ಬಾಲಕಾರ್ಮಿಕರ ನಿರ್ಮೂಲನೆ ಪದ್ದತಿಯನ್ನು ಸಂಪೂರ್ಣವಾಗಿ ಹೊಗಲಾಡಿಸಿ.

ಕೊಪ್ಪಳ ತಾಲೂಕಿನ ಕೊಡದಾಳ ಗ್ರಾಮದ ಮಾರುತಿ ದೇವಸ್ಥಾನದಲ್ಲಿ ಹೆಚ್.ಎಮ್.ಕ್ಲಾಜ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಕಂಪನಿಯ ವತಿಯಿಂದ ಬಾಲಕಾರ್ಮಿಕ ಪದ್ದತಿ ನಿರ್ಮೂಲನೆ ವಿಷಯ ಕುರಿತು. ಬಿಜೋತ್ಪಾದಕರ ಸಭೆಯನ್ನು ಏರ್ಪಡಿಸಲಾಗಿತ್ತು. ಮುಖ್ಯ ಅತಿಥಿಗಳಾಗಿ ವೆಂಕಪ್ಪ ಅತ್ತಾರ ಕೃಷಿ ಅಧಿಕಾರಿಗಳು ರೈತ ಸಂಪರ್ಕ ಕೇಂದ್ರ ಮಂಗಳೂರು ಇವರು ಆಗಮಿಸಿದ್ದರು. ಹಾಗೂ ಕಂಪನಿಯ ಅಧಿಕಾರಿಗಳು ಆರ್.ಜಿ ರಾಜು ದಕ್ಷಿಣ ಭಾರತದ ಪ್ರೋಡೇಕ್ಷನ್ ಮ್ಯಾನೇಜರ್, ಮತ್ತು ಶೇಖರ ಎ ಹಿರೇಮಠ, ನೆಟವರ್ಕ ಸುಪ್ರೆವೈಸರ್ ರಮೇಶ ಬಿ ಕಡೂರ, ಚನ್ನಪ್ಪ ಎಸ್ ಕೊಡಿಗದ್ದಿ, ಹಾಗೂ ವೀರಭದ್ರೇಶ ಪವಾಡರ, ಇವರುಗಳು ಭಾಗವಹಿಸಿದ್ದರು.
    ಮುಖ್ಯ ಅಥಿಗಳು ಮಾತನಾಡಿ ೧೬ ವರ್ಷದ ಒಳಗಿನ ಮಕ್ಕಳನ್ನು ಹೊಲದ ಕೆಲಸಗಳಲ್ಲಿ ತೊಡಗಿಸಿಕೊಳ್ಳಬಾರದು ಎಂದು ಸರಕಾರಿ ಶಾಲೆಗೆ ಸೇರಿಸಿ ವಿದ್ಯಾವಂತರನ್ನಾಗಿ ಮಾಡಿ ಮಕ್ಕಳಿಗಾಗಿ ಆಸ್ತಿ ಮಾಡಬೇಡಿ ದೇಶಕ್ಕಾಗಿ ಉತ್ತಮ ನಾಗರಿಕರನ್ನಾಗಿ ಮಾಡಿ ಎಂದು ತಿಳಿಸಿದರು. ಮತ್ತು ಕಂಪನಿಯ ಅಧಿಕಾರಿಗಳು ಬಿಜೋತ್ಪಾದನೆಯ ಪ್ಲಾಟಿನಲ್ಲಿ ಬಾಲಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಳ್ಳಬಾರದೆಂದು ನಾಮ ಫಲಕವನ್ನು ಹಾಕಲಾಗಿದೆ. ಮತ್ತು ಏಚ್ಚರಿಕೆ ಪತ್ರಗಳನ್ನು ನೀಡಲಾಗಿದೆ. ಎಂದು ತಿಳಿಸಿದರು. 

Leave a Reply