ಸ್ವಾಮಿ ವಿವೇಕಾನಂದ ಶಾಲಾ ವಾರ್ಷಿಕೋತ್ಸವ

ಕೊಪ್ಪಳ, ೧೪ : ನಗರದ ಲಯನ್ಸ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ೧೫೧ ನೇ ಸ್ವಾಮಿ ವಿವೇಕಾನಂದ ಜನ್ಮ ದಿನಾಚರಣೆ ಮತ್ತು ೩೭ ನೇ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಇದೇ ದಿನಾಂಕ ೧೨ ರಂದು ಹಮ್ಮಿಕೊಳ್ಳಲಾಗಿತ್ತು. ಎಸ್.ಜಿ. ಕಾಲೇಜಿನ ಭೌತಶಾಸ್ತ್ರ ಮುಖ್ಯಸ್ಥರಾದ ಪ್ರೊ. ಬಿ.ಡಿ. ಕೇಶವನ್ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿ ವಿವೇಕಾನಂದರಂಥವರು ನೆಲದ ಕೊಡುಗೆಯಾಗಿ, ಭರತ ಭೂಮಿಯ ಉದ್ಧಾರಕ್ಕಾಗಿ ಜನ್ಮ ತಾಳಿದವರು. ಇವರ ಮಾರ್ಗದಲ್ಲಿ ಯುವ ಜನತೆ ಸಾಗಬೇಕು. ವಿದ್ಯಾರ್ಥಿಗಳು ಈ ಸುವರ್ಣ ವಿದ್ಯಾರ್ಥಿ ಜೀವನದ ಹಂತದಲ್ಲಿ ಉತ್ತಮ ಬೆಳವಣಿಗೆ ಹೊಂದಿ, ಜೀವನ ಸಾರ್ಥಕ್ಯ ಪಡೆಯಬೇಕು ಎಂದು ನುಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಲಯನ್ ಬಸವರಾಜ್ ಬಳ್ಳೊಳ್ಳಿ ವಹಿಸಿದ್ದರು. ಆರಂಭದಲ್ಲಿ ಸಸಿ ನೆಡುವುದರ ಮತ್ತು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವೇದಿಕೆಯ ಮೇಲೆ ಲಯನ್ ಶಾಂತಣ್ಣ ಮುದಗಲ್, ಲಯನ್ ಸುರೇಶ ಸಂಚೈತಿ, ಕೊಪ್ಪಳ ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ಪ್ರಭು ಹೆಬ್ಬಾಳ, ಲಯನ್ ಮನೋಹರ ದಾದಮಿ, ಲಯನ್ ಮಹೇಶ ಮಿಟ್ಟಲಕೋಡ, ಲಯನ್ ಗುರುರಾಜ ಹಲಗೇರಿ, ಶಾಲಾ ಪಾಲಕ ಪ್ರತಿನಿಧಿ ಸೊಪ್ಪಿಮಠ ಮತ್ತು ರಾಘವೇಂದ್ರ, ಶಾಲಾ ಪ್ರಾಚಾರ್ಯ ಎ. ಧನಂಜಯನ್, ಉಪಪ್ರಾಚಾರ್ಯೆ ಪ್ರಮೋದಿನಿ, ಹಿರಿಯ ಶಿಕ್ಷಕ ಎಸ್.ಸಿ. ಹಿರೇಮಠ ಅಲ್ಲದೇ ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕಳೆದ ಶೈಕ್ಷಣಿಕ ವರ್ಷದ ೧೦ ನೇ ತರಗತಿಯಲ್ಲಿ ಗರಿಷ್ಠ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ, ರಾಜ್ಯಮಟ್ಟದಲ್ಲಿ ಕ್ರೀಡೆ ಮತ್ತು ಕಲಾ ವಿಭಾಗದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ, ನಿಬಂಧ ಸ್ಪರ್ಧೆಯಲ್ಲಿ ವಿಜೇತರಾದ ಪಾಲಕ ಮತ್ತು ಶಿಕ್ಷಕರಿಗೆ ಪ್ರಶಸ್ತಿ ವಿತರಣೆ ಮಾಡಲಾಯಿತು. ಶಾಲೆಯ ವತಿಯಿಂದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರೊ. ಬಿ.ಡಿ. ಕೇಶವನ್ ಇವರನ್ನು ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಲಯನ್ ಬಸವರಾಜ್ ಬಳ್ಳೊಳ್ಳಿ ಸನ್ಮಾನಿಸಿದರು.
ಆರಂಭದಲ್ಲಿ ಕು. ಅನಘಾ ಮತ್ತು ಸ್ನೇಹಿತರು ಪ್ರಾರ್ಥಿಸಿದರೆ, ವಿದ್ಯಾರ್ಥಿ ಪ್ರತಿನಿಧಿ ಕು. ರಾಗಿಣಿ ಕುಲಕರ್ಣಿ ಸ್ವಾಗತಿಸಿದರು. ಶಾಲಾ ಪ್ರಾಚಾರ್ಯ ಎ. ಧನಂಜಯನ್ ಶಾಲಾ ವಾರ್ಷಿಕ ವರದಿ ವಾಚನ ಮಾಡಿದರೆ, ಶಿಕ್ಷಕ ವೀರೇಶ ಕೊಪ್ಪಳ ವಿವೇಕಾನಂದರ ಜೀವನ ಮತ್ತು ಸಂದೇಶಗಳ ಕುರಿತಾಗಿ ಮಾತನಾಡಿದರು. ಕೊನೆಯಲ್ಲಿ ಶಾಲಾ ಕ್ಯಾಪ್ಟನ್ ಕು. ಚಂದ್ರಶೇಖರ ವಂದಿಸಿದರು. ಕು. ವಿಭಾ ಕಟ್ಟಿ, ಕು. ಸ್ಪಂದನಾ ಟಿ.ಸಿ., ಕು. ಜ್ಯೋತ್ಸನಾ ಜೋಶಿ ನಿರೂಪಣೆ ಮಾಡಿದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ಸೆಳೆದವು.
ಮುಂಜಾನೆಯ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮೆರಿಟ್ ಪ್ರಶಸ್ತಿಗಳೂ ಸೇರಿದಂತೆ ೨೦೦ ಕ್ಕೂ ಅಧಿಕ ಪ್ರಶಸ್ತಿಗಳನ್ನು ಕೊಪ್ಪಳ ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ಪ್ರಭು ಹೆಬ್ಬಾಳ ವಿತರಿಸಿದರು. ಲಯನ್ ಲಲಿತ್ ಜೈನ್ ಶಾಲಾ ಪರಿಚಾರಕರಿಗೆ ವಿಶೇಷ ಕಾಣಿಕೆಗಳನ್ನು ನೀಡಿದರು. ಶಾಲೆಯ ಆರಂಭದ ದಿನದಿಂದ ಒಂದು ದಿನವೂ ಗೈರು ಹಾಜರಾಗದೇ ಇದ್ದ ೪೨ ವಿದ್ಯಾರ್ಥಿಗಳಿಗೆ ಶಾಲಾ ಪ್ರಾಚಾರ್ಯ ಎ. ಧನಂಜಯನ್ ಇವರು ತಮ್ಮ ಮಾತೋಶ್ರೀ ಶ್ರೀಮತಿ ಗೌರಿ ಅಪ್ಪಾವು ಇವರ ನೆನಪಿಗೋಸ್ಕರ ವಿಶೇಷ ನಗದು ಪ್ರಶಸ್ತಿಯನ್ನು ವಿತರಿಸಿದರು. ಕು. ರಾಹುಲ್, ಕು. ಸಿಂಧೂಶಾ, ಕು. ಪೂಜಾ ಆರ್.ಐ., ಕು. ಶಿವಕುಮಾರ, ಕು. ವಿಜಯಲಕ್ಷ್ಮೀ, ಕು. ನಮ್ರತಾ ಕಾರ್ಯಕ್ರಮ ನಡೆಸಿಕೊಟ್ಟರು.
Please follow and like us:
error