fbpx

ಉಪ್ಪಾರ ಸಮುದಾಯ ಭವನಕ್ಕೆ ೨೦ ಲಕ್ಷ ರೂ ಅನುದಾನದ ಭರವಸೆ-ಸಚಿವ ತಂಗಡಗಿ.

ಕಾರಟಗಿ- 21- ಸೌಲಭ್ಯ ಸಣ್ಣಪುಟ್ಟ ಸಮುದಾಯಗಳನ್ನು ಗುರುತಿಸಿ ಅವರಿಗೆ ಸಾಮಾಜಿಕ ನ್ಯಾಯ ಕೊಡಿಸುವ ಮುಖೇನ, ಸಮಾಜ ಕಟ್ಟುವ ಕೆಲಸವನ್ನು ರಾಜ್ಯಸರಕಾರ ಮಾಡುತ್ತಿದೆ ಎಂದು ಸಣ್ಣ ನೀರಾವರಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಹೇಳಿದರು. ಅವರು ಗಂಗಾವತಿ ತಾಲೂಕಿನ ಕಾರಟಗಿ ಪಟ್ಟಣದಲ್ಲಿ ನವಲಿ ರಸ್ತೆಯಲ್ಲಿರುವ ಶ್ರೀಕೆರೆಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಕನಕಗಿರಿ ವಿಧಾನಸಭಾ ಕ್ಷೇತ್ರದ ಉಪ್ಪಾರ ಸಮಾಜದಿಂದ ಆಯೋಜಿಸಿದ್ದ ಕೊಪ್ಪಳ ಜಿಲ್ಲೆಯ ಉಪ್ಪಾರ ಜನಾಂಗದ ಜನಪ್ರತಿನಿಧಿಗಳಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ಸಿಎಂ ಸಿದ್ದರಾಮಯ್ಯ ಅವರು ಭಗೀರಥ ಜಯಂತಿ ಸರಕಾರಿ ಕಾರ್ಯಕ್ರಮವನ್ನಾಗಿ ಆಚರಿಸುವ ಮುಖೇನ ಹಿಂದುಳಿದ ಉಪ್ಪಾರ ಸಮಾಜವನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಿದ್ದಾರೆ, ಸಮಾಜದ ಶಾಸಕ ಪಟ್ಟರಂಗ ಶೆಟ್ಟಿ ಅವರನ್ನು ರಾಜಕೀಯ ಕಾರ್ಯದರ್ಶಿಯನ್ನಾಗಿ ಮಾಡುವ ಮೂಲಕ ನ್ಯಾಯ ಒದಗಿಸಿದ್ದಾರೆ ಈ ಜನಾಂಗವು ಎಲ್ಲಾ ಸಮಾಜಗಳೊಂದಿಗೆ ಅತ್ಯುತ್ತಮ ಒಡನಾಟ ಹೊಂದಿದ್ದು, ಶೈಕ್ಷಣಿಕವಾಗಿ, ರಾಜಕೀಯವಾಗಿ ಸಮಾಜ ಬೆಳೆಯಬೇಕಿದೆ. ನಿರಂತರ ಸಂಘಟಿತ ಕಾರ್ಯಕ್ರಮಗಳ ಮೂಲಕ ಸಮಾಜ ಅತ್ಯುತ್ತಮ ಸ್ಥಾನಮಾನ ಗಳಿಸಿಕೊಳ್ಳುವಂತಾಗಲಿ ಎಂದು ಕಿವಿಮಾತು ಹೇಳಿದರು. ಸಮಾಜಕ್ಕೆ ಸೂಕ್ತ ಮೀಸಲಾತಿ ದೊರಕಿಸಿ ಕೊಡುವಲ್ಲಿ ಸಿಎಂ ಅವರೊಂದಿಗೆ ಮಾತುಕತೆ ನಡೆಸಲಿದ್ದೇನೆ, ಅವಕಾಶ ಸಿಕ್ಕಲ್ಲಿ ಸಮಾಜಕ್ಕೆ ಯಾವುದೇ ಪಂಚಾಯಿತಿಯ ಅಧ್ಯಕ್ಷ ಸ್ಥಾನ ಕೊಡಿಸಲು ಬದ್ಧನಾಗಿದ್ದೇನೆ, ಸಾತ್ವೀಕ ಸ್ವಭಾವದ ಉಪ್ಪಾರ ಸಮಾಜ ನಾಯಕತ್ವ ಗುಣ ಬೆಳೆಸಿಕೊಂಡು ಮುಂಚೂಣಿಗೆ ಬರಲಿ ಎಂದು ಸಚಿವ ಶಿವರಾಜ್ ತಂಗಡಗಿ ಆಶಾಭಾವನೆ ವ್ಯಕ್ತಪಡಿಸಿದರು.  ಉಪ್ಪಾರ ಜನಾಂಗದ ರಾಜ್ಯ ಮಹಿಳಾ ಘಟಕದ ಅಧ್ಯಕ್ಷರಾದ ಕಮಲಮ್ಮ ಮಾತನಾಡಿ, ಮಹಿಳೆಯರು ಸ್ವಾವಲಂಬಿಗಳಾಗಿ ಬದುಕುವ ಸಾಮರ್ಥ್ಯ ಬೆಳಸಿಕೊಳ್ಳಬೇಕು, ಶೋಷಣ ಮತ್ತು ಅನ್ಯಾಯದ ವಿರುದ್ಧ ಪ್ರತಿಭಟನೆ ಮಾಡುವ ನಿಲುವು ಬೆಳೆಸಿಕೊಳ್ಳಬೇಕು, ಕೀಳರಿಮೆ ತೊರೆದು ಅತ್ಯಂತ ಸಮರ್ಥವಾಗಿ ಜೀವನ ನಿರ್ವಹಣೆ ಕಲೆ ರೂಢಿಸಿಕೊಂಡು ರಾಜಕೀಯ ಸ್ಥಾನಮಾನ ಗಳಿಸುವಲ್ಲಿ ಸಫಲರಾಗಬೇಕು ಎಂದು ಸಲಹೆ ನೀಡಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಅಮರೇಶ್ ಕುಳಗಿ, ಮಾತನಾಡಿ, ಸತ್ವ ಸಮಾಜ ಯಾವಾಗಲು ಗಟ್ಟಿ ನಿರ್ಧಾರಗಳನ್ನು ಹೊಂದಿರುತ್ತದೆ ಉಪ್ಪಾರ ಜನಾಂಗ ಇದಕ್ಕೆ ಪೂರಕವೆಂಬಂತೆ ಉಪ್ಪಾರ ಸಮಾಜ ಉತ್ತಮ ಸಂಸ್ಕಾರ, ಸಂಸ್ಕೃತಿ ಆಚಾರವಿಚಾರಗಳನ್ನು ಹೊಂದಿದ್ದು ಸದೃಢತೆಯ ಸಂಕೇತವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಸಮಾಜದ ಶ್ರೀಗಳಾದ ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.  ಈ ಸಂದರ್ಭದಲ್ಲಿ ಹಳ್ಳಿ ಹೈದಾ ಪ್ಯಾಟಿಗೆ ಬಂದ ಕಾರ್ಯಕ್ರಮ ವಿಜೇತ ಶಿವಕುಮಾರ್ ಉಪ್ಪಾರ್, ಮಾಜಿ ಸಚಿವ ಹಾಗೂ ಕೈಮಗ್ಗ ನಿಗಮ ಮಂಡಳಿ ಅಧ್ಯಕ್ಷರಾದ ಮಲ್ಲಿಕಾರ್ಜುನ ನಾಗಪ್ಪ,  ಗಂಗಾವತಿ ಪುರಸಭೆ ಮಾಜಿ ಅಧ್ಯಕ್ಷರಾದ ಅಮರಜ್ಯೋತಿ ದುರುಗಪ್ಪ, ಜಿಲ್ಲಾ ಉಪ್ಪಾರ ಕಾರ್ಯಾಧ್ಯಕ್ಷ ಮರ್ದಾನಪ್ಪ ಬಿಸರಳ್ಳಿ, ಮುಖಂಡರಾದ ಶಿವಣ್ಣ ಉಪ್ಪಾರ, ನರಸಪ್ಪ ಅಮರಜ್ಯೋತಿ, ಕಟ್ಟಿಮನಿ ಯಂಕಪ್ಪ, ಕ

ನಕಗಿರಿ ವಿ. ಕ್ಷೇತ್ರದ ಉಪ್ಪಾರ ಸಮಾಜದ ಅಧ್ಯಕ್ಷ ಯಂಕೋಬ ಉಪ್ಪಾರ, ಕಾರ್ಯದರ್ಶಿ ಆದಾಪುರ ಹನುಮಂತಪ್ಪ, ಕಾರಟಗಿ ಅಧ್ಯಕ್ಷ ಶೇಷಗಿರಿ ವಕೀಲರು, ಆದಾಪುರ ಗೋವಿಂದಪ್ಪ, ಹುಲಿಗಿ ಗೋವಿಂದಪ್ಪ, ವಾಣಿಜ್ಯೋದ್ಯಮಿಗಳಾದ ಜಿ.ಶ್ರೀಧರ, ಅಯ್ಯಪ್ಪ ಕಾರಟಗಿ, ನೌಕರರ ಸಂಘದ ತಾಲೂಕಾ ಅಧ್ಯಕ್ಷ ಕುಪ್ಪಣ್ಣ ಮಿಣಜಿಗಿ, ಪಿಕಾರ್ಡ್ ಬ್ಯಾಂಕಿನ ಅಧ್ಯಕ್ಷ ದೊಡ್ಡಪ್ಪ ದೇಸಾಯಿ, ಜಿ.ಪಂ.ಸದಸ್ಯ ವಿರೇಶ್ ಸಾಲೋಣಿ, ಹಾಲಮತ ಸಮಾಜದ ಪರಸಪ್ಪ ಪರಕಿ, ಶಿವರೆಡ್ಡಿ ನಾಯಕ ಸೇರಿದಂತೆ ಇತರರಿದ್ದರು. ವೇದಿಕೆಯಲ್ಲಿ ಪತ್ರಕರ್ತ ನಾಗರಾಜ್ ಇಂಗಳಗಿ, ಹುಲಿಗಿ ಯಮನೂರಪ್ಪ, ಹುಲಿಗಿ ಗೋವಿಂದಪ್ಪ, ಯಂಕೋಬ ಮೇಲ್‌ಸಕ್ರಿ ಮತ್ತು ಹನುಮಂತಪ್ಪ ಆದಾಪುರ ಇವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಸಮಾಜದ ಮುಖಂಡರಾದ ಅಮರಜ್ಯೋತಿ ನರಸಪ್ಪ ನೇತೃತ್ವದಲ್ಲಿ  ಸಚಿವ ಶಿವರಾಜ್ ತಂಗಡಗಿ ಅವರಿಗೆ ಬೃಹತ್‌ಗಾತ್ರದ ಹೂಮಾಲೆ ಹಾಕುವ ಮೂಲಕ ಸಮಾಜ ಬಾಂಧವರು ಸನ್ಮಾನಿಸಿದರು. ನೂರಕ್ಕೂ ಹೆಚ್ಚು ಸಮಾಜ ಬಾಂಧವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

Please follow and like us:
error

Leave a Reply

error: Content is protected !!