You are here
Home > Koppal News > ಮೂಲಭೂತ ಕರ್ತವ್ಯಗಳ ಕುರಿತು ಕಾನೂನು ವಿದ್ಯಾ ಪ್ರಸಾರ ಕಾರ್ಯಕ್ರಮ

ಮೂಲಭೂತ ಕರ್ತವ್ಯಗಳ ಕುರಿತು ಕಾನೂನು ವಿದ್ಯಾ ಪ್ರಸಾರ ಕಾರ್ಯಕ್ರಮ

 ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ,ಜಿಲ್ಲಾ ನ್ಯಾಯವಾದಿಗಳ ಸಂಘ ಹಾಗೂ ಕೇಂದ್ರ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಕೊಪ್ಪಳ ಇವರುಗಳ ಸಂಯುಕ್ತಾಶ್ರಯದಲ್ಲಿ ೫ ರಿಂದ ೭ನೇ ತರಗತಿಗಳ ವಿದ್ಯಾರ್ಥಿಗಳಿಗಾಗಿ ಮೂಲಭೂತ ಕರ್ತವ್ಯ ಹಾಗೂ ಹಕ್ಕುಗಳ ಕುರಿತು ಕಾನೂನು ವಿದ್ಯಾ ಪ್ರಸಾರ ಕಾರ್ಯಕ್ರಮವನ್ನು ಡಿ.೦೫.ರ ಶುಕ್ರವಾರ ಬೆಳಗ್ಗೆ ೯.೩೦ಕ್ಕೆ ಸಿ.ಪಿ.ಎಸ್.ಶಾಲೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
   ಹಿರಿಯ ಸಿವಿಲ್ ನ್ಯಾಯಾಧಿಶರಾದ ಬಿ.ದಶರಥ ಕಾರ್ಯಕ್ರಮವನ್ನು ಉದ್ಘಾಟಿಸುವರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿ.ಪಿ.ಎಸ್.ಶಾಲೆಯ ಮುಖ್ಯೋಪಾದ್ಯಾಯರಾದ ಭರಮಪ್ಪ ಕಟ್ಟಮನಿ ವಹಿಸುವರು. ಮುಖ್ಯ ಅತಿಥಿಗಳಾಗಿ ರಾಜ್ಯ ವಕೀಲರ ಪರಿಷತ ಸದಸ್ಯರಾದ ಸಂಧ್ಯಾ.ಬಿ.ಮಾದನೂರು,ವಕೀಲರ ಸಂಘದ ಜಿಲ್ಲಾಧ್ಯಕ್ಷರಾದ ಎ.ವಿ.ಕಣವಿ,ಜಿಲ್ಲಾ ಸರ್ಕಾರಿ ವಕೀಲರಾದ ಬಿ.ಶರಣಪ್ಪ,ನಗರಸಭೆಯ ಸದಸ್ಯರಾದ ಮುತ್ತುರಾಜ ಕುಷ್ಟಗಿ,ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉಮೇಶ ಪೂಜಾರ,ಸರ್ಕಾರಿ ಅಂಗವಿಕಲ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ ಭಾಗವಹಿಸುವರು. ಮೂಲಭೂತ ಹಕ್ಕುಗಳ ವಿಷಯದ ಕುರಿತು ವಕೀಲರಾದ ಎಂ.ವಿ.ಹನುಮಂತರಾವ್ ಹಾಗೂ ಮೂಲಭೂತ ಕರ್ತವ್ಯಗಳ ಕುರಿತು ವಕೀಲರಾದ ಗಾಯತ್ರಿ ಕಠಾರಿ ಉಪನ್ಯಾಸ ನೀಡುವರು.

Leave a Reply

Top