fbpx

ರಾಷ್ಟ್ರೀಯ, ಅಂತರರಾಷ್ಟ್ರೀಯ ಕ್ರೀಡಾಕಟುಗಳಿಗೆ ನಗದು ಬಹುಮಾನ : ಅರ್ಜಿ ಆಹ್ವಾನ

ಕೊಪ್ಪಳ ಮಾ. : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ೨೦೧೪-೧೫ನೇ ಸಾಲಿಗೆ ಕರ್ನಾಟಕ ರಾಜ್ಯವನ್ನು ಅಧಿಕೃತವಾಗಿ ಪ್ರತಿನಿಧಿಸಿ ರಾಷ್ಟ್ರೀಯ/ಅಂತರರಾಷ್ಟ್ರೀಯ ಮಟ್ಟದಲ್ಲಿ ಕ್ರೀಡೆಗಳಲ್ಲಿ ಭಾಗವಹಿಸಿ ಪದಕ ಪಡೆದ ಕ್ರೀಡಾ ಪಟುಗಳಿಗೆ ನಗದು ಬಹುಮಾನ ನೀಡುವ ಯೋಜನೆಗಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಿದೆ.
        ಒಲಂಪಿಕ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಕ್ರೀಡಾಪಟುಗಳಿಗೆ ೧ ಕೋಟಿ, ಬೆಳ್ಳಿ- ೫೦ ಲಕ್ಷ, ಕಂಚು- ೨೫ ಲಕ್ಷ ರೂ. ಗಳ ಬಹುಮಾನ ನೀಡಲಾಗುವುದು. ವರ್ಲ್ಡ್ ಕಪ್‌ನಲ್ಲಿ ಚಿನ್ನದ ಪದಕ- ೫೦ ಲಕ್ಷ, ಬೆಳ್ಳಿ- ೨೫ ಲಕ್ಷ, ಕಂಚು- ೧೦ ಲಕ್ಷ ರೂ.  ಕಾಮನ್ ವೆಲ್ತ್/ವಿಶ್ವ ಚಾಂಪಿಯನ್ ಷಿಪ್ಸ್/ ಏಷಿಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ- ೨೫ ಲಕ್ಷ, ಬೆಳ್ಳಿ- ೧೫ ಲಕ್ಷ, ಕಂಚು- ೮ ಲಕ್ಷ ರೂ. ಏಷ್ಯನ್ ಚಾಂಪಿಯನ್‌ವೆಲ್ತ್‌ನಲ್ಲಿ ಚಿನ್ನದ ಪದಕ- ೧೦ ಲಕ್ಷ, ಬೆಳ್ಳಿ- ೦೭ ಲಕ್ಷ, ಕಂಚು- ೫ ಲಕ್ಷ ರೂ.  ಕಿರಿಯರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ- ೧೫ ಲಕ್ಷ, ಬೆಳ್ಳಿ- ೧೦ ಲಕ್ಷ, ಕಂಚು- ೦೫ ಲಕ್ಷ ರೂ. ಎಸ್‌ಎಎಆರ್‌ಸಿ/ಎಸ್‌ಎಎಫ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ- ೦೪ ಲಕ್ಷ, ಬೆಳ್ಳಿ- ೦೨ ಲಕ್ಷ, ಕಂಚು- ೦೧ ಲಕ್ಷ ರೂ.  ನ್ಯಾಷನಲ್ ಗೇಮ್ಸ್‌ನಲ್ಲಿ ಚಿನ್ನದ ಪದಕ- ೦೫ ಲಕ್ಷ, ಬೆಳ್ಳಿ- ೦೩ ಲಕ್ಷ, ಕಂಚು- ೦೨ ಲಕ್ಷ ರೂ.  ನ್ಯಾಷನಲ್ ಚಾಂಪಿಯನ್‌ಷಿಪ್ ಇಂಟರ್ ಸ್ಟೇಟ್, ಇಂಟರ್ ಜೋನಲ್ ಮತ್ತು ಫೆಡೆರೇಷನ್ ಕಪ್ ಕ್ರೀಡಾಕೂಟಗಳಲ್ಲಿ  ಚಿನ್ನದ ಪದಕ- ೦೨ ಲಕ್ಷ, ಬೆಳ್ಳಿ- ೦೧ ಲಕ್ಷ, ಕಂಚು- ೫೦ ಸಾವಿರ ರೂ. ಜೂನಿಯರ್ ನ್ಯಾಷನಲ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ- ೫೦ ಸಾವಿರ ರೂ., ಬೆಳ್ಳಿ- ೨೫ ಸಾವಿರ. ಕಂಚು- ೧೫ ಸಾವಿರ ರೂ. ಸಬ್ ಜೂನಿಯರ್ ನ್ಯಾಷನಲ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ- ೨೫ ಸಾವಿರ ರೂ., ಬೆಳ್ಳಿ- ೧೫ ಸಾವಿರ. ಕಂಚು- ೧೦ ಸಾವಿರ ರೂ. ನಗದು ಬಹುಮಾನ ನೀಡಲಾಗುವುದು. ಅಲ್ಲದೆ ಭಾರತವನ್ನು ಅಧೀಕೃತವಾಗಿ ಪ್ರತಿನಿಧಿಸಿ ಅಂತರರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿದ ಕ್ರೀಡಾ ಪಟುಗಳಿಗೆ ೫೦ ಸಾವಿರ ರೂ. ನಗದು ಬಹುಮಾನ ನೀಡಲಾಗುವುದು. 
  ಅರ್ಹ ಕ್ರೀಡಾ ಪಟುಗಳು ನಿಗಧಿತ ನಮೂನೆಯನ್ನು ಭರ್ತಿಮಾಡಿ ಅಗತ್ಯ ದಾಖಲೆಗಳೊಂದಿಗೆ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕ್ರೀಡಾಂಗಣ, ಕೊಪ್ಪಳ ಇವರಿಗೆ ಏಪ್ರಿಲ್ ೨೦ ರ ಒಳಗಾಗಿ ಸಲ್ಲಿಬೇಕು.  ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ-೦೮೫೩೯-೨೦೧೪೦೦ ಕ್ಕೆ ಸಂಪರ್ಕಿಸುವಂತೆ ಸಹಾಯಕ ನಿರ್ದೇಶಕ ಟಿ. ರಾಮಕೃಷ್ಣಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
Please follow and like us:
error

Leave a Reply

error: Content is protected !!