ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

  ಪೊಲೀಸ್ ಇಲಾಖೆಯಲ್ಲಿ ಖಾಲಿಯಿರುವ ವಿವಿಧ ವೃಂದದ ಒಟ್ಟು ೩೯೭೩ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
  ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಕಾನ್ಸ್‌ಟೇಬಲ್ (ಪುರುಷ ಮತ್ತು ಮಹಿಳೆ) ೧೭೩೧ ಹುದ್ದೆ, ವಿಶೇಷ ರಿಸರ್ವ್ ಪೊಲೀಸ್ ಕಾನ್ಸ್‌ಟೇಬಲ್ (ಪುರುಷ)-೧೨೫೦, ಇಂಡಿಯಾ ರಿಸರ್ವ್ ಬೆಟಾಲಿಯನ್ ಕಾನ್ಸ್‌ಟೇಬಲ್- ೭೫೦, ಸಬ್-ಇನ್ಸ್‌ಪೆಕ್ಟರ್ (ಪುರುಷ ಮತ್ತು ಮಹಿಳೆ)- ೧೩೯, ವಿಶೇಷ ರಿಸರ್ವ್ ಸಬ್-ಇನ್ಸ್‌ಪೆಕ್ಟರ್ (ಪುರುಷ)- ೭೩ ಮತ್ತು ಇಂಡಿಯಾ ರಿಸರ್ವ್ ಬೆಟಾಲಿಯನ್ ಸಬ್-ಇನ್ಸ್‌ಪೆಕ್ಟರ್- ೩೦ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.  ಫೆ. ೧೫ ರವರೆಗೆ ಎಲ್ಲ ಕೆಲಸದ ದಿನಗಳಂದು ( ಕಚೇರಿ ಸಮಯದಲ್ಲಿ) ೧೫೦ ರೂ. ಎಸ್.ಸಿ./ಎಸ್.ಟಿ./ಪ್ರವರ್ಗ-೧ ಮತ್ತು ೩೦೦ ರೂ. ಇತರೆ ಅಭ್ಯರ್ಥಿಗಳು ಶುಲ್ಕ ನೀಡಿ ನಿಗದಿತ ಅರ್ಜಿಗಳನ್ನು ಮುನಿರಾಬಾದಿನ ರಿಸರ್ವ್ ಬೆಟಾಲಿಯನ್ ಕಚೇರಿಯಲ್ಲಿ ಮಾರಾಟ ಮಾಡಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳು ಪಡೆಯಬಹುದು. ಆನ್ ಲೈನ್ ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶವಿದ್ದು, ವೆಬ್‌ಸೈಟ್  www.ksp.gov.in

Please follow and like us:
error