ಈಶ್ವರಪ್ಪ ಸೆಕ್ಸಾಲಜಿಸ್ಟಾ?

ಕೊಪ್ಪಳ :  ಈಶ್ವರಪ್ಪನವರಂತೆ ಕೀಳು ಭಾಷೆಯಲ್ಲಿ ಮಾತನಾಡಲೂ ನಮಗೂ ಬರುತ್ತೆ. ಅದು ಸಂಸ್ಕಾರವಲ್ಲ. ಪಕ್ಷದ ರಾಜ್ಯಾಧ್ಯಕ್ಷರಾ ಗಿದ್ದಂತವರು, ಉಪ ಮುಖ್ಯಮಂತ್ರಿಯಾದಂತವರು  ಇಂತಹ ಕೀಳು ಮಟ್ಟದ ಭಾಷೆ ಉಪಯೋಗಿಸಬಾರದು. ದೇಶದ ಪ್ರಧಾನಿಯನ್ನು  ಹಿಜಡಾ  ಎನ್ನುವ  ಮೂಲಕ ಇಡೀ ರಾಷ್ಟ್ರಕ್ಕೆ ಅಪಮಾನ ಮಾಡಿದ್ದಾರೆ. ಅವರು ದೇಶದ ಜನತೆಯ ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್ ಪಕ್ಷದ ವಕ್ತಾರ,ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ ಹೇಳಿದರು. ಅವರು ನಗರದ ಮೀಡಿಯಾ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
                          ಕ್ಷಮೆ ಕೋರದಿದ್ದರೆ ಈಶ್ವರಪ್ಪನವರ ವಿರುದ್ದ  ಮಾನಹಾನಿ ಮೊಕದ್ದಮೆ ಹೂಡಲು ಪಕ್ಷ ತಿರ್ಮಾನಿಸಿದೆ . ಇವರೇನು ಸೆಕ್ಸಾಲಜಿಸ್ಟಾ?  ಶಿಸ್ತು ಎನ್ನುವ  ಆರ್ ಎಸ್ಎಸ್ ಮತ್ತು ಬಿಜೆಪಿಯಲ್ಲಿ ಈಶ್ವರಪ್ಪನವರು ಕಲಿತಿರುವ ಶಿಸ್ತು ಇದೇನಾ?  ಎಂದು ಪ್ರಶ್ನಿಸಿದರು.  ಕಾಂಗ್ರೆಸ್ ಪಕ್ಷದ ನಾಯಕರು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಈಶ್ವರಪ್ಪ  ಇತಿಹಾಸದ ಬಗ್ಗೆ ತಿಳಿದುಕೊಳ್ಳಲಿ. ನಾಲಿಗೆ ಹಿಡಿತದಲ್ಲಿಟ್ಟುಕೊಳ್ಳಲಿ ಎಂದರು. 
  ಮೌಡ್ಯ ನಿಷೇದ  ಪ್ರಶ್ನೆಗೆ ಉತ್ತರಿಸಿದ ರಾಯರಡ್ಡಿ- ಧಾರ್ಮಿಕ ನಂಬಿಕೆಗಳೇ ಬೇರೆ, ಮೂಢ ನಂಬಿಕೆಗಳೇ ಬೇರೆ ಯಾವುದೇ ಸರಕಾರ ವೈಯುಕ್ತಿಕವಾದಂತಹ ಧಾರ್ಮಿಕ ನಂಬಿಕೆಯನ್ನು ನಿಷೇಧಿಸಲಾಗುವುದಿಲ್ಲ. ಸಂವಿಧಾನವೇ ಜನತೆಗೆ  ತಾವು ನಂಬಿದ ಧಾರ್ಮಿಕತೆಯನ್ನು ಆಚರಿಸುವ ಹಕ್ಕನ್ನು ನೀಡಿದೆ. ಆದರೆ  ಮೌಢ್ಯವನ್ನು ಸಹಿಸಲಾಗುವುದಿಲ್ಲ ಎಂದು ಹೇಳಿದರು. ಈ ಸಂದರ್ಭದಲ್ಲಿ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ, ಮಹೇಶ ಹಳ್ಳಿ.,ಜಾಕೀರ ಕೆ.ಮಂಜುನಾಥ  ಉಪಸ್ಥಿತರಿದ್ದರು. 
Please follow and like us:
error