ಮಗನ ಬರುವಿಕೆಗಾಗಿ ತತ್ತರಿಸುತ್ತಿರುವ ಹೆತ್ತ ಕರಳು.

ಗಂಗಾವತಿ-19- ಮುರಾರ್ಜಿ ದೇಸಾಯಿ ಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿ, ನಾನು ರಜೆ ಸಲುವಾಗಿ ನಮ್ಮ ಮನೆಗೆ ಹೋಗಿ ಬರುತ್ತೇನೆ ಅಂತ ಹೇಳಿಹೊಗಿ ನಾಪತ್ತೆಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಲಿಂಗರಾಜ್ ಪೊಲೀಸ್ ಪಾಟೀಲ್ ನಾಪತ್ತೆಯಾದ ವಿದ್ಯಾರ್ಥಿಯಾಗಿದ್ದು, ಮೂಲತ ಯಾದಗೀರಿ ಜಿಲ್ಲೆಯ ಸುರಪುರ ತಾಲೂಕಿನ ಹಲಗೇರಿ ಗ್ರಾಮದ ನಿವಾಸಿಯಾಗಿದ್ದಾನೆ. ಲಿಂಗರಾಜ್ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಮೊಸರಕಲ್ಲು ಮುರಾರ್ಜಿ ದೇಸಾಯಿ ಶಾಲೆಯಲ್ಲಿ ವ್ಯಾಸಂಗ ಮಾಡ್ತಾ ಇದ್ದ. ಆದ್ರೆ ಅವನು ಜನವರಿ ೧೪ ರಂದು ನಾನು ನಮ್ಮ ಊರಿಗೆ ಹೋಗಿ ಬರ್ತೀನಿ ಅಂತ ಹೇಳಿ ಹೋದವ ಇನ್ನು ಮನಗೆ ಬಾರದೇ ಅತ್ತ ಶಾಲೆಗೆ ಬಾರದೆ ನಾಪತ್ತೆಯಾಗಿದ್ದಾನೆ. ಇನ್ನು ತನ್ನ ಸ್ನೇಹಿತರ ಮುಂದೆ ನನ್ನ ಸಂಬಂಧಿಕರ ಊರು ಗಂಗಾವತಿ ತಾಲೂಕಿನ ಮರಳಿ ಗ್ರಾಮಕ್ಕೆ ಹೋಗಿ ಬರ್ತಿನಿ ಅಂತ ಹೇಳಿದ್ದನಂತೆ. ಆದ್ರೂ ಇಲ್ಲೂ ಬಾರದ ಕಾರಣ ಲಿಂಗರಾಜ್‌ನ ಪೋಷಕರು ಮಗನ ಪೋಟೋ ಹಿಡಿದು ಗಂಗಾವತಿ ತಾಲೂಕಿನದ್ಯಾಂತ ಮಗನ ಪತ್ತೆಗಾಗಿ ಅಲೆದಾಡುತ್ತಿದ್ದಾರೆ.
Please follow and like us:
error