ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ ಹಾಗೂ ಸಯ್ಯದ್ ಅಭಿಮಾನಿ ಬಳಗ ಉದ್ಘಾಟನೆ


ಕೊಪ್ಪಳ : ಸಯ್ಯದ್ ಪೌಂಡೇಷನ್ ವತಿಯಿಂದ ಸ್ವಾತಂತ್ರೋತ್ಸವದ ನಿಮಿತ್ತ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಬುಕ್ ಗಳನ್ನು ಹಂಚುವ ಕಾರ್‍ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೊಪ್ಪಳ ತಾಲೂಕಿನಾದ್ಯಂತ ಹಮ್ಮಿಕೊಳ್ಳಲಾಗುತ್ತಿರುವ ಈ ಕಾರ್‍ಯಕ್ರಮದ ಉದ್ಘಾಟನೆಯನ್ನು ಅಗಳಕೇರಾ ಗ್ರಾಮದ ಸರಕಾರಿ ಶಾಲೆಯಿಂದ ಆರಂಭಿಸಲಾಗುತ್ತಿದೆ. ದಿನಾಂಕ ೧೫-೮-೨೦೧೧ರಂದು ಬೆಳಿಗ್ಗೆ ಸ್ವಾತಂತ್ರೋತ್ಸವದ ಆಚರಣೆಯ ಸಮಾರಂಭದಲ್ಲಿ ನೋಟ್ ಬುಕ್ ಗಳನ್ನು ವಿತರಿಸಲಾಗುವುದು. ಈ ಕಾರ್‍ಯಕ್ರಮವನ್ನು ಸಯ್ಯದ್ ಅಭಿಮಾನಿಗಳ ಸಂಘ ಅಗಳಕೇರಾವತಿಯಿಂದ ಹಮ್ಮಿಕೊಳ್ಳಲಾಗುತ್ತಿದೆ. ನಂತರ ಶಿವಪುರ, ಶಹಪೂರ ಗ್ರಾಮಗಳಲ್ಲಿಯೂ ನೋಟ್ ಬುಕ್ ವಿತರಣೆ ಕಾರ್‍ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅಂದು ಸಯ್ಯದ್ ಅಭಿಮಾನಿಗಳ ಸಂಘದ ಉದ್ಘಾಟನೆಯೂ ನಡೆಯಲಿದೆ.
Please follow and like us:
error

Related posts

Leave a Comment