ನಂಜನಗೂಡಿನಲ್ಲಿ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ಎಲ್ಲ ಜಿಲ್ಲೆಗಳಿಗೆ ವಿಸ್ತರಣೆ.

ಕೊಪ್ಪಳ ಅ. ೧೨ (ಕ ವಾ) ಮೈಸೂರು ಜಿಲ್ಲಾಡಳಿತ ಸಾಮಾಜಿಕ ಪರಿವರ್ತನೆಗಾಗಿ ಹಾಗೂ ಸರಳ ವಿವಾಹದ ಬಗ್ಗೆ ಜನಜಾಗೃತಿ ಮೂಡಿಸಲು ಪ್ರತಿಷ್ಠಿತ ಸಂಘ ಸಂಸ್ಥೆಗಳ ಪ್ರಾಯೋಜಕತ್ವದಡಿ ಧರ್ಮಾತೀತ, ಜಾತ್ಯಾತೀತ ಹಾಗೂ ಆಡಂಬರ ರಹಿತವಾಗಿ ಉಚಿತ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ನವೆಂಬರ್ ೮ ರಂದು ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿರುವ ಕಲಾಮಂದಿರದಲ್ಲಿ ನಡೆಯಲಿದೆ.
    ಜಿಲ್ಲಾ ವ್ಯಾಪ್ತಿಗೆ ಸೀಮಿತವಾಗಿದ್ದ ಈ ಕಾರ್ಯಕ್ರಮವನ್ನು ರಾಜ್ಯಾದ್ಯಾಂತ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಲು ತೀರ್ಮಾನಿಸಲಾಗಿದ್ದು,ಅರ್ಜಿ ಸಲ್ಲಿಸುವ ದಿನಾಂಕವನ್ನು ಸಹ ವಿಸ್ತರಿಸಲಾಗಿದೆ ಸರಳ ವಿವಾಹದಲ್ಲಿ ಅರ್ಜಿ ಸಲ್ಲಿಸಲು ಇಚ್ಫಿಸುವ ವಧು/ವರರಲ್ಲಿ ಒಬ್ಬರು ಕಡ್ಡಾಯವಾಗಿ ಕರ್ನಾಟಕ ರಾಜ್ಯದ ಯಾವುದೇ ಜಿಲ್ಲೆಗಳ ಖಾಯಂ ನಿವಾಸಿಯಾಗಿರಬೇಕು.
    ಮೈಸೂರು ಜಿಲ್ಲೆ ಹೊರತುಪಡಿಸಿ ರಾಜ್ಯದ ಇತರೆ ಜಿಲ್ಲೆಗಳ ಹಿಂದೂ ಹಾಗೂ ಅನ್ಯಧರ್ಮೀಯ ವಧು ವರರು ಅರ್ಜಿಯನ್ನು ಮೈಸೂರು ಜಿಲ್ಲಾಡಳಿತ ವೆಬ್‌ಸೈಟ್
www.mysore.nic.in  ನಿಂದ ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿದ ಅರ್ಜಿಯನ್ನು ದೃಢೀಕೃತ ದಾಖಲಾತಿಗಳೊಂದಿಗೆ ತಹಶೀಲ್ದಾರ್, ಶುಭಾರಾಂಭ ಸೆಲ್, ಕೊಠಡಿ ಸಂಖ್ಯೆ ೧೫, ಧಾರ್ಮಿಕ ದತ್ತಿ  ಇಲಾಖೆ, ಜಿಲ್ಲಾಧಿಕಾರಿಗಳ ಕಚೇರಿ, ಮೈಸೂರು ಇವರಿಗೆ ಖುದ್ದಾಗಿ ಅಥವಾ ನೋಂದಾಯಿತ ಅಂಚೆ ಮೂಲಕ ದಿನಾಂಕ ೨೮-೧೦-೨೦೧೫ ರೊಳಗಾಗಿ ಸಲ್ಲಿಸುವುದು.   ಷರತ್ತು ಹಾಗೂ ಹೆಚ್ಚಿನ ವಿವರಗಳಿಗೆ
www.mysore.nic.in,ದೂರವಾಣಿ ಸಂಖ್ಯೆ ೦೮೨೧-೨೪೨೨೧೭೪, ಮೊಬೈಲ್ ಸಂಖ್ಯೆ ೯೩೪೨೦೦೩೮೨೪, ಇ-ಮೇಲ್ ವಿಳಾಸ
muzaraimys@yahoo.com ¸ ಸಂಪರ್ಕಿಸುವುದು.
    ಮೈಸೂರು ಕಂದಾಯ ಜಿಲ್ಲಾ ವ್ಯಾಪ್ತಿಯ ಹಿಂದೂ ಹಾಗೂ ಅನ್ಯಧರ್ಮೀಯ ವಧು/ ವರರರು ಆಯಾ ತಾಲ್ಲೂಕು ತಹಶೀಲ್ದಾರ್ ಕಚೇರಿಯಿಂದ ಅರ್ಜಿ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಅಕ್ಟೋಬರ್ ೩೧ ರೊಳಗಾಗಿ ಸಂಬಂಧಿಸಿದ ತಹಶೀಲ್ದಾರ್ ಕಚೇರಿಗೆ ಸಲ್ಲಿಸುವುದು. ಷರತ್ತು ಹಾಗೂ ಹೆಚ್ಚಿನ ವಿವರಗಳಿಗೆ

www.mysore.nic.in , ಆಯಾ ತಾಲ್ಲೂಕು ತಹಶೀಲ್ದಾರ್ ಕಚೇರಿ ಮೈಸೂರು ೦೮೨೧-೨೪೧೪೮೧೧, ನಂಜನಗೂಡು ೦೮೨೨೧-೨೨೬೨೫೨, ಟಿ. ನರಸೀಪುರ ೦೮೨೨೭-೨೬೧೨೩೩, ಹೆಚ್.ಡಿ.ಕೋಟೆ ೦೮೨೨೮-೨೫೫೩೨೫, ಪಿರಿಯಾಪಟ್ಟಣ ೦೮೨೨೩-೨೭೪೧೭೫, ಹುಣಸೂರು ೦೮೨೨೨-೨೫೨೦೪೦ ಹಾಗೂ ಕೆ.ಆರ್.ನಗರ ೦೮೨೨೩-೨೬೨೨೩೪ನ್ನು ಸಂಪರ್ಕಿಸಬಹುದು.

Please follow and like us:
error