fbpx

ಕರ್ನಾಟಕದ ಹುಲಿ ಸಂಸ್ಮರಣ ಗ್ರಂಥ ಬಿಡುಗಡೆ

 ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಸಂಪಾದಿತ ೧೮ ನೇ ಕೃತಿ ಹೈದ್ರಾಬಾದ ಕರ್ನಾಟಕ ವಿಮೋಚನಾ ಹೋರಾಟಗಾರರು, ಕರ್ನಾಟಕ ಏಕೀಕರಣ ಚಳುವಳಿಯ ರೂವಾರಿಗಳಾಗಿದ್ದ ಅಳವಂಡಿಯ ಶಿವಮೂರ್ತಿಸ್ವಾಮಿಗಳ ಸಂಸ್ಮರಣಾ ಗ್ರಂಥ ಕರ್ನಾಟಕದ ಹುಲಿ (ಎ.ಟಿ. ಕಲ್ಮಠರ ಜೊತೆಗೆ) ಗ್ರಂಥವನ್ನು ೧೭-೦೯-೨೦೧೪ ರಂದು ಬುಧವಾರ ಬೆಳಗ್ಗೆ ೯ ಗಂಟೆಗೆ ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ಸಣ್ಣ ನೀರಾವರಿ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿಯವರು ಅವರು ಬಿಡುಗಡೆಗೊಳಿಸುವರು. 
ಕೊಪ್ಪಳದ ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಅಮರೇಶ ಕುಳಗಿ, ಲೋಕಸಭಾ ಸದಸ್ಯರಾದ ಸಂಗಣ್ಣ ಕರಡಿ, ಯಲಬುರ್ಗಾ ಶಾಸಕರಾದ ಬಸವರಾಜ ರಾಯರಡ್ಡಿ, ಗಂಗಾವತಿ ಶಾಸಕರಾದ  ಇಕ್ಬಾಲ್ ಅನ್ಸಾರಿ, ಕುಷ್ಟಗಿ ಶಾಸಕರಾದ ದೊಡ್ಡನಗೌಡ ಪಾಟೀಲ, ವಿಧಾನ ಪರಿಷತ್ತಿನ ಸದಸ್ಯರಾದ ಹಾಲಪ್ಪ ಆಚಾರ್,  ಅಮರನಾಥ ಪಾಟೀಲ, ಶರಣಪ್ಪ ಮಟ್ಟೂರ, ಜಿಲ್ಲಾ ಪಂಚಾಯತ ಉಪಾಧ್ಯಕ್ಷರಾದ ವಿನಯಕುಮಾರ ಮೇಲಿನಮನಿ, ನಗರಸಭಾ ಅಧ್ಯಕ್ಷರಾದ ಲತಾ ವೀರಣ್ಣ ಸಂಡೂರ, ಕೊಪ್ಪಳ ತಾಲೂಕ ಪಂಚಾಯತಿ ಅಧ್ಯಕ್ಷರಾದ ವಿಶಾಲಾಕ್ಷಿ ವಿಜಯಕುಮಾರ ಮಾಲಿಪಾಟೀಲ, ಕೊಪ್ಪಳ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಟಿ.ಕೆ. ಅನೀಲಕುಮಾರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಡಾ. ಬಿ.ವಿ. ಶಿರೂರ ಅವರು ಕರ್ನಾಟಕದ ಹುಲಿ ಗ್ರಂಥ ಕುರಿತು ಮಾತನಾಡಲಿದ್ದಾರೆ. 
Please follow and like us:
error

Leave a Reply

error: Content is protected !!