ಟಣಕನಕಲ್ : ಆಕಾಶವಾಣಿ ನೇರ ವೀಕ್ಷಕ ವಿವರಣೆ

 ಕೊಪ್ಪಳ ಸಮೀಪದ ಟಣಕನಕಲ್ ಗ್ರಾಮದ ಶ್ರೀ ವೀರೇಶ್ವರ ಮಠದಲ್ಲಿ ಇದೇ ಭಾನುವಾರ ದಿನಾಂಕ ೧೯ ರಂದು ನಡೆಯಲಿರುವ ಧರ್ಮ ಸಂಸ್ಕೃತಿ ಉತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮಗಳ ನೇರ ವೀಕ್ಷಕ ವಿವರಣೆಯು, ಹೊಸಪೇಟೆ ಆಕಾಶವಾಣಿ ಎಫ್‌ಎಂ. ಕೇಂದ್ರದಿಂದ ಪ್ರಸಾರವಾಗಲಿದೆ. 
       ಭಾನುವಾರ ಬೆಳಿಗ್ಗೆ ೧೧.೦೦ ಗಂಟೆಯಿಂದ ೧೨ ಗಂಟೆ ೩೦ ನಿಮಿಷದವರೆಗೆ ಹಾಗೂ ಮಧ್ಯಾಹ್ನ ೧ ಗಂಟೆಯಿಂದ ೧. ೪೦ ರವರೆಗೆ ಬಿತ್ತರವಾಗಲಿರುವ ಈ ಕಾರ್ಯಕ್ರಮದ ನೇರ ವೀಕ್ಷಕ ವಿವರಣೆಯನ್ನು, ಆಸಕ್ತರು ಕಂಪನಾಂಕ ೧೦೦.೫ ಮೆಗಾಹರ್ಟ್ಸ್‌ಗಳಲ್ಲಿ ಕೇಳಬಹುದು ಎಂದು ಆಕಾಶವಾಣಿ ಸಹಾಯಕ ನಿರ್ದೇಶಕ ಡಾ. ಎ.ವಿ. ಪಾಟೀಲ್ ತಿಳಿಸಿದ್ದಾರೆ.
Please follow and like us:
error