ಇಸ್ಲಾಂ ಧರ್ಮ ಶಾಂತಿಯ ಸಂಕೇತ-ಶಾಸಕ ಕೆ.ರಾಘವೇಂದ್ರ ಹಿಟ್ನಾಳ.

ಕೊಪ್ಪಳ-24- ೨೪, ಪ್ರವಾದಿ ಮೊಹಮ್ಮದಪೈಗಂಬರವರ(ಸಅ) ಜಯಂತಿಯ ಅಂಗವಾಗಿ ಆಚರಿಸಲಾಗುವು ಈದ್ ಮಿಲಾದ್ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡು ಮುಸ್ಲಿಂ ಸಮಾಜದ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಕೆ.ರಾಘವೇಂದ್ರ ಹಿಟ್ನಾಳರವರು ಪ್ರತಿಯೊಬ್ಬ ಮುಸಲ್ಮಾನರು ತಮ್ಮ ಜೀವನದಲ್ಲಿ ಪ್ರವಾದಿ ಮೊಹಮ್ಮದ್‌ಪೈಗಂಬರವರ(ಸಅ) ಸಿದ್ಧಾಂತಗಳನ್ನು ಅಳವಡಿಸಿಕೊಂಡು ಸತ್ಯ-ನಿಷ್ಠೆ-ತ್ಯಾಗ-ನೀತಿ-ಧರ್ಮಾಚಾರಣೆಯನ್ನು ಅನುಸರಿಸಿದಾಗ ಮಾತ್ರ ಅವರು ಸ್ವರ್ಗದ ಹಾದಿಯಲ್ಲಿ ಸಾಗುತ್ತಾರೆ. ಬಡವರ, ದೀನದಲಿತ ಸೇವೆ ಹಾಗೂ ಅನ್ಯಧರ್ಮಿಯರ ಜೋತೆ ಸೌಹಾರ್ದತೆ ಹಾಗೂ ಸಹಬಾಳುವೆಯಿಂದ ನಡೆದುಕೊಳ್ಳುವದೆ ಇಸ್ಲಾಂ ಧರ್ಮದ ಮೂಲ ತತ್ವವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಶಾಂತಣ್ಣ ಮುದುಗಲ್, ಅಂದಣ್ಣ ಅಗಡಿ,
ಬಾಳಪ್ಪ ಬಾರಕೇರ, ಸುರೇಶ ಬೂಮರೆಡ್ಡಿ, ದ್ಯಾಮಣ್ಣ ಚಿಲವಾಡಗಿ, ಯಂಕಪ್ಪ ಹೊರತ್ಟನಾಳ,
ಪ್ರಭು ಹೆಬ್ಬಾಳ, ಯಮನೂರಪ್ಪ ನಾಯಕ್, ರಾಮಣ್ಣ ಕಲ್ಲಣ್ಣವರ, ಮುಸ್ಲಿಂ ಸಮಾಜ ಮುಖಂಡರಾದ
ಅಮ್ಜದ್ ಪಟೇಲ, ಬಾಷುಸಾಬ್ ಕತೀಬ್, ಅಜಗರ್ ಅಲಿ ನವಾಭ್, ಸಾಬೇರ ಹುಸ್ಸೇನಿ,
ಮಾನ್ವಿಪಾಷಾ, ಹುಸ್ಸೇನ್ ಪೀರಾ, ಎಮ್.ಪಾಷಾ ಕಾಟನ್, ಧರ್ಮಗುರುಗಳಾದ ನಜೀರ್ ಅಹಮದ್
ತಸ್ಕಿನ್, ಗೌಸ್ ಮೊಹಿದ್ದಿನ್ ಸರದಾರ, ಅಕ್ಬರಪಾಷಾ ಪಲ್ಟನ ಹಾಗೂ
ಪೋಲಿಸ್‌ವರಿಷ್ಠಾಧಿಕಾರಿ ಡಾ||ತ್ಯಾಗರಾಜನ್ ಹಾಗೂ ನಗರ ಗ್ರಾಮೀಣ ಪೋಲಿಸ್ ಅಧಿಕಾರಿಗಳು
ಮತ್ತು  ಇನ್ನೂ ಅನೇಕ ಸಮಾಜದ ಮುಖಂಡರು ಉಪಸ್ಥಿತರಿದ್ದರು.

Please follow and like us:
error