ಪ್ರಹ್ಲಾದ್ ಬೆಟಗೇರಿ ಪ್ರತಿಭೆಗೆ ತಕ್ಕ ಅವಕಾಶ ಸಿಗಲಿಲ್ಲ – ವಿಠ್ಠಪ್ಪ ಗೋರಂಟ್ಲಿ.

ಕೊಪ್ಪಳ-21- ಚಿತ್ರರಂಗದಲ್ಲಿ ಬೆಳೆಯಲು ಬೇಕಾದಂತಹ ಎಲ್ಲ ಅರ್ಹತೆಗಳೂ ಇದ್ದಾಗ್ಯೂ ಸಹಿತ ನಾನಾಕಾರಣಗಳಿಂದ ಪ್ರಹ್ಲಾದ್ ಬೆಟಗೇರಿಗೆ ಅವಕಾಶಗಳು ಸಿಗಲಿಲ್ಲ. ಸಿಕ್ಕ ಅವಕಾಶಗಳಲ್ಲಿಯೇ ತಮ್ಮ ಪ್ರತಿಭೆಯನ್ನು ತೋರಿಸಿದರು.  ಜಿ ಲ್ಲೆಯ ಹಲವಾರು ಹೋರಾಟಗಳಲ್ಲಿ ಪಾಲ್ಗೊಂಡು ನಿರಂತರವಾಗಿ ಬರಹಗಳಲ್ಲೂ ತೊಡಗಿಸಿಕೊಂಡಿದ್ದ ಪ್ರಹ್ಲಾದ್ ಬೆಟಗೇರಿ ಬೆಂಗಳೂರು ಕೊಪ್ಪಳದ ಸಾಹಿತಿಗಳಿಗೆ
ಕೊಂಡಿಯಂತಿದ್ದರು ಎಂದು  ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಹೇಳಿದರು. ನಗರದ
ಪ್ರವಾಸಿ ಮಂದಿರದಲ್ಲಿ ಇತ್ತೀಚಿಗೆ ನಿಧನರಾದ ಪ್ರಹ್ಲಾದ್ ಬೆಟಗೇರಿಯವರ ಶ್ರದ್ದಾಂಜಲಿ
ಸಭೆಯಲ್ಲಿ ಮಾತನಾಡಿದರು.

Please follow and like us:
error