ರೈತರಿಗೆ ಹರೇಕೃಷ್ಣ ಕಂಪನಿಯಿಂದ ಯಾವುದೇ ತೊಂದರೆ ಇಲ್ಲ.

ಕೊಪ್ಪಳ,ಆ.೦೭: ತಾಲೂಕಿನ ಹಿರೇಬಗನಾಳ ಗ್ರಾಮದ ಹೊರ ವಲಯದಲ್ಲಿರುವ ಹರೇಕೃಷ್ಣ ಮೆಟಾಲಿಕ್ಸ್ ಪ್ರೈ.ಲಿ. ಕಂಪನಿ ನಡೆಸಲು ಯಾವುದೇ ರೀತಿಯ ತೊಂದರೆ ನೀಡಬಾರದೆಂದು ಆಗ್ರಹಿಸಿ ಶುಕ್ರವಾರದಂದು ಹಿರೇಬಗನಾಳ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಭೇಟಿ ಮಾಡಿ ಮನವಿ ಸಲ್ಲಿಸಿ ಈ ಕಂಪನಿಯಿಂದ ರೈತರಿಗೆ ಯಾವುದೇ ರೀತಿಯ ತೊಂದರೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿ ರೈತರ ಹೆಸರಿನಲ್ಲಿ ಅನಾವಶ್ಯಕವಾಗಿ ಗೊಂದಲ ಸೃಷ್ಠಿಸುವವರ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿಗೆ ಒತ್ತಾಯಿಸಿದ್ದಾರೆ. ಕಂಪನಿಯಿಂದ ಸುತ್ತಮುತ್ತಲಿನ ಜಮೀನುಗಳಿಗೆ ತೊಂದರೆ ಉಂಟಾಗಿಲ್ಲ. ಒಂದು ವೇಳೆ ಉಂಟಾಗಿದ್ದಲ್ಲಿ ಆ ವರ್ಷ ಮತ್ತು ಪ್ರತಿವರ್ಷ ಜಮೀನಿನಲ್ಲಿ ಇರುವ ಬೆಳೆಗೆ ತಕ್ಕಂತೆ ಪರಿಹಾರ ಪಡೆಯಲಿದ್ದ ಕಾರಣ ಈ ಭಾಗದ ಎಲ್ಲಾ ರೈತರಿಗೆ ಈ ಕಂಪನಿಯಿಂದ ಅನುಕೂಲತೆ ಒದಗಿಸಿದೆ. ಯಾವುದೇ ತೊಂದರೆ ಆಗಿಲ್ಲ ಎಂದು ಸ್ಪಷ್ಟಪಡಿಸಿ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಪತ್ರ ಅರ್ಪಿಸಿ ಕಾರ್ಖಾನೆ ವಿರುದ್ಧ ಅನಾವಶ್ಯಕಗೊಂದಲ ಸೃಷ್ಠಿ ಮಾಡುವವರ ಬಗ್ಗೆ ಕಿವಿಗೊಡದಂತೆ ಮನವಿ ಮಾಡಿಕೊಂಡಿದ್ದಾರೆ.ಕಂಪನಿಯಲ್ಲಿ  ಸುತ್ತಮುತ್ತಲಿನ ಗ್ರಾಮಸ್ಥರಿಗೆ ಯೋಗ್ಯತೆಗೆ ತಕ್ಕಂತೆ ಕೆಲಸ ನೀಡಿದ್ದಾರೆ. ಮತ್ತು ಗ್ರಾಮಗಳಿಗೆ ಏನೇ ಸೌಲಭ್ಯಗಳನ್ನು ಕೇಳಿದ್ದರು. ಅದನ್ನು ಒದಗಿಸಿದ್ದಾರೆ. ಗ್ರಾಮದ ಜಾತ್ರೆಗೆ ಧನಸಹಾಯ ನೀಡುತ್ತಾ ಬಂದಿದ್ದಾರೆ ಹಾಗೂ ಇನ್ನೊಂದು ಪ್ರಮುಖ ವಿಷಯವೆಂದರೆ ಪ್ರಸಕ್ತ ವರ್ಷದಲ್ಲಿ ಗ್ರಾಮ ಪ್ರದೇಶದಲ್ಲಿ ಮಳೆ ಬಂದಿಲ್ಲ ಆಗಾಗಿ ನಾವು ಸಂಪೂರ್ಣ ಮಳೆ ಆಧಾರಿತ ಕೃಷಿಯನ್ನು ಹೊಂದಿದ್ದು, ಬರಗಾಲ ಉಂಟಾಗಿದೆ. ಇದರಿಂದಾಗಿ ಈ ಕಂಪನಿಯಲ್ಲಿ ನಾವು ಕೆಲಸ ಕಾರ್ಯ ಮಾಡಿಕೊಂಡು ಹೋಗಲು ಈ ಕಂಪನಿಯು ಆಧಾರವಾಗಿದೆ. ಆದ ಕಾರಣ ಒಬ್ಬ ರೈತನಿಗೆ ತೊಂದರೆ ಆಗಿದೆ ಎಂದರೆ ಇನ್ನುಳಿದ ರೈತರಿಗೆ ಕಂಪನಿಯ ಜೊತೆಗೆ ಹೊಂದಿಕೊಂಡಿದ್ದಾರೆ. ಮತ್ತು ಕಂಪನಿಯು ರೈತರಿಗೆ ಸ್ಪಂದಿಸುತ್ತಿದೆ.  ಆದ ಕಾರಣ ಈ ಕಂಪನಿ ನಡೆಸಲು ಯಾವುದೇ ತೊಂದರೆಗಳನ್ನು ನೀಡಬಾರದೆಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಗ್ರಾ.ಪಂ.ಸದಸ್ಯರಾದ ಗವಿಸಿದ್ದಪ್ಪ ಹೂಗಾರ, ಶಿವಪುತ್ರಪ್ಪ ಪಲ್ಲೇದ್ ಅಲ್ಲದೇ ಅಲ್ಲಾನಗರದ ಕುಮಾರ ಮಜ್ಜಿಗಿ, ಗವಿಸಿದ್ದಪ್ಪ ಮಜ್ಜಿಗಿ, ಸುರೇಶ ಮಜ್ಜಿಗಿ, ಮಂಜುನಾಥ ಮಜ್ಜಿಗಿ, ಮುದುಕಪ್ಪ ಮಜ್ಜಿಗಿ, ರಾಯಪ್ಪ ಹೂಗಾರ, ಕರಿಯಪ್ಪ, ಹನುಮಂತಪ್ಪ ಮೇಟಿ, ಲಿಂಗರಾಜ ಸರದಾರ, ಗವಿಸಿದ್ದಪ್ಪ, ಮಂಜುನಾಥ ಡಾಣಿ, ದೇವಪ್ಪ ಪಲ್ಲೇದ್, ಮರಿಯಪ್ಪ, ವೆಂಕಟೇಶ ಪೂಜಾರ, ಈಶಪ್ಪ ಪಲ್ಲೇದ್, ಅಣ್ಣಪ್ಪ ಹಾದಿಮನಿ, ಆರ್.ರವೀಂದ್ರ, ಯಮನೂರ ಸೇರಿದಂತೆ ಅನೇಕ ಜನ ರೈತರು ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.
Please follow and like us:
error

Related posts

Leave a Comment