ಸಹಕಾರ ಸಪ್ತಾಹ ಆಚರಣೆ ಅರ್ಥಪೂರ್ಣ ಶಕುಂತಲಾ ಹೆಚ್. ಹುಡೇಜಾಲಿ.

ಕೊಪ್ಪಳ :  ರಂದು ಮಂಗಳವಾರ ಬೆಗ್ಗೆ ೧೦:೩೦ ಗಂಟೆಗೆ ೫೮ ನೇ ಅಖಿಲ ಭಾರತ ಸಪ್ತಾಹದ ಅಂಗವಾಗಿ ಸಹಕಾರಿ ಮಾರಾಟ ಸಂಸ್ಕರಣೆ ಮತ್ತು ಗ್ರಾಹಕರ ದಿನವನ್ನು ಪ್ರ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ. ಹಿರೇಬಗನಾಳದಲ್ಲಿ ಏರ್ಪಡಿಸಲಾಗಿತ್ತು. 
ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಮತಿ ಶಕುಂತಲಾ ಹೆಚ್. ಹುಡೇಜಾಲಿ. ಉಪಾಧ್ಯಕ್ಷರು ಜಿಲ್ಲಾ ಸಹಕಾರ ಯೂನಿಯನ್ ನಿ. ಕೊಪ್ಪಳ ಇವರು ಜ್ಯೋತಿ ಬೆಳಗಿಸಿ, ತಮ್ಮ ಉದ್ಘಾಟನಾ ಭಾಷಣದಲ್ಲಿ ಯುವಕರು ಸಹಕಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಸಂಘದ ಏಳಿಗೆಗೆ ಶ್ರಮವಹಿಸುತ್ತಿರುವುದು. ಹೆಮ್ಮೆಯ ವಿಷಯ. ಅಲ್ಲದೇ ಇತ್ತಿಚಿನ ದಿನಮಾನಗಳಲ್ಲಿ ಯುವಕರಿಂದ ಸಹಕಾರ ಕ್ಷೇತ್ರ ಉನ್ನತ ಸ್ಥಾನದತ್ತ ಮುನ್ನುಗ್ಗುತ್ತಿದೆ. ಇಂತಹ ಶುಭ ಸಂದರ್ಭದಲ್ಲಿ ಇಲ್ಲಿಯವರೆಗೂ ಸಧನೆಗಳನ್ನು ಪರಾಮರ್ಶಿಸಿಕೊಂಡು ಸಹಕಾರ ಸಪ್ತಾಹದ ಆಚರಣೆಯನ್ನು ಅರ್ಥಪೂರ್ಣೊಗೋಳಿಸಬೇಕೆಂದು ಕರೆನಿಡಿದರು. 
ಮುಖ್ಯ ಅತಿಥಿಗಳಾಗಿ   ಸಂಗಮೇಶ ಡಂಬಳ ಅಧ್ಯಕ್ಷರು, ಪಿಕಾರ್ಡ ನಿ. ಕೊಪ್ಪಳ ಇವರು ಮಾತನಾಡುತ್ತ ಸಹಕಾರ ಸಂಘದಲ್ಲಿ ಒಬ್ಬರಿಗೊಬ್ಬರೂ ಪರಸ್ಪರ ಸಹಕಾರ ದಿಂದ ಕೂಡಿಕೊಂಡು ಗ್ರಾಹಕರಿಗೆ ಹಾಗೂ ಸಂಘದ ಏಳಿಗೆಗಾಗಿ ಶ್ರಮವಹಿಸಿದಲ್ಲಿ ಸಹಕಾರ ಕ್ಷೇತ್ರದಿಂದ ಅನೇಕ ಪ್ರಯೋಜನಗಳನ್ನು ಪಡೆದುಕೊಳ್ಳಲು ಎಲ್ಲರಿಗೂ ಸಹಕಾರಿಯಾಗಲಿದೆ. ಎಂದರು ಇನ್ನೂರ್ವ ಅಥಿತಿಗಳಾದ   ಬಸವರಾಜ ಪಾಟೀಲ. ಸಹಾಯಕ ನಿರ್ದೇಶಕರು. ಸಹಕಾರ ಸಂಘಗಳ ಲೆಕ್ಕ-ಪರಿಶೋಧನೆ ಇಲಾಖೆ, ಕೊಪ್ಪಳ ಇವರು ಮಾತನಡುತ್ತಾ. ಸಹಕಾರ ಕ್ಷೇತ್ರದಲ್ಲಿ ಎಲ್ಲರಿಗೂ ಸರಿ ಸಮಾನವಾದ ಅಧಿಕಾರವಿದ್ದು, ಪ್ರತಿಯೊಂದು ಹಳ್ಳಿಗಳಲ್ಲಿ ಸಹಕಾರ ಸಂಘಗಳನ್ನು ಹುಟ್ಟುಹಾಕಿ ಆ ಸಂಘದಿಂದ ಅನುಕೂಲವಾಗುವ ಎಲ್ಲಾ ಪ್ರಯೋಜನ ಪಡೆಯಲು ಸಲಹೆ ನೀಡಿದರು. 
ಕಾರ್ಯಕ್ರಮದ ಅಧ್ಯಕ್ಷತೆಯನ್ನು   ಜಡಿಯಪ್ಪ ಬಂಗಾಳಿ. ಅಧ್ಯಕ್ಷರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಗ ನಿ. ಹಿರೇಬಗನಾಳ ಇವರು ವಹಿಸಿದ್ದರು. 
ವೇದಿಕೆಯಲ್ಲಿ   ಹೇಮಣ್ಣ ದೇವರಮನಿ. ಅಧ್ಯಕ್ಷರು, ಗ್ರಾಮ ಪಂಚಾಯತ, ಹಿರೇಬಗನಾಳ  ಕೆ. ರಾಧಾಕೃಷ್ಣ ನಿರ್ದೇಶಕರು, ಟಿ.ಎ.ಪಿ.ಸಿ.ಎಂ.ಎಸ್ ಕೊಪ್ಪಳ, ವಸಂತ ದಿಕ್ಷೀತ್, ಶಂಕ್ರಪ್ಪ ಕೊರಗಲ್, ಫಕಿರಗೌಡ್ರ, ಶರಣಪ್ಪ ಪಲ್ಲೇದ, ದುರಗಪ್ಪ, ರಾಮಲಿಂಗನಗೌಡ್ರ, ಶೇಷಪ್ಪ ಮಜ್ಜಿಗಿ, ಶಶಿಮಠ ಪಿ.ಎಲ್.ಡಿ ಬ್ಯಾಂಕ್ ವ್ಯವಸ್ಥಾಪಕರು, ಕೊಪ್ಪಳ   ಶರಣಬಸಪ್ಪ ಕಾಟ್ರಳ್ಳಿ. ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಸಹಕಾರ ಯೂನಿಯನ್ ನಿ. ಕೊಪಪ್ಳ ರಾಜಶೇಖರ ಎಂ. ಹೊಸಮನಿ. ವ್ಯವಸ್ಥಾಪಕರು, ಜಿಲ್ಲಾ ಸಹಕಾರ ಯೂನಿಯನ್ ನಿ. ಕೊಪ್ಪಳ ಮತ್ತು ಸಿದ್ದಯ್ಯ ಹಿರೇಮಠ ಮು.ಕಾ.ನಿ ಪ್ರಾತಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ. ಬಗನಾಳ. ಇವರುಗಳು ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಶಾಲಾ ಬಾಲಕಿಯರು ಪ್ರಾರ್ಥನೆ ಮಾಡಿದರು. ಕೊಪ್ಪಳ ಜಿಲ್ಲಾ ಸಹಕಾರ ಯೂನಿಯನ್ನಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಶರಣಬಸಪ್ಪ ಕಾಟ್ರಳ್ಳಿಯವರು ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.  ರಾಜಶೇಖರ ಎಂ. ಹೊಸಮನಿ. ವ್ಯವಸ್ಥಾಪಕರು, ಜಿಲ್ಲಾ ಸಹಕಾರ ಯೂನಿಯನ್ ನಿ. ಕೊಪ್ಪಳ ನಿರುಪಿಸಿದರು. ಹಾಗೂ  ನಿಂಗಪ್ಪ ಕರಡೋಣಿ ಇವರು ವಂದಿಸಿದರು. 

Related posts

Leave a Comment