ನೈಜ ಇತಿಹಾಸ ರೂಪಿಸುವರೇ ಶಿಕ್ಷಕರು ಸಂಗಮೇಶ ಬಾದವಾಡಗಿ.

ಕೊಪ್ಪಳ, ಸೆ.೧೩ ಗುರುಗಳನ್ನು ಪೂಜ್ಯ ಭಾವನೆಯಿಂದ ಕಂಡು ಅವರ ಆದರ್ಶ ಹಾಗೂ ತತ್ವಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಸಾರ್ಥಕ ಜೀವನವನನು ರೂಪಿಸಿಕೊಳ್ಳಲು  ತಾಲೂಕಿನ ಇರಕಲ್‌ಗಡಾದ ಸರಕಾರಿ ಪ.ಪೂ.ಕಾಲೇಜಿನ ಆಡಳಿತ ಮಂಡಳಿಯ ಉಪಾಧ್ಯಕ್ಷ ಸಂಗಮೇಶ ಬಾದವಾಡಗಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
    ತಾಲೂಕಿನ ಇರಕಲ್‌ಗಡಾ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ ಶಿಕ್ಷಕರ ದಿನಾಚರಣೆ ಅಂಗವಾಗಿ ಜರುಗಿದ ಪ್ರತಿಭಾ ಪುರಸ್ಕಾರ, ಗುರುವಂದನೆ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದ ಅವರು, ಸತತ ಪರಿಶ್ರಮದಿಂದ ಅಧ್ಯಯನ ಗೈದು ಮಾರ್ಗದರ್ಶಕರಾದ ಉಪನ್ಯಾಸಕ ಬಂಧುಗಳಿಗೆ ಪ್ರತಿ ವರ್ಷ ಸನ್ಮಾನವನ್ನು ಊರಿನ ಜನರು ಮಾಡುತ್ತಿರುವುದು ಸ್ವಾಗತಾರ್ಹ ಎಂದ ಅವರು, ಜಿಲ್ಲೆಯಲ್ಲಿಯೇ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನವನ್ನು ತಂದು ಕೊಟ್ಟ ಕೀರ್ತಿ ಉಪನ್ಯಾಸಕರಿಗೆ ಸಲ್ಲುತದೆ ಎಂದರು.
ಅತಿಥಿ ಉಪನ್ಯಾಸಕರಾಗಿ ಆಗಮಿಸಿದ್ದ ನಿವೃತ್ತ ಪ್ರಾಚಾರ್ಯ ಎಸ್.ಬಿ. ರಾಜೂರು ಮತನಾಡುತ್ತಾ, ಡಾ. ರಾಧಾಕೃಷ್ಣನ್‌ರವರ ಜನ್ಮದಿನದಂದೂ ದೇಶದಾಧ್ಯಂತ ಶಿಕ್ಷಕರ ದಿನಾಚರಣೆಯನ್ನು ಆಚರಿಸುವ ಮೂಲಕ  ಶಿಕ್
ಗ್ರಾಮದ ಹಿರಿಯರು ಹಾಗೂ ದಾನಿಗಳಾದ ವೀರಬಸಪ್ಪ ಪಟ್ಟಣಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳೇಲ್ಲಾರೂ ಉತ್ತಮ ಭವಿಷ್ಯ ರೂಪಿಸಿಕೊಂಡು ಸತ್ಪ್ರಜೆಗಳಾಗಿ ಬಾಳಿ ಊರಿನ ಹಾಗೂ ಕಾಲೇಜಿನ ಕೀರ್ತಿಯನ್ನು ತರಬೇಕೆಂದು  ವಿದ್ಯಾರ್ಥಿಗಳಿಗೆ ಉಪದೇಶಿಸಿದರು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ಪ್ರಾಚಾರ್ಯ ಎ.ಜಿ. ಶರಣಪ್ಪ ವಹಿಸಿ ಮಾತನಾಡಿದರು. ದಾನಿಗಳಾದ ಮಹಾಂತೇಶ ಪಾಟೀಲ್, ರವಿ ಪಟ್ಟಣಶೆಟ್ಟಿ, ಸುದೇಶ ಪಟ್ಟಣಶೆಟ್ಟಿ, ಗವಿಸಿದ್ದಪ್ಪ ಮನ್ನಾಪುರ, ಜಿ.ಪಂ. ಸದಸ್ಯೆ ಕಸ್ತೂರಮ್ಮ ಪಾಟೀಲ್,  ಗ್ರಾ.ಪಂ. ಉಪಾಧ್ಯಕ್ಷ ಗಂಗಣ್ಣ, ಲಿಂಗಯ್ಯ ಕಲ್ಮಠ, ವೀರಭಸಪ್ಪ ಶೆಟ್ಟರ್, ತೋಟಪ್ಪ, ಮಹಾಂತೇಶ, ಸಂಗಣ್ಣ ಇನ್ನಿತರರು ಉಪಸ್ಥಿತರಿದ್ದರು. 
ರುದ್ರಪ್ಪ ಪ್ರಾರ್ಥನೆ ಗೈದರು. ಉಪನ್ಯಾಸ ಆರ್.ಎಸ್. ಗಣಾಚಾರ್ ಪ್ರಾಸ್ಥಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶರಣಪ್ಪ ತೋಣಸಿಹಾಳ ಹಾಗೂ ಜೀಮಿಯಾ ಸಾಬ್ ನಿರೂಪಿಸಿದರು. ಜೆ.ಪಿ. ಬೆನ್ನೂರು ವಂದಿಸಿದರು.

ಷಕರಿಗೆ ಕೂಡುವ ಗೌರವ ಶ್ಲಾಘನೀಯ. ಪ್ರತಿಭಾ ಪುರಸ್ಕಾರ ಹಾಗೂ ಶಿಕ್ಷಕರಿಗೆ ಕೂಡುವ ಗೌರವ ಅವರ ಕೆಲಸದ ಜವಬ್ದಾರಿಯನ್ನು ಇನ್ನೂ ಹೆಚ್ಚಿಸುತ್ತದೆ ಎಂದರು.

Please follow and like us:
error