You are here
Home > Koppal News > ನಿಯಮ ಪಾಲನೆಯಿಂದ ಅಪಘಾತ ತಪ್ಪಿಸಬಹುದು: ನೇತ್ರಾವತಿ ಪಾಟೀಲ

ನಿಯಮ ಪಾಲನೆಯಿಂದ ಅಪಘಾತ ತಪ್ಪಿಸಬಹುದು: ನೇತ್ರಾವತಿ ಪಾಟೀಲ

 ವಾಹನ ಸವಾರರು ಸರಿಯಾದ ರಸ್ತೆ ನಿಯಮ ಪಾಲನೆಯಿಂದ ಅಪಘಾತವನ್ನು ತಪ್ಪಿಸಬಹುದು ಎಂದು ನಗರ ಸಂಚಾರಿ ಪೊಲೀಸ್ ಠಾಣೆಯ ಪಿ.ಎಸ್.ಐ.ನೇತ್ರಾವತಿ ಪಾಟೀಲ ಹೇಳಿದರು.
 ಅವರು ನಗರದ ಸಿ.ಪಿ.ಎಸ್.ಶಾಲೆ ಹಾಗೂ ನಗರ ಸಂಚಾರಿ ಪೊಲೀಸ್ ಠಾಣೆಯ ವತಿಯಿಂದ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಸಪ್ತಾಹ ೨೦೧೪ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ,ಪ್ರತಿಯೊಬ್ಬ ವಾಹನ ಸವಾರನು ರಸ್ತೆಯ ನಿಯಮಗಳನ್ನು ಸಂಪೂರ್ಣವಾಗಿ ತಿಳಿದುಕೊಂಡಿರಬೇಕು.ರಸ್ತೆಯ ನಿಯಮವನ್ನು ತಿಳಿವಳಿಕೆಯಿಂದ ಅಪಘಾತ ಪ್ರಕರಣಗಳು ಕಡಿಮೆಯಾಗುತ್ತವೆ. ವಾಹನ ಚಾಲನೆ ಮಾಡುವ ಪ್ರತಿಯೊಬ್ಬ ಸವಾರನು ತನ್ನ ಜೀವನದಲ್ಲಿ ತಾಳ್ಮೆಯನ್ನು ಅಳವಡಿಸಿಕೊಳ್ಳಬೇಕು.ತಾಳ್ಮೆಯಿದ್ದರೆ ನಾವು ಹೊರಟ ಸ್ಥಳವನ್ನು ಸುರಕ್ಷಿತವಾಗಿ ತಲುಪಲು ಸಾಧ್ಯವಾಗುತ್ತದೆ.ಇತ್ತೀಚಿನ ದಿನಗಳಲ್ಲಿ ರಸ್ತೆಯ ಅಪಘಾತಗಳು ಹೆಚ್ಚಾಗಿವೆ,ಅದಕ್ಕೆ ಕಾರಣ ಚಾಲಕರ ಅತಿಯಾದ ವೇಗ ಮತ್ತು ಚಾಲಕರಿಗೆ ಸರಿಯಾದ ರಸ್ತೆಯ ನಿಯಮಗಳ ಅರಿವಿಲ್ಲದಿರುವುದರಿಂದ ಜೊತೆಗೆ ವಾಹನ ಚಾಲನೆ ಮಾಡುವವರು ವೇಗದ ಕಡೆಗೆ ಗಮನವನ್ನು ನೀಡದೆ ಸುರಕ್ಷತೆ ಮತ್ತು ನಿಯಮಗಳ ಕಡೆಗೆ ಗಮನವನ್ನು ಹರಿಸುವುದರಿಂದ ತಮ್ಮ ಜೀವನ ಹಾಗೂ ಇತರರ ಜೀವನವನ್ನು ಉಳಿಸಲು ಸಾಧ್ಯ.ಕೇವಲ ಸಪ್ತಾಹದ ೭ ದಿನಗಳಲ್ಲಿ ನಿಯಮ ಪಾಲನೆಯ ಬಗ್ಗೆ ಗಮನವನ್ನು ಹರಿಸದೆ ಜೀವನ ಪರ್ಯಂತ ಅದನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
  ನಂತರ ಮುಖ್ಯ ಅಥಿಗಳಾಗಿ ಆಗಮಿಸಿದ್ದ ನಗರ ಸಂಚಾರಿ ಪೊಲೀಸ್ ಠಾಣೆಯ ಪಿ.ಎಸ್.ಐ.ಮಂಗಳಪ್ಪ ತಳವಾರ ಮಾತನಾಡಿ,ವಾಹನ ಚಾಲನೆ ಮಾಡುವ ಪ್ರತಿಯೊಬ್ಬ ಸವಾರನು ವಾಹನ ಚಾಲನೆಯ ಪರವಾನೆಗೆ ಪಡೆದಿರಬೇಕು.ಪರವಾನೆಗೆ ಹೊಂದಿರದ ಚಾಲಕರಿಗೆ ದಂಡವನ್ನು ಹಾಕುವುದರ ಜೊತೆಗೆ ಶಿಕ್ಷೆಗೆ ಒಳಪಡಿಸಲಾಗುವುದು.ರಸ್ತೆ ಸುರಕ್ಷತಾ ಸಪ್ತಾಹದಂತ ಕಾರ್ಯಕ್ರಮಗಳು ಇನ್ನೂ ಹೆಚ್ಚಿನ ರೀತಿಯಲ್ಲಿ ಜರುಗಬೇಕು ಅಂದಾಗ ಮಾತ್ರ ಜನರಲ್ಲಿ ಜಾಗೃತಿ ಮೂಡಿಸುವುದರೊಂದಿಗೆ ಪ್ರತಿಯೊಬ್ಬರು ಸರಿಯಾದ ಸಂಚಾರಿ ನಿಯಮಗಳನ್ನು ಪಾಲಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲೆಯ ಮುಖ್ಯೋಪಾದ್ಯಾಯರಾದ ಭರಮಪ್ಪ ಕಟ್ಟಮನಿ ಮಕ್ಕಳಿಗೆ ಶಾಲೆಗೆ ಬರುವಾಗ ಯಾವ ರೀತಿಯ ಸಂಚಾರಿ ನಿಯವನ್ನು ಪಾಲಿಸಬೇಕು ಎಂದು ಹೇಳಿಕೊಟ್ಟರು.
ಕಾರ್ಯಕ್ರಮದಲ್ಲಿ ಸರ್ಕಾರಿ ಅಂಗವಿಕಲ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ,ಸಾವಿತ್ರಿದಾಸ್,ಶಂಕ್ರಮ್ಮ ಬಂಗಾರಶೆಟ್ಟರ,ಪೊಲೀಸ್ ಸಿಬ್ಬಂದಿಗಳಾದ ಅನಿಲಕುಮಾರ ಕಂಬಳಿ,ನಾಗರಾಜ.ವಾಯ್.ಸರ್ವೇಶ,ಚಂದ್ರು,ಮೈಲಾರಪ್ಪ.ಎಫ್.ಎಸ್. ಮುಂತಾದವರು ಹಾಜರಿದ್ದರು.ಕಾರ್ಯಕ್ರಮವನ್ನು ಶಿಕ್ಷಕರಾದ ಗುರುರಾಜ ಕಟ್ಟಿ ನಿರೂಪಿಸಿದರು.  ಶಿಕ್ಷಕಿಯರಾದ ಅಂಬಕ್ಕ ಪ್ರಾರ್ಥನೆ ನೇರವೆರಿಸಿದರು.

ಶಿಕ್ಷಕರಾದ ಶ್ರೀನಿವಾಸರಾವ ಸ್ವಾಗತಿಸಿ,ನಾಗಪ್ಪ ನರಿ ಎಲ್ಲರಿಗೂ ವಂದಿಸಿದರು.

Leave a Reply

Top