ಕೊಪ್ಪಳದ ಸ್ಲಂಗಳಲ್ಲಿ ೧೪. ೬೬ ಕೋಟಿ ರೂ. ವೆಚ್ಚದಲ್ಲಿ ೩೩೭ ಮನೆ ನಿರ್ಮಾಣ- ಸಂಗಣ್ಣ ಕರಡಿ

 ಕೊಪ್ಪಳ ನಗರದ ೦೨ ಸ್ಲಂ ಪ್ರದೇಶಗಳಲ್ಲಿ ಕೇಂದ್ರ ಸರ್ಕಾರದ ರಾಜೀವ್ ಆವಾಸ್ ಯೋಜನೆಯಡಿ ೩೩೭ ಮನೆ ನಿರ್ಮಾಣ ಮಾಡುವ ೧೪. ೬೬ ಕೋಟಿ ರೂ. ಗಳ ಯೋಜನೆಗಾಗಿ ಕೇಂದ್ರ ಸರ್ಕಾರ ಮೊದಲನೆ ಕಂತಿನ ಅನುದಾನವಾಗಿ ೪. ೦೩ ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರು ತಿಳಿಸಿದ್ದಾರೆ.
  ರಾಜೀವ್ ಆವಾಸ್ ಯೋಜನೆಯಡಿ ನಗರದ ೦೨ ಸ್ಲಂ ಪ್ರದೇಶಗಳಲ್ಲಿ ೧೪೬೬. ೯೨ ಲಕ್ಷ ರೂ. ಗಳ ವೆಚ್ಚದಲ್ಲಿ ೩೩೭ ಮನೆಗಳನ್ನು ನಿರ್ಮಾಣ ಮಾಡುವ ಯೋಜನೆಯಲ್ಲಿ ಕೇಂದ್ರ ಸರ್ಕಾರದ ಪಾಲು ೧೦೪೯. ೭೨ ಲಕ್ಷ ರೂ.ಗಳಾಗಿದ್ದು, ಇದರಲ್ಲಿ ಮೊದಲನೆ ಕಂತಿನ ಅನುದಾನವಾಗಿ ೪೦೩. ೭೪ ಲಕ್ಷ ರೂ.ಗಳನ್ನು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಬಿಡುಗಡೆ ಮಾಡಿದೆ ಎಂದು ಸಂಸದ ಸಂಗಣ್ಣ ಕರಡಿ ತಿಳಿಸಿದ್ದಾರೆ .

Leave a Reply