fbpx

ಯುನಿಸೆಫ್‌ನಿಂದ ಬಾಲಕನ ರಕ್ಷಣೆ : ಬಾಲಮಂದಿರಕ್ಕೆ ದಾಖಲು

   ಜಿಲ್ಲೆಯ ಯಲಬುರ್ಗಾ ತಾಲೂಕಿನ ಮುರಡಿ ಗ್ರಾ.ಪಂ.ವ್ಯಾಪ್ತಿಯ ತರಲಕಟ್ಟಿ ಬಳಿ ಕುರಿ ಕಾಯುವ ಕೆಲಸ ಮಾಡುತ್ತಿದ್ದ ಗಂಗಾವತಿ ತಾಲೂಕಿನ ವಿಠಲಾಪುರ ಗ್ರಾಮದ ೧೩ ವರ್ಷದ ಬಾಲಕನನ್ನು ಯುನಿಸೆಫ್ ವತಿಯಿಂದ ರಕ್ಷಿಸಲಾಗಿದ್ದು ಆತನನ್ನು ಬಾಲಮಂದಿರಕ್ಕೆ ದಾಖಲಿಸಲಾಗಿದೆ.
  ಕುರಿಗಳ ಮಾಲೀಕನಾದ ಚಿಕ್ಕಮಾದಿನಾಳ ಗ್ರಾಮದ ಅಂಬಣ್ಣ ತಳವಾರ ಎಂಬುವವರಿಗೆ ಸೇರಿದ್ದ ಕುರಿ ಮರುಗಳಿಗೆ ಹಾಲು ಕುಡಿಸಿಲ್ಲ ಎನ್ನುವ ಕಾರಣಕ್ಕೆ ಬಾಲಕನನ್ನು ಅವಾಚ್ಯವಾಗಿ ನಿಂದಿಸಿ ಕಟ್ಟಿಗೆಯಿಂದ ಹೊಡೆದು ಹಲ್ಲೆ ಮಾಡಿದ್ದು, ಸ್ಥಳದಲ್ಲಿನ ಗ್ರಾಮಸ್ಥರು ಮತ್ತು ಯುವಕರು ಬಾಲಕನನ್ನು ರಕ್ಷಿಸಿದ್ದಾರೆ. ಈ ಸಂಬಂಧ ಮಾಲೀಕನ ಮೇಲೆ ಐ.ಪಿ.ಸಿ. ಸೆಕ್ಷನ್-೩೪೨, ೩೨೩, ೩೨೪, ೫೦೪ ಮತ್ತು ಬಾಲ ನ್ಯಾಯ ಕಾಯ್ದೆ ಸೆಕ್ಷನ್-೨೩ ಮತ್ತು ೨೬ ರಡಿಯಲ್ಲಿ ಬೇವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಯಾಚರಣೆ ನಡೆಸಿದ ಯೂನಿಸೆಫ್-ಮಕ್ಕಳ ರಕ್ಷಣಾ ಯೋಜನೆಯ ಅಧಿಕಾರಿಗಳು ಮತ್ತು ಮಕ್ಕಳ ವಿಶೇಷ ಪೊಲೀಸ್ ಘಟಕದ ಸಿಬ್ಬಂದಿಗಳು ಪೊಲೀಸರ ಸಹಾಯದೊಂದಿಗೆ ಮಗುವನ್ನು ಬಾಲಕರ ಬಾಲಮಂದಿರಕ್ಕೆ ದಾಲಿಸಿದರು. ನಂತರ ಕಾರ್ಮಿಕ ನಿರೀಕ್ಷಕರು ಹಾಗೂ ಎನ್‌ಸಿಎಲ್‌ಪಿಯ ವತಿಯಿಂದ ಬಾಲ ಕಾರ್ಮಿಕರ ಕಾಯ್ದೆಯಡಿಯೂ ಸಹ ಮಾಲೀಕರ ಮೇಲೆ ಪ್ರಕರಣ ದಾಖಲಿಸಲು ಕ್ರಮ ಕೈಗೊಳ್ಳಲಾಗಿದೆ .
Please follow and like us:
error

Leave a Reply

error: Content is protected !!