ಪ್ಲಾಸ್ಟಿಕ್ ಬಳಕೆ ನಿಷೇಧ : ಉಲ್ಲಂಘಿಸಿದರೆ ದಂಡ

  ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ೪೦ ಮೈಕ್ರಾನ್‌ಗಿಂತಲೂ ಕಡಿಮೆಯ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಮೂರು ದಿನಗಳ ಒಳಗಾಗಿ ನಗರಸಭೆ ವ್ಯಾಪ್ತಿಯಲ್ಲಿ ಎಲ್ಲ ಸಾರ್ವಜನಿಕರು, ವ್ಯಾಪಾರಸ್ಥರು ನಿಷೇಧಿತ ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸುವಂತೆ ನಗರಸಭೆ ಪೌರಾಯುಕ್ತೆ ಬಿ.ಎಂ. ಅಶ್ವಿನಿ ಅವರು ತಿಳಿಸಿದ್ದಾರೆ.
  ಈಗಾಗಲೆ ೪೦ ಮೈಕ್ರಾನ್‌ಗಿಂತ ಕಡಿಮೆಯ ಪ್ಲಾಸ್ಟಿಕ್ ನಿಷೇಧಿಸುವ ಕುರಿತು ಸರ್ವ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಗಿದೆ.  ಅದರಂತೆ ಸಾರ್ವಜನಿಕರು ಮತ್ತು ಮಾರಾಟಗಾರರು ಪ್ಲಾಸ್ಟಿಕ್ ಬಳಕೆ ಹಾಗೂ ಮಾರಾಟವನ್ನು ಮೂರು ದಿನಗಳೊಳಗಾಗಿ ನಿಷೇಧಿಸಿ ನಗರಸಭೆಯೊಂದಿಗೆ ಸಹಕರಿಸಬೇಕು.  ನಿಯಮ ಉಲ್ಲಂಘಿಸಿದರೆ ಕಾನೂನು ರೀತ್ಯಾ ಹೋಲ್ ಸೇಲ್ ಅಂಗಡಿಗೆ ರೂ.೫೦೦೦/- ಹಾಗೂ ಕಿರಾಣಿ ಮತ್ತು ಇನ್ನಿತರ ಅಂಗಡಿಗೆ ರೂ.೫೦೦/- ಗಳ ದಂಡವನ್ನು ವಿಧಿಸಲಾಗುವುದು ಎಂದು ನಗರಸಭೆ ಪೌರಾಯುಕ್ತರಾದ ಬಿ.ಎಂ. ಅಶ್ವಿನಿ ಅವರು ಎಚ್ಚರಿಕೆ ನೀಡಿದ್ದಾರೆ.
Please follow and like us:
error