ಶಿಸ್ತುಬದ್ಧ ಜೀವನದಿಂದ ಮಾನಸಿಕ ಆರೋಗ್ಯ ಸಾಧ್ಯ ಕೆ. ನಾಗರತ್ನ.

ಕೊಪ್ಪಳ, ಅ.೧೪ (ಕ ವಾ) ಸಣ್ಣ ಮಕ್ಕಳಿಂದ ಹಿಡಿದು ವಯೋವೃದ್ಧರ ವರೆಗೂ ಸಾಮಾನ್ಯವಾಗಿ ಕಾಡುತ್ತಿರುವ ಮಾನಸಿಕ ಅನಾರೋಗ್ಯವು ಮನುಷ್ಯನ ದೈಹಿಕ, ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಶಿಸ್ತುಬದ್ಧ ಜೀವನವನ್ನು ಅಳವಡಿಸಿಕೊಳ್ಳುವ ಮೂಲಕ ಮಾನಸಿಕ ಆರೋಗ್ಯವನ್ನು ಪಡೆದುಕೊಳ್ಳಲು ಸಾಧ್ಯ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ನಾಗರತ್ನ ಅವರು ಹೇಳಿದರು.
     ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ಬುಧವಾರ ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ಏರ್ಪಡಿಸಲಾಗಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ. ನಾಗರತ್ನ ಅವರು ಮಾತನಾಡಿದರು.
     ಸಮಾಜದಲ್ಲಿ ದೈಹಿಕ ರೋಗಗಳಿಗೆ ಚಿಕಿತ್ಸೆ ಪಡೆಯಲು ಆದ್ಯತೆ ನೀಡುವಂತೆ, ಮಾನಸಿಕ ರೋಗಗಳಿಗೂ ಕೂಡಾ ಚಿಕಿತ್ಸೆ ಪಡೆಯದೇ ಕಡೆಗಣಿಸಲಾಗುತ್ತಿದೆ. ನಡುವಳಿಕೆಯಲ್ಲಿ ಏರುಪೇರಾದಾಗ ಮಾನಸಿಕ ಅಸ್ವಸ್ಥತೆ ಉಂಟಾಗುತ್ತದೆ. ದೈಹಿಕ ಆರೋಗ್ಯದಂತೆ ಮಾನಸಿಕ ಆರೋಗ್ಯವನ್ನು ಕೂಡಾ ಕಾಪಾಡಿಕೊಳ್ಳುವುದು ಅತಿಮುಖ್ಯವಾಗಿದೆ. ಈ ಹಿಂದೆ ಮಾನಸಿಕ ರೋಗಿಗಳನ್ನು ಸಮಾಜ ಬೇರೆ ರೀತಿಯಲ್ಲಿ ನೋಡುತ್ತಿತ್ತು. ಅವರನ್ನು ಹುಚ್ಚರು ಎಂದು ಕರೆದು ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಲಾಗುತ್ತಿತ್ತು. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಸರ್ಕಾರ ೧೯೮೭ ರಲ್ಲಿಯೇ ಮಾನಸಿಕ ಆರೋಗ್ಯ ಕಾಯ್ದೆಯನ್ನು ಜಾರಿಗೊಳಿಸಿದೆ. ಈ ಕಾಯ್ದೆಯಡಿ ಮಾನಸಿಕ ಅಸ್ವಸ್ಥರಿಗೆ ರಕ್ಷಣೆ ಹಾಗೂ ವಿಶೇಷ ಹಕ್ಕುಗಳನ್ನು ನೀಡಲಾಗಿದೆ. ನಮ್ಮ ಸುತ್ತಮುತ್ತಲಿನವರೆಲ್ಲರೂ ಮಾನಸಿಕ ಸಧೃಡತೆ ಪಡೆದುಕೊಂಡಿದ್ದೇ ಆದಲ್ಲಿ ನಾವು ಆಚರಿಸುತ್ತಿರುವ ಈ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಗೆ  ಸಾರ್ಥಕತೆ ಲಭಿಸಲಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ನಾಗರತ್ನ  ಅವರು ಅಭಿಪ್ರಾಯಪಟ್ಟರು.
     ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ದಶರಥ ಮಾತನಾಡಿ, ಮೆದುಳಿನಲ್ಲಿ ಉಂಟಾಗುವ ರಾಸಾಯನಿಕ ಏರುಪೇರಿನಿಂದಾಗಿ ಮನುಷ್ಯನಲ್ಲಿ ಮಾನಸಿಕ ಅಸ್ವಸ್ಥತೆ ಕಂಡುಬರುತ್ತದೆ. ಈ ಮಾನಸಿಕ ಅಸ್ವಸ್ಥತೆಯು ಗುಣಪಡಿಸಬಹುದಾಗಿರುವುದರಿಂದ ಮಾನಸಿಕ ಅಸ್ವಸ್ಥರನ್ನು ಸಮಾಜವು ಸಮಾನತೆಯಿಂದ ಕಾಣಬೇಕಿದೆ. ಪ್ರಸ್ತುತ ದಿನಮಾನಗಳಲ್ಲಿ ಹೆಚ್ಚುತ್ತಿರುವ ರೈತರ ಆತ್ಮಹತ್ಯೆ ಪ್ರಕರಣಗಳೂ ಕೂಡಾ ಮಾನಸಿಕ ಅಸಮತೋಲನಕ್ಕೆ ನಿದರ್ಶನಗಳಾಗಿವೆ. ಆದ್ದರಿಂದ ನಾವೆಲ್ಲರೂ ಯೋಗ, ಧ್ಯಾನ, ಮನರಂಜನೆಗಳ ಮೂಲಕ ಮಾನಸಿಕ ಒತ್ತಡ ಜೀವನದಿಂದ ಮುಕ್ತಿ ಹೊಂದಿ ಮಾನಸಿಕ ಆರೋಗ್ಯವನ್ನು ಪಡೆಯಬಹುದಾಗಿದೆ ಎಂದು ಸಲಹೆ ನೀಡಿದರು.
     ಕಿರಿಯ ಸಿವಿಲ್ ನ್ಯಾಯಾಧೀಶೆ ಕವಿತಾ ಶಿವರಾಯ ಉಂಡೋಡಿ ಮಾತನಾಡಿ, ಪ್ರತಿವರ್ಷವೂ ಅಕ್ಟೋಬರ್ ೧೦ ರಂದು ಒಂದು ವಿಶೇಷ ಘೋಷಣೆಯೊಂದಿಗೆ ಜಗತ್ತಿನಾದ್ಯಂತ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಆರೋಗ್ಯಯುತ ಸಮಾಜವನ್ನು ನಿರ್ಮಾಣ ಮಾಡುವುದು ಈ ದಿನಾಚರಣೆಯ ಮುಖ್ಯ ಉದ್ಧೇಶವಾಗಿದೆ. ಇಂದು ಮಕ್ಕಳ ಮೇಲೆ ಪಾಲಕರು ಹೆಚ್ಚಿನ ಒತ್ತಡ ಹೇರಲಾಗುತ್ತಿದ್ದಾರೆ. ಇದರಿಂದ ಮಕ್ಕಳು ಖಿನ್ನತೆಗೊಳಗಾಗಿ ಅವರ ಸಾಮರ್ಥ್ಯ ಕುಂಠಿತಗೊಳ್ಳುತ್ತದೆ. ಇದು ಹಲವಾರು ಅವಘಡಗಳಿಗೆ ಕಾರಣವಾಗುವುದರಿಂದ ಪಾಲಕರು, ಮಕ್ಕಳಲ್ಲಿ ಕಂಡುಬರುವ ಖಿನ್ನತೆಯನ್ನು ಪ್ರಾಥಮಿಕ ಹಂತದಲ್ಲಿಯೇ ಗುರುತಿಸಿ, ಚಿಕಿತ್ಸೆ
     ಮನೋವೈದ್ಯ ಡಾ||ಎಂ.ಎಂ.ಕಟ್ಟಿಮನಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವಸಂತಪ್ರೇಮಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.  ಮಾನಸಿಕ ತಜ್ಞ ಡಾ|| ಕೃಷ್ಣ ಓಂಕಾರ, ಮಾನಸಿಕ ರೋಗದ ವ್ಯಕ್ತಿತ್ವ ವಿಕಾರಗಳು ಹಾಗೂ ಸೋಂಕು ರೋಗ ಹರಡುವ ಮುಂಜಾಗ್ರತೆ ವಹಿಸುವ ಕುರಿತು ಉಪನ್ಯಾಸ ನೀಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ||ಶ್ರೀಕಾಂತ ಬಾಸೂರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ||ಬಿ.ಎಸ್.ಲೋಕೇಶ,  ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ||ಎಸ್.ಕೆ. ದೇಸಾಯಿ, ತಹಶೀಲ್ದಾರ ಪುಟ್ಟರಾಮಯ್ಯ, ಜಿಲ್ಲಾ ಸರ್ಕಾರಿ ವಕೀಲ ಬಿ.ಶರಣಪ್ಪ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ  ಆರ್.ಬಿ. ಪಾನಘಂಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕೊಡಿಸುವುದು ಅವಶ್ಯವಾಗಿದೆ. ಜೀವನದಲ್ಲಿ ಎಲ್ಲರೂ ಕೂಡಾ ಒಂದಿಲ್ಲೊಂದು ಕಾರಣದಿಂದ ಮಾನಸಿಕ ಒತ್ತಡವನ್ನು ಅನುಭವಿಸಿರುತ್ತಾರೆ. ಇಂದಿನ ಬಿಡುವಿಲ್ಲದ ಆಧುನಿಕ ಜೀವನ ಶೈಲಿಯ ಒತ್ತಡದ ಬದುಕಿನಲ್ಲಿ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಧ್ಯಾನ ಅಥವಾ ಯೋಗದಂತಹ ಸೃಜನಾತ್ಮಕ ಚಟುವಟಿಕೆಗಳಿಗೆ ಸಮಯ ಮೀಸಲಿಡುವ ಮೂಲಕ ಮಾನಸಿಕ ಸ್ವಾಸ್ಥತೆ ಹೊಂದಿ, ಉತ್ತಮ ಜೀವನ ನಡೆಸಲು ಅವರು ಕರೆ ನೀಡಿದರು.

Please follow and like us:
error