You are here
Home > Koppal News > ಉದ್ದಿಮೆ ಪರವಾನಿಗೆ, ನವೀಕರಣಕ್ಕೆ ೭ ದಿನಗಳ ಗಡುವು

ಉದ್ದಿಮೆ ಪರವಾನಿಗೆ, ನವೀಕರಣಕ್ಕೆ ೭ ದಿನಗಳ ಗಡುವು

 ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ನಡೆಸುತ್ತಿರುವ ಉದ್ದಿಮೆದಾರರು ಪ್ರತಿ ವರ್ಷ ಉದ್ದಿಮೆ ಪರವಾನಿಗೆಯನ್ನು ನವೀಕರಿಸಬೇಕಾಗಿದ್ದು, ಇದುವರೆಗೂ ನವೀಕರಣ ಮಾಡಿಸಿಕೊಳ್ಳದವರಿಗೆ ೭ ದಿನಗಳ ಗಡುವು ನೀಡಲಾಗಿದೆ ಎಂದು ಕೊಪ್ಪಳ ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.  
  ಕರ್ನಾಟಕ ಪುರಸಭೆ ಕಾಯ್ದೆ ೧೯೬೪ ನಿಯಮ ೨೫೬ ರ ಪ್ರಕಾರ ನಗರ ವ್ಯಾಪ್ತಿಯಲ್ಲಿನ ಯಾವುದೇ ಉದ್ದಿಮೆಗೆ ಪರವಾನಿಗೆ ಪಡೆಯಬೇಕಾಗಿರುತ್ತದೆ.  ಅಲ್ಲದೆ ಈ ಪರವಾನಿಗೆಯನ್ನು ಪ್ರತಿ ವರ್ಷ ನವೀಕರಣ ಮಾಡಿಕೊಳ್ಳುವುದು ಕಡ್ಡಾಯವಾಗಿರುತ್ತದೆ. ಇದುವರೆಗೂ ನಗರ ವ್ಯಾಪ್ತಿಯಲ್ಲಿ ಬಹುತೇಕ ಉದ್ದಿಮೆದಾರರು ಉದ್ದಿಮೆ ಪರವಾನಿಗೆ ಪಡೆಯುವುದು ಹಾಗೂ ನವೀಕರಣ ಮಾಡಿಸುವಲ್ಲಿ ನಿರಾಸಕ್ತಿ ತೋರಿರುವುದು ಕಂಡುಬಂದಿದ್ದು, ೦೭ ದಿನಗಳ ಒಳಗಾಗಿ ಪರವಾನಿಗೆಯನ್ನು ನವೀಕರಣ ಮಾಡಿಸಿಕೊಳ್ಳಬೇಕು. ತಪ್ಪಿದಲ್ಲಿ ಅಂತಹವರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ಕೊಪ್ಪಳ ನಗರಸಭೆ ಪೌರಾಯುಕ್ತರು  ತಿಳಿಸಿದ್ದಾರೆ.  

Leave a Reply

Top