ಭಾಗ್ಯನಗರ ಮಲ್ಟಿಸ್ಪೆಷಾಲಿಟಿ ಉಚಿತ ಆರೋಗ್ಯ ಶಿಬಿರ.

ಕೊಪ್ಪಳ. ಜ.೧೦. ತಾಲೂಕಿನ ಭಾಗ್ಯನಗರದಲ್ಲಿ ಶ್ರೀ ಶಿರಡಿ ಸಾಯಿ ಭಿಕ್ಷಾ ಕೇಂದ್ರದ, ಯುವಚೇತನ ಶಿವರಾಜ ತಂಗಡಗಿ ವೇದಿಕೆ, ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ ಸಹಯೋಗದೊಂದಿಗೆ ಹೃದಯ, ಮಧುಮೇಹ, ಸ್ತ್ರೀ ರೋಗ, ಮೂಳೆ ರೋಗ ಕುರಿತು ಉಚಿತ ಬೃಹತ್ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮ ಸಂಘಟಕ ಮಂಜುನಾಥ ಜಿ. ಗೊಂಡಬಾಳ
ತಿಳಿಸಿದ್ದಾರೆ. ಜನವರಿ ೧೩ ರಂದು ಬುಧವಾರ ಬೆಳಿಗ್ಗೆ ೯ ರಿಂದ ಭಾಗ್ಯನಗರದ ಪಟ್ಟಣ
ಪಂಚಾಯತ ಆವರಣದಲ್ಲಿ ಹಮ್ಮಿಕೊಂಡಿರುವ ಉಚಿತ ಶಿಬಿರದಲ್ಲಿ ಹೃದಯಕ್ಕೆ ಸಂಬಂಧಿಸಿದ ಇಸಿಜಿ,
ಎಕೋ, ಶುಗರ್ ಮುಂತಾದ ಪರೀಕ್ಷೆಗಳನ್ನು ಸಂಪೂರ್ಣ ಉಚಿತವಾಗಿ ಮಾಡಲಾಗುವದು.
ಕಾರ್ಯಕ್ರಮದಲ್ಲಿ ಮುದ್ರಾ ಬ್ರಹ್ಮ, ಮುದ್ರಾ ರಹಸ್ಯ ಖ್ಯಾತಿಯ ಶ್ರೀ ಲಕ್ಷ್ಮೀ
ಶ್ರೀನಿವಾಸ ಗುರೂಜಿಯವರು ಆಗಮಿಸಿ ಮುದ್ರೆಗಳ ಕುರಿತು, ಮಾಟ, ಮಂತ್ರ-ತಂತ್ರಗಳ ಕುರಿತು
ವಿಶೇಷ ಮಾಹಿತಿ ನೀಡುವರು.
    ನಾರಾಯಣ ಹೃದಯಾಲಯದ ವೈದ್ಯ ಡಾ|| ಮಂಜುನಾಥ ಎಂ.ಬಿ., ಕೀಲು ಮೂಳೆ ವೈದ್ಯ
ಡಾ|| ವಿಜಯೆಂದ್ರ ಶಹಪೂರ, ಮಧುಮೇಹ ಮತ್ತು ಪಂಚಕರ್ಮ ವೈದ್ಯ ಡಾ|| ಸುನೀಲ ಅರಳಿ, ರೆಡಿಯೋಲಜಿಷ್ಟ್ ಡಾ|| ಅಶೋಕಕುಮಾರ ಜಿ. ಗೊಂಡಬಾಳ, ಸ್ತ್ರೀರೋಗ ವೈದ್ಯರಾದ ಡಾ|| ರಾಧಿಕಾ ಅರಳಿ, ಸಾಮಾನ್ಯ ರೋಗಗಳ ವೈದ್ಯರಾದ ಡಾ|| ಮಹಮ್ಮದ್ ಮೀರಾಜ್ ಹಾಗೂ ಡಾ|| ಶಿವಕುಮಾರ ಅರಳಿ, ಡಾ|| ಪ್ರಶಾಂತ,
ಡಾ|| ಶಿವಕುಮಾರ ಕಂಬಳಿ ಹಾಗೂ ಹೊಮಿಯೋಪಥಿ ವ್ಯೆದ್ಯ ಡಾ|| ಎಸ್. ಕೆ. ರಾಜೂರ ಇನ್ನೂ ಅನೇಕ ವೈದ್ಯರು ಶಿಬಿರದಲ್ಲಿ ಪಾಲ್ಗೊಳ್ಳುವರು. ಶಿಬಿರದಲ್ಲಿ ಪಾಲ್ಗೊಳ್ಳಲು ತಮ್ಮ ಹೆಸರನ್ನು ಕಲಾವತಿ ಮುನಿರಾಬಾದ ೯೮೮೦೯೫೪೮೧೩, ಮಾರುತಿ ೯೬೬೩೭೩೮೯೨೮, ನರಸಿಂಹಮೂರ್ತಿ ೯೪೮೦೩೩೯೯೮೧ ಇವರಲ್ಲಿ ದೂರವಾಣಿ ಮೂಲಕ ನೊಂದಾಯಿಸಿಕೊಳ್ಳಲು ಗೊಂಡಬಾಳ ಕೋರಿದ್ದಾರೆ.

Please follow and like us:
error