ಕೆಂಬಣ್ಣದ ಚಿತ್ರ

ಸದನಕ್ಕೆ ಕಳಿಸುತ್ತೇವೆ 
ನಿಮ್ಮನ್ನು ಯಾಕೆ?
ನೀಲಿ ಚಿತ್ರಗಳನ್ನು ನೋಡೋಕೆ 
ರೈತರು ಸಾಯುತ್ತಿದ್ದರೂ ನಗೋಕೆ
ಪಕ್ಷಾಂತರ ಮಾಡಿ ಪಲ್ಲಂಗವೇರೋಕೆ
ನೆಲ ಬಗಿದು ಕೊಳ್ಳೆ ಹೊಡೆಯೋಕೆ
ಮಹಿಳೆಯರ ಮಾನ ಹರಣ ಮಾಡೋಕೆ
ಎಂದು ತಿಳಿದುಕೊಂಡಿರಾದರೆ ಜೋಕೆ !
ಸದನಕ್ಕೆ ಕಳಿಸುವುದು 
ಮದನಲೀಲೆ ಮಾಡಲಿಕ್ಕಲ್ಲ
ಜನದನಿಯ ಕೇಳಲಿಯೆಂದು
ನಾಡು ಮುನ್ನಡೆಸಲಿಯೆಂದು
ನಮ್ಮ ದನಿಯ ಕೇಳದಿದ್ದರೆ
ಕರುಳ ಬಗೆಯುತ್ತೇವೆ
ಕೊರಳ ಬಿಗಿಯುತ್ತೇವೆ
ಹೆಡೆಮುರಿಗೆ ಕಟ್ಟುತ್ತೇವೆ
ಬರಲಿ ಚುನಾವಣೆ
ತೋರಿಸುತ್ತೇವೆ ಕೆಂಬಣ್ಣದ ಚಿತ್ರ 
– ಅಲ್ಲಮಪ್ರಭು ಬೆಟ್ಟದೂರ 

Leave a Reply