ಕಲ್ಯಾಣ ಕರ್ನಾಟಕ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ – ಅಧ್ಯಕ್ಷರಾಗಿ ಕುಂ.ವೀ

ಕೊಪ್ಪಳ, ಜ. ೧೯. ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ಕಲ್ಯಾಣ ಕರ್ನಾಟಕ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಹಿರಿಯ ಸಾಹಿತಿ ಕುಂ. ವೀರಭದ್ರಪ್ಪನವರನ್ನು ಆಯ್ಕೆ ಮಾಡಲಾಗಿದೆ.
ಅವರಿಂದು ನಗರದ ಸಾಹಿತ್ಯ ಭವನದಲ್ಲಿ ಸಂಸ್ಥೆಯ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಅಧ್ಯಕ್ಷತೆಯಲ್ಲಿ ಸಭೆ ಸೇರಿ ಸಮ್ಮೇಳನದ ಕುರಿತು ಚರ್ಚೆ ನಡೆಸಲಾಯಿತು. ಜಿಲ್ಲೆಯ ಹಲವರ ಹೆಸರು ಪ್ರಸ್ತಾಪವಾದವು ಅದರಲ್ಲಿ ಎಸ್. ವಿ. ಪಾಟೀಲ ಗುಂಡೂರ ಪ್ರಮುಖವಾಗಿ ಕೇಳಿಬಂತು ಅವರು ಅದೇ ತಿಂಗಳು ನಡೆಯುವ ಜಿಲ್ಲಾ ಸಮ್ಮೇಳನ ಅಧ್ಯಕ್ಷರಾದ್ದರಿಂದ ಅಂತಿಮವಾಗಿ ಬಳ್ಳಾರಿ ಜಿಲ್ಲೆಯ ಕುಂ. ವೀರಭದ್ರಪ್ಪನವರ ಹೆಸರು ಅಂತಿಮಗೊಳಿಸಿ ಅವರನ್ನು ಸಂಪರ್ಕಿಸಿ ಆಹ್ವಾನ ನೀಡಲಾಯಿತು. ಸೋಮುವಾರ ಅವರನ್ನು ಅಧಿಕೃತವಾಗಿ ಸನ್ಮಾನಿಸಿ ಆಹ್ವಾನಿಸಲು ಸಭೆ ತೀರ್ಮಾನಿಸಿತು. ಸಮ್ಮೇಳನದಲ್ಲಿ ಮೂರು ಗೋಷ್ಠಿ, ಒಂದು ಕವಿಗೋಷ್ಠಿ, ಸಂಗೀತ, ನೃತ್ಯ ಕಾರ್ಯಕ್ರಮಗಳನ್ನು ನಡೆಸ

ಲು ತೀರ್ಮಾನಿಸಲಾಯಿತು. ಮೆರವಣಿಗೆ ಇಲ್ಲದೇ ನೇರವಾಗಿ ಕಾರ್ಯಕ್ರಮವನ್ನು ಬೆಳಿಗ್ಗೆ ಉದ್ಘಾಟಿಸುವದು, ಉದ್ಘಾಟನೆ ನಂತರ ಸಮ್ಮೇಳನಾಧ್ಯಕ್ಷರ ಪರಿಚಯ, ಸಂವಾದ ನಡೆಸುವದು ತದನಂತರ ಗೋಷ್ಠಿ ಹಮ್ಮಿಕೊಳ್ಳಲಾಗುವದು ಎಂದು ತಿಳಿಸಿದ್ದಾರೆ.

ಕಾರ್ಯಕ್ರಮ ಸಾಹಿತ್ಯ ಭವನದಲ್ಲಿ ಫೆಬ್ರವರಿ ೮ ರಂದು ನಡೆಯಲಿದೆ, ಸಮ್ಮೇಳನಕ್ಕೆ ಗುಲ್ಬರ್ಗ ವಿಭಾಗದರೂ ಜಿಲ್ಲೆಯ ಅನೇಕ ಸಾಹಿತಿ ಕಲಾವಿದರನ್ನು ಆಹ್ವಾನಿಸುವ ಕುರಿತು ಚರ್ಚೆ ನಡೆಸಲಾಯಿತು. ಸಭೆಯಲ್ಲಿ ನಾಗರಿಕ ವೇದಿಕೆ ಅಧ್ಯಕ್ಷ ಮಹೇಶಬಾಬು ಸುರ್ವೆ, ನಗರಸಭೆ ಸದಸ್ಯ ಬಾಳಪ್ಪ ಬಾರಕೇರ, ಶಿವಾನಂದ ಹೊದ್ಲೂರ, ಹನುಮಂತರಾವ್ ವಕೀಲರು, ವಿರುಪಾಕ್ಷಪ್ಪ ಕಟ್ಟಿಮನಿ ವಕೀಲರು, ಬಸವರಾಜ ಕೊಪ್ಪಳ, ವೈ. ಬಿ. ಜೂಡಿ, ಉಮೇಶ ಪೂಜಾರ, ರಾಮು ಪೂಜಾರ, ಶೇಖ್ ಇದಾಯತ್ ಅನೇಕರು ಇದ್ದರು. 
Please follow and like us:

Related posts

Leave a Comment