ಕೋಡಗುಂಟಿ ಪ್ರಶಸ್ತಿ ೨೦೧೦

ಬಂಡಾರ ಪ್ರಕಾಶನ, ಮಸ್ಕಿ ಇವರು ಕನ್ನಡ ಸಂಶೋಧನೆಗೆ ಮೊದಲ ಆದ್ಯತೆಯನ್ನು ಕೊಟ್ಟು ಕೆಲಸವನ್ನು ಮಾಡುತ್ತಿದ್ದಾರೆ. ಕನ್ನಡ ಸಂಶೋಧನೆಯನ್ನು ಪ್ರೋತ್ಸಾಹಿಸುವ ಮತ್ತು ಯುವ ಸಂಶೋಧಕರನ್ನು ಗುರುತಿಸಿ ಅವರನ್ನು ಉತ್ತೇಜಿಸುವ ತುಂಬಾ ಮುಖವಾದ ಉದ್ದೇಶಗಳಿಂದ ಕನ್ನಡ – ಕರ್‍ನಾಟಕಗಳಿಗೆ ಸಂಬಂಧಿಸಿದ ಎಂ.ಪಿಲ್., ಪಿಎಚ್.ಡಿ.ಯಂತಾ ಪದವಿಗಳಿಗಾಗಿ ಸಿದ್ದಪಡಿಸಿದ ಸಂಶೋಧನಾ ಪ್ರಬಂಧಗಳಿಗಾಗಿ ಕೋಡಗುಂಟಿ ಪ್ರಶಸ್ತಿಯನ್ನು ೨೦೦೬ರಿಂದ ಆರಂಭಿಸಿದೆ. ಪ್ರತಿವರುಶದಂತೆ ಈ ಸಾಲಿನ ಪ್ರಶಸ್ತಿಗೆ ೨೦೧೦ರಲ್ಲಿ ಪದವಿಯನ್ನು ಪಡೆದ ಕನ್ನಡ ಮಾತು, ಸಾಹಿತ್ಯ, ಸಂಸ್ಕ್ರುತಿ, ಜನಪದ, ಕಲೆ, ಶಿಲ್ಪಕಲೆ, ರಂಗಬೂಮಿ, ಇತಿಹಾಸ, ನೀರು, ನೆಲ, ಗಾಳಿ, ಭೂಗೋಳ, ಪರಿಸರ ಹೀಗೆ ಒಟ್ಟಾರೆ ಕನ್ನಡ ಕರ್‍ನಾಟಕಕ್ಕೆ ಸಂಬಂಧಿಸಿದ ಸಂಶೋಧನಾ ಪ್ರಬಂಧಗಳನ್ನು ಪ್ರಶಸ್ತಿಗಾಗಿ ಕಳಿಸಿಕೊಡಲು ಕೋರಲಾಗಿದೆ. ಜಗತ್ತಿನ ಯಾವುದೆ ವಿಶ್ವವಿದ್ಯಾಲಯದಿಂದ ಪದವಿಯನ್ನು ಪಡೆದಿರಬಹುದು. ಪ್ರಬಂಧ ಕನ್ನಡ ಇಲ್ಲವೆ ಇಂಗ್ಲೀಶಿನಲ್ಲಿ ಇರಬಹುದು. ಉತ್ತಮವಾದ ಒಂದು ಪ್ರಬಂಧವನ್ನು ಪ್ರಶಸ್ತಿಗೆ ಆರಿಸಲಾಗುವುದು ಮತ್ತು ಅದನ್ನು ಪ್ರಕಾಶನದಿಂದ ಪ್ರಕಟಿಸಲಾಗುವುದು. ಅಲ್ಲದೆ ಉತ್ತಮ ಎಂದು ಪರಿಗಣಿಸಿದ ಪ್ರಬಂಧಗಳನ್ನು ಪ್ರಕಟಣೆಗೆ ಆಯ್ಕೆ ಮಾಡಲಾಗುವುದು. ಪ್ರಶಸ್ತಿಗೆ ಪ್ರಬಂಧದ ಒಂದು ಪ್ರತಿ, ಎರಡು ಪುಟಗಳ ಸಾರಾಲೇಖ ಮತ್ತು ಪದವಿ ಪಡೆದ ಪ್ರಮಾಣ ಪತ್ರದ ಪ್ರತಿ ಇವುಗಳನ್ನು ಕಳಿಸಿಕೊಡಲು ಕೇಳಲಾಗಿದೆ. ಪ್ರಬಂದ ಕಳಿಸಲು ಕೊನೆಯ ದಿನ ಅಗಸ್ಟ್ ೩೦. ಪ್ರಬಂಧ ಕಳಿಸಬೇಕಾದ ವಿಳಾಸ,

ಪರಶುರಾಮ ಕೋಡಗುಂಟಿ, ಸಂಪಾದಕ, ಬಂಡಾರ ಪ್ರಕಾಶನ, ಮಸ್ಕಿ ೫೮೪೧೨೪, ಜಿ. ರಾಯಚೂರು, ಕರ್‍ನಾಟಕ.
ಹೆಚ್ಚಿನ ವಿಚಾರಕ್ಕೆ ಮಾತನಾಡಿ ೯೯೧೬೦ ೫೩೦೫೭, ೯೮೪೫೯೭೬೧೪೮,

Please follow and like us:
error