ಸೆಮೆಸ್ಟರ್ ಸಿಸ್ಟಮ್ ತಂದ ಸಂಕಟ.

ಕೊಪ್ಪಳ: ೨೦೧೫ ರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ (೬-೮) ಯ ಆಯ್ಕೆ ಪ್ರಕ್ರಿಯೆಯಲ್ಲಿ ಪದವಿಯ ಅಂಕಗಳಲ್ಲಿ ಶೇ ೩೫ ರಷ್ಟು ಪರಿಗಣಿಸಲಾಗಿದೆ. ಆದರೆ ಹೈದರಾಬಾದ ಕರ್ನಾಟಕ ಜಿಲ್ಲೆಗಲ್ಲಿ ಅಧ್ಯಯನ ಮಾಡಿದ ಅಭ್ಯರ್ಥಿಗಳು ಬಹುತೇಕ ಗುಲ್ಬರ್ಗಾ ಯುವನಿವರ್ಸಿಟಿಯಿಂದ ಪದವಿ ಪಡೆದಿದ್ದು ಶೈಕ್ಷಣಿಕವರ್ಷ ೨೦೦೮ ಕ್ಕಿಂತ ಪೂರ್ವದಲ್ಲಿ ವಾರ್ಷಿಕ ಪರೀಕ್ಷಾ ಪದ್ದತಿಯಿದ್ದು ಸಂಕೀರ್ಣವಾದ ಪಠ್ಯಗಳಿದ್ದವು ಅಲ್ಲದೇ ಯಾವುದೇ ರೀತಿಯ ಆಂತರಿಕ ಅಂಕಗಳು ಇರಲಿಲ್ಲ. ಆದ್ದರಿಂದ ಪರೀಕ್ಷಾ ಫಲಿತಾಂಶದಲ್ಲಿ ಶೇ. ೬೦% ಅಂಗಕಗಳೆಂದರೆ ಕಷ್ಟಸಾಧ್ಯವಾಗಿತ್ತು. ಆದರೆ ೨೦೦೮-೦೯ ನೇ ಸಾಲಿನಿಂದ ‘ಸೆಮಿಸ್ಟರ್’ ಪದ್ದತಿ ಜಾರಿಯಲ್ಲಿದ್ದು ಅವರ ಫಲಿತಾಂಶ ಆಂತರಿಕ ಅಂಕಗಳೊಂದಿಗೆ ಗಗನಕ್ಕೇರಿದೆ. ಆಯ್ಕೆಯಾದ ಅಭ್ಯರ್ಥಿಗಳಲ್ಲಿ ಬಹುತೇಕರು ಸೆಮಿಸ್ಟರ್ ಮಾದರಿಯಲ್ಲಿ ಪದವಿ ಪಡೆದವರಾಗಿದ್ದಾರೆ. ಹೀಗಾಗಿ ನಾನ್ ಸೆಮ್ ಅಭ್ಯರ್ಥಿಗಳಿಗೆ ತೀವ್ರ ನಿರಾಶೆಯಾಗಿದ್ದು ಬಿ.ಈಡಿ, ಟಿಇಟಿ, ಸಿಇಟಿ ಗಳಲ್ಲಿ ಉತ್ತಮ ಅಂಕಗಳಿಸಿದ್ದಾಗ್ಯೂ ಆಯ್ಕೆಯಾಗುವುದು ದುರ್ಲಬವಾಗಿದೆ. ಕಾರಣ ಆಯ್ಕೆ ಮಂಡಳಿ ಈ ನಿಟ್ಟಿನಲ್ಲಿ ಗಮನಹರಿಸಿ ಅಸಮಾನತೆಯನ್ನು ತೊಲಗಿಸಬೇಕಿದೆ ನಾನ್ ಸೆಮಿಸ್ಟರ್ ಪದ್ದತಿಯಲ್ಲಿ ಪದವಿ ಪೂರೈಸಿದ ಅಭ್ಯರ್ಥಿಗಳ ಹಿತವನ್ನು ಕಾಯಬೇಕಿದೆ.
Please follow and like us:

Leave a Reply