fbpx

ಗೃಹ ಇಲಾಖೆ ವ್ಯವಹಾರಗಳ ಸ್ಥಾಯೀ ಸಮಿತಿಗೆ ಸಂಸದ ಬಿ.ಶ್ರೀರಾಮುಲು ನೇಮಕ.

  ಕೇಂದ್ರ ಸರ್ಕಾರದ ಗೃಹ ಇಲಾಖೆಗೆ ಸಂಬಂಧಿಸಿದ ವ್ಯವಹಾರಗಳ ಸ್ಥಾಯೀ ಸಮಿತಿಯ ಸದಸ್ಯರಾಗಿ ಬಳ್ಳಾರಿಯ ಸಂಸದ ಬಿ.ಶ್ರೀರಾಮುಲು ಅವರನ್ನು ನೇಮಕ ಮಾಡಿ ರಾಜ್ಯ ಸಭಾ ಸಚಿವಾಲಯದ ಜಂಟಿ ನಿರ್ದೇಶಕ ಬಿ.ಕೆ.ಮಿಶ್ರಾ ಸಂಸದರಿಗೆ ಪತ್ರ ಬರೆದಿದ್ದಾರೆ.
 ಲೋಕಸಭೆಯ ವ್ಯವಹಾರಗಳ ನಿಯಮ ನಿಬಂಧನೆಯ ನಿಯಮ ೨೬೯, ಉಪ ನಿಯಮ ೧ರ ಅನ್ವಯ ಸೆಪ್ಟೆಂಬರ್ ೧ರಂದು ನೂತನವಾಗಿ ಪುನರ್ ಸಂಘಟಿಸಲಾದ ಗೃಹ ಇಲಾಖೆಗೆ ಸಂಬಂಧಿಸಿದ ವ್ಯವಹಾರಗಳ ಸ್ಥಾಯೀ ಸಮಿತಿಯ ಸದಸ್ಯರಾಗಿ  ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಈ ಸ್ಥಾಯಿ ಸಮಿತಿಯ ನೂತನ ಅಧ್ಯಕ್ಷರಾಗಿ ಟಿ.ಭಟ್ಟಾಚಾರ್ಯ ಅವರನ್ನು ನೇಮಕ ಮಾಡಲಾಗಿದ್ದು ೩೦ ಸದಸ್ಯರಿರುವ ಈ ಸಮಿತಿಯಲ್ಲಿ ರಾಜ್ಯ ಸಭೆಯ ೯ ಹಾಗೂ ಲೋಕ ಸಭೆಯ ೨೧ ಜನ ಸದಸ್ಯರನ್ನು ನೇಮಕ ಮಾಡಲಾಗಿದೆ ಎಂದು ಆದೇಶ ಪತ್ರದಲ್ಲಿ ತಿಳಿಸಲಾಗಿದೆ.   
Please follow and like us:
error

Leave a Reply

error: Content is protected !!