಾಳುಂಕೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Top