ಸಾಹಿತಿ ಗೋನಾಳರಿಂದ ಮತಯಾಚನೆ.

ಕೊಪ್ಪಳ, ಜ. ೩೧  ಕನ್ನಡ ಸಾಹಿತ್ಯ ಪರಿಷತ್ತಿನ ನಿಯೋಜಿತ ಅಭ್ಯರ್ಥಿ ಸಾಹಿತಿ ಜಿ. ಎಸ್.  ಗೋನಾಳ ಅವರು ಕಿನ್ನಾಳ ರಸ್ತೆಯಲ್ಲಿನ ಆಜೀವ ಸದಸ್ಯರ ಮನೆಗಳಿಗೆ ತೆರಳಿ ಕಸಾಪ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದು ತಮ್ಮ ಅಮೂಲ್ಯವಾದ ಮತಗಳನ್ನು ನೀಡುವ ಮೂಲಕ ನನ್ನನ್ನು ಆರಿಸಿ ತರಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರಾದ ಲಚ್ಚಣ್ಣ ಹಳೆಪೇಟೆ, ಪರಶುರಾಮ ಬಣ್ಣದ, ಕೋಮಲಾ ಕುದರಿಮೋತಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಜಗದಯ್ಯ ಸಾಲಿಮಠ, ಹನುಮಂತಕುಮಾರ ಮುಧೋಳ, ಯಮನೂರಪ್ಪ ಭಜಂತ್ರಿ, ವೈ. ಬಿ. ಜೂಡಿ, ಮಹೇಶಬಾಬು ಸುರ್ವೆ ಸೇರಿದಂತೆ ಇತರರು ಇದ್ದರು.
    ಆಜೀವ ಸದಸ್ಯರಲ್ಲಿ ಜಿ. ಎಸ್. ಗೋನಾಳ ಅವರು ತಮ್ಮ ಸಂಘಟನೆ, ಸಾಹಿತ್ಯ ಸೇವೆ, ಪುಸ್ತಕ ಪ್ರಕಾಶನ, ಪತ್ರಿಕೋದ್ಯಮ, ಸಮಾಜ ಸೇವೆ ಸಲ್ಲಿಸಿದ್ದನ್ನು ಮನವರಿಕೆ ಮಾಡಿ ಕೊಡುವ ಮೂಲಕ ಕ್ರಿಯಾಶೀಲ ವ್ಯಕ್ತಿಯಾದ ತಮ್ಮನ್ನು ಸಾಹಿತ್ಯ ಸೇವೆಗೆ, ಕನ್ನಡದ ತೇರನ್ನು ಎಳೆಯಲು ಅವಕಾಶ ಮಾಡಿಕೊಡಲು ಮನವಿ ಮಾಡಿದರು.

Please follow and like us:
error