You are here
Home > Koppal News > ಅಕ್ಕಿ ಗೋಧಿಯನ್ನು ಅಕ್ರಮವಾಗಿ ಕಳ್ಳಸಾಗಾಣಿಕೆಯನ್ನು ನಿಯಂತ್ರಿಸಲು ಮನವಿ.

ಅಕ್ಕಿ ಗೋಧಿಯನ್ನು ಅಕ್ರಮವಾಗಿ ಕಳ್ಳಸಾಗಾಣಿಕೆಯನ್ನು ನಿಯಂತ್ರಿಸಲು ಮನವಿ.

ಕೊಪ್ಪಳ-20- ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಭಣ ಕೊಪ್ಪಳ ಜಿಲ್ಲಾ ಘಟಕದಿಂದ ರಾಜ್ಯ ಸರಕಾರದ ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿ ಗೋಧಿಯನ್ನು ಅಕ್ರಮವಾಗಿ ಕಳ್ಳಸಾಗಾಣಿಕೆಯನ್ನು ನಿಯಂತ್ರಿಸಲು ಜಿಲ್ಲಾದಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
    ಕಳೆದ ಸುಮಾರು ವರ್ಷಗಳಿಂದ ನಿರಂತರವಾಗಿ ಕರ್ನಾಟಕ ಸರ್ಕಾರದ ಅನನಭಾಗ್ಯ ಯೋಜನೆಯ ಪಡಿತರ ಅಕ್ಕಿ, ಗೋಧಿಯನ್ನು ಕಾನೂನು ಬಾಹಿರವಾಗಿ ರಾಜಾರೋಷವಾಗಿ ಹಾಡುಹಗಲೇ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಾ ಇಡಿ ವ್ಯವಸ್ಥೆಯನ್ನು ನಿಯಂತ್ರಿಸುತ್ತಿರುವ ಲೂಟಿಕೋರರ ತಂಡ ೮- ೧೦ ಜಿಲೆಗಳಿಂದ ಅಕ್ಕಿಯನ್ನು ಸಂಗ್ರಹಮಾಡಿ ಗಂಗಾವತಿ ತಾಲುಕಿನ ಆಯ್ದ ರೈಸಮಿಲ್ ಗಳಲ್ಲಿ ಮಾರಾಟ ಮಾಡುತ್ತಿದ್ದಾರೆ.
    ಈ ವಿಷಯಕ್ಕೆ ಸಂಬಂಧಿಸಿದಂತೆ ಆಹಾರ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಜಿಲ್ಲಾ ಮಟ್ಟದ ಮತ್ತು ತಾಲುಕ ಮಟ್ಟದ ವಿಶೇಷವಾಗಿ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಈ ಲೂಟಿಯಲ್ಲಿ ಶ್ಯಾಮಿಲಾಗಿರುವುದರಿಂದ ಜನಸಾಮಾನ್ಯರು ಈ ಎಲ್ಲಾ ಇಲಾಖೆಯ ಅಧಿಕಾರಿಗಳನ್ನು ಕಂಡರೆ ಅಸಹ್ಯವಾಗಿ ನೋಡುವಂತಹದ್ದಾಗಿದೆ. ಈ ಅಕ್ರಮದಲ್ಲಿ ವಿಶೇಷವಾಗಿ ಗಂಗಾವತಿ ನಗರದಲ್ಲಿ ನಡೆಯುತ್ತಿರುವುದು ತಮ್ಮೆಲ್ಲರ ಗಮನಕ್ಕೆ ಬಂದರೂಸಹ ಜಾಣ  ಕುರುಡು ಪ್ರದರ್ಶನಮಾಡುತ್ತಿರುವುದು. ಪ್ರಜ್ಞಾನವಂತ ಸಮಾಜ ನಾಚುವಂತಾಗಿದೆ. ಈ ಲೂಟಿ ಕೋರರ ಮೇಲೆ ಹಲವಾರು ಪ್ರಕರಣಗಳು ದಾಖಲಾಗಿದ್ದರೂ ಸಹ ಯಾವುದೇ ರೀತಿಯ ಕಾನೂನಾತ್ಮಕ ಕ್ರಮಗಳನನು ಕೈಗೊಳ್ಳದಿರುವುದು ನಾಚಿಕೆಗೆಡಿನ ಸಂಗತಿ ಕೂಡಲೇ ಜಿಲ್ಲಾ ಡಳಿತ ಮುಖ್ಯಸ್ಥ
    ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಪಿ. ಕೃಷ್ಣೆಗೌಡ, ರಾಜ್ಯ ಕಾರ್ಯದಶಿ ಹರೀಶ್ ಎಮ್, ರಾಜ್ಯ ಯುವ ಘಟಕದ ಅಧ್ಯಕ್ಷ ನವೀನ ಕೆ, ಬಳ್ಳಾರಿ ಜಿಲ್ಲಾಧ್ಯಕ್ಷ ಚನ್ನಬಸವರಾಜ ಕುರಗೋಡ, ಯಾದಗರಿ ಜಿಲ್ಲಾಧ್ಯಕ್ಷ ಡಾ. ಸಿದ್ದಲಿಂಗಯ್ಯ ಪಾಟೀಲ, ಕಂದಕೂರ, ಕೊಪ್ಪಳ ಜಿಲ್ಲಾಧ್ಯಕ್ಷ/ ಉತ್ತರ ಕರ್ನಾಟಕ ಅಧ್ಯಕ್ಷ ರಾಜೇಶ ಅಂಗಡಿ, ಕೊಪ್ಪಳ ತಾಲೂಕ ಅಧ್ಯಕ್ಷ ನಾಗರಾಜ ಹ್ಯಾಟಿ, ಕೊಪ್ಪಳ ತಾಲೂಕ ಯುವ ಘಟಕದ ಅಧ್ಯಕ್ಷ ಕೋಟೆಶ ಮ್ಯಾಗಳಮನಿ, ಕೊಪ್ಪಳ ನಗರ ಅಧ್ಯಕ್ಷ ಸಿದ್ರಾಮ ದೊಡ್ಡಮನಿ, ಕೊಪ್ಪಳ ನಗರ ಉಪಾಧ್ಯಕ್ಷ ದಸ್ತಗಿರಿ ಎಸ್. ಬಳ್ಳಾರಿ ಇತರೆ ಕರವೇ ಕಾರ್ಯಕರ್ತರು ಉಪಸ್ಥಿತರಿದ್ದರು.

ರಾದ ತಾವುಗಳು ಕೂಡಲೇ ಮಧ್ಯ ಪ್ರವೇಶಮಾಡಿ ಈಡಿ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಪಡಿತರ ಅಕ್ಕಿಗೋಧಿ ಸಾಗಾಣಿಕೆಯನ್ನು ಕೂಡಲೇ ನಿಯಂತ್ರಿಸಬೇಕು. ಇದಕ್ಕೆ ಸಂಬಂಧಪಟ್ಟ ಆರೋಪಗಳನ್ನು ಬಂಧಿಸಿ ಕಠಿಣ ಕಾನುನಾತ್ಮಕ ಕ್ರಮಗಳನ್ನು ಕೈಗೊಳ್ಳುವ ಮುಖಾಂತರ ಕೊಪ್ಪಳ ಜಿಲ್ಲಾಡಳಿತ ಜೀವಂತವಾಗಿದೆ. ತಾವುಗಳು ಈ ಅಕ್ರಮಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಕರ್ನಾಟಕ ರಕ್ಷಾಣ ವೇದಿಕೆ ಸ್ವಾಭಿಮಾನಿ ಬಣ ಈಡಿ ರಾಜ್ಯಾದ್ಯಂತ ಕೊಪ್ಪಳ ಜಿಲ್ಲಾಡಳಿತದ ವಿರುದ್ಧ ಹೋರಾಟ ಮಾಡುವ ಎಚ್ಚರಿಕೆಯನ್ನು ಮನವಿಲ್ಲಿ ತಿಳಿಸಲಾಗಿದೆ.

Leave a Reply

Top