ಚಿಂತಕಿ ಡಾ. ವಸು ಮಳಲಿ ನಿಧನಕ್ಕೆ ಸಂಸ್ಕೃತಿ ಪ್ರಕಾಶನ ಕಂಬನಿ

ಬಳ್ಳಾರಿ, ಫೆ. ೩: ಸಂಸ್ಕೃತಿ ಚಿಂತಕಿ, ವಿಚಾರವಾದಿ ಡಾ. ವಸು ಮಳಲಿ ಅವರ ನಿಧನಕ್ಕೆ ನಗರದ ಸಂಸ್ಕೃತಿ ಪ್ರಕಾಶನ ಕಂಬನಿ ಮಿಡಿದಿದೆ.
ಸೂಕ್ಷ್ಮ ಸಂವೇದನ ಲೇಖಕಿಯಾಗಿ, ಅಂಕಣಗಾರ್ತಿ, ಇತಿಹಾಸಕಾರರಾಗಿ ಗುರುತಿಸಿಕೊಂಡಿದ್ದ ವಸು ಮಳಲಿ ಅವರ ಅಕಾಲಿಕ ನಿಧನದಿಂದ ಕನ್ನಡ ಸಾಹಿತ್ಯ ಲೋಕ ಬಡವಾಗಿದೆ. ತಮ್ಮ ಬರಹಗಳಲ್ಲಿ ನೈಜ ಚರಿತ್ರೆ, ವೈಚಾರಿಕ, ಪ್ರಗತಿ ಪರ ವಿಚಾರಗಳಿಗೆ ಹೆಚ್ಚು ಆದ್ಯತೆ ನೀಡುವ ಮೂಲಕ ಯುವ ಜನತೆಗೆ ವಿಶೇಷವಾಗಿ  ಹೋರಾಟಗಾರರಿಗೆ ಸ್ಫೂರ್ತಿಯಾಗಿದ್ದರು ಎಂದು ಸಂಸ್ಕೃತಿ ಪ್ರಕಾಶನದ ಸಿ. ಮಂಜುನಾಥ್ ಅವರು ಪ್ರಕಟಣೆಯಲ್ಲಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Please follow and like us:
error