ಜಿಲ್ಲೆಯ ಪ್ರತಿ ಶಾಲೆಯಲ್ಲಿ ಸ್ಕೌಕ್ಸ್-ಗೈಡ್ಸ್ ಘಟಕ ಕಡ್ಡಾಯ-ಜನಾರ್ಧನ

ಕೊಪ್ಪಳ, ಸೆ. ೬. ಕೊಪ್ಪಳ ಜಿಲ್ಲೆಯ ಪ್ರತಿಯೊಂದು ಶಾಲೆಯಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಖಡ್ಡಾಯವಾಗಿ ಘಟಕಗಳನ್ನು ತೆರೆಯಬೇಕು ಎಂದು ಜಿ.ಪಂ. ಅಧ್ಯಕ್ಷ ಟಿ. ಜನಾರ್ಧನ ಹುಲಿಗಿ ಹೇಳಿದರು.

 ಅವರು ನಗರದ ಪದಕಿ ಲೇಔಟನಲ್ಲಿರುವ ಶಾರದಾ ಪ್ರೌಢ ಶಾಲೆಯಲ್ಲಿ ಕೊಪ್ಪಳ ತಾಲೂಕ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ತಾಲೂಕ ಮಟ್ಟದ ಸ್ಕೌಟರ್‍ಸ್ ಮತ್ತು ಗೈಡರ್‍ಸ್ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಮಕ್ಕಳು ಕೆಲಹಂತದಲ್ಲಿಯೇ ದೇಶಪ್ರೇಮ ಮತ್ತು ಶಿಸ್ತನ್ನು ಬೆಳೆಸಿಕೊಳ್ಳಬೇಕು ಜೊತೆಗೆ ಮಾನಸಿಕವಗಿ ಹಾಗೂ ದೈಹಿಕವಾಗಿ ಸದೃಢವಾಗಬೇಕು ಅಂದಾಗ ಎಲ್ಲಾ ಸಂದರ್ಭಗಳನ್ನು ಎದುರಿಸಲು ಸಿದ್ದವಾಗುತ್ತಾರೆ, ಇಲ್ಲವಾದರೆ ಮಕ್ಕಳ ಮನಸ್ಥಿತಿ ಕುಸಿದು ಆತ್ಮಹತ್ಯೆಯಂಥ ಕೆಟ್ಟ ಹಾದಿ ಹಿಡಿಯುತ್ತಿದ್ದಾರೆ ಎಂದು ವಿಷಾಧಿಸಿದರು. ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ತರಬೇತಿ ಕೇಂದ್ರಕ್ಕೆ ೨೦ ಲಕ್ಷ ಅನುದಾನದಲ್ಲಿ ಕಟ್ಟಡ ಮತ್ತು ಎನ್‌ಆರ್‌ಇಜಿಯಲ್ಲಿ ಕಂಪೌಂಡ್ ನಿರ್ಮಾಣ ಮಾಡಿಕೊಡಲಾಗುವದು ಎಂದರು.

ಸಮಾರಂಭದಲ್ಲಿ ತಾ. ಪಂ. ಅಧ್ಯಕ್ಷ ದೇವಪ್ಪ ಮೆಕಾಳಿ ಮಾತನಾಡಿ, ಜಿ.ಪಂ. ಅಧ್ಯಕ್ಷರ ಮಾಡುವ ಎಲ್ಲಾ ಅಭಿವೃದ್ಧಿ ಕಾರ್ಯಕ್ಕೆ ಸಹಕಾರ ನೀಡುವ ಜೊತೆಗೆ ಸ್ಕೌಟರ್‍ಸ್ ಮತ್ತು ಗೈಡರ್‍ಸ್ ತರಬೇತಿಗೆ ಸಹಕಾರ ನೀಡುವದಾಗಿಯೂ ಹೇಳಿದರು. ಸಮಾವೇಶದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಕೊಪ್ಪಳ ತಾಲೂಕ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಮಾತನಾಡಿ ಒಂದು ವರ್ಷದಲ್ಲಿ ಕೊಪ್ಪಳ ಜಿಲ್ಲೆಯ ಪ್ರತಿ ಶಾಲೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕ ಆರಂಭಿಸುವದು ಸೇರಿದಂತೆ ತಾಲೂಕ ಸಂಸ್ಥೆಯಲ್ಲಿ ಸಮವಸ್ತ್ರ ಸಿಗುವಂತೆ ಹಾಗೂ ಪೂರ್ಣಾವಧಿ ಕಾರ್ಯದರ್ಶಿ ನೇಮಿಸಿಕೊಂಡು ಸ್ಕೌಟಿಂಗ್ ಚಳುವಳಿಗೆ ವೇಗ ನೀಡಲಾಗುವದು, ಅದಕ್ಕೆ ಜಿಲ್ಲೆಯ ದಾನಿಗಳು ಮತ್ತು ಶಿಕ್ಷಕ ವರ್ಗ ಸಹಕಾರ ನೀಡಬೇಕು ಎಂದರು. ಜಿಲ್ಲಾ ಗೈಡ್ಸ್ ಆಯುಕ್ತೆ ಸಂಧ್ಯಾ ಬಿ. ಮಾದಿನೂರ, ಜಿಲ್ಲಾ ಸಹಾಯಕ ಕಾರ್ಯದರ್ಶಿ ಜಯರಾಜ ಬೂಸದ, ಜಿಲ್ಲಾ ತರಬೇತಿ ಆಯುಕ್ತ ಎ. ಯರಣ್ಣ ಮಾತನಾಡಿದರು. ಶಾರದಾ ಪ್ರೌಢ ಶಾಲೆಯ ಮುಖ್ಯಗುರು ಮಲ್ಲಿಕಾರ್ಜುನ ಚೌಕಿಮಠ, ರಾಜ್ಯ ಸಂಸ್ಥೆಯ ಸಂಘಟನಾ ಆಯುಕ್ತ ಶಿವಕುಮಾರ ಇತರರು ಇದ್ದರು. 
ಸಮಾವೇಶದಲ್ಲಿ ತಾಲೂಕಿನ ಎಲ್ಲಾ ಶಾಲೆಯ ಸ್ಕೌಟರ್‍ಸ್ ಮತ್ತು ಗೈಡರ್‍ಸ್ ಶಿಕ್ಷಕರು ಭಾಗವಹಿಸಿ ಮಾಹಿತಿ ಮಾರ್ಗದರ್ಶನ ಪಡೆದು ಘಟಕಗಳ ನವೀಕರಣ ಮಾಡಿಕೊಂಡರು. ಶಿಕ್ಷಕಿ ಸರಸ್ವತಿ ಸ್ವಾಗತಿಸಿದರು, ಶಿಕ್ಷಕ ಜೀವನಸಾಬ್ ಬಿನ್ನಾಳ ಕಾರ್ಯಕ್ರಮ ನಿರ್ವಹಿಸಿದರು, ಸಾಮೂಹಿಕ ಪ್ರಾರ್ಥನೆ ನಡೆಯಿತು ಶಿಕ್ಷಕ ಶಿವಬಸನಗೌಡ ವಂದಿಸಿದರು.

Leave a Reply