ಕೊಪ್ಪಳ ನಗರಸಭೆಯಲ್ಲಿ ಎಲೆಕ್ಟ್ರಾನಿಕ್ ತ್ಯಾಜ್ಯ ವಸ್ತುಗಳ ಸಂಗ್ರಹಣೆ : ಸೂಚನೆ

ಕೊಪ್ಪಳ ನಗರಸಭೆಯಿಂದ ಎಲೆಕ್ಟ್ರಾನಿಕ್ ತ್ಯಾಜ್ಯ ವಸ್ತುಗಳ ಸಂಗ್ರಹಣಾ ಕೇಂದ್ರಗಳನ್ನು ತೆರೆಯಲಾಗಿದ್ದು, ನಗರದಲ್ಲಿಯ ಸಾರ್ವಜನಿಕರು ಮತ್ತು ಎಲೆಕ್ಟ್ರಾನಿಕ್ ರಿಪೇರಿ ಅಂಗಡಿಯವರು ತಮ್ಮ ಹಳೆಯ ಎಲೆಕ್ಟ್ರಾನಿಕ್ ನಿರುಪಯುಕ್ತ ತ್ಯಾಜ್ಯವಸ್ತುಗಳನ್ನು ನಗರಸಭೆಯ ತ್ಯಾಜ್ಯ ಸಂಗ್ರಹಣಾ ಕೇಂದ್ರಗಳಲ್ಲಿ ನೀಡಬೇಕು. ಜೆ.ಪಿ.ಮಾರ್ಕೆಟ್ ಹತ್ತಿರದ ನಗರಸಭೆಯ ಐ.ಡಿ.ಎಸ್.ಎಂ.ಟಿ.ಮಳಿಗೆ ದಿವಟರ್ ಸರ್ಕಲ್ ಹತ್ತಿರದ ನಗರಸಭೆಯ ಐ.ಡಿ.ಎಸ್.ಎಂ.ಟಿ. ಮಳಿಗೆಯಲ್ಲಿ ತ್ಯಾಜ್ಯ ಸಂಗ್ರಹಣೆ ಪ್ರಾರಂಭಿಸಲಾಗಿದೆ. ಪ್ರತಿದಿನ ಬೆಳಿಗ್ಗೆ ೧೦:೦೦ ರಿಂದ ಮಧ್ಯಾಹ್ನ ೧:೦೦ರವರೆಗೆ ಎಲೆಕ್ಟ್ರಾನಿಕ್ ನಿರುಪಯುಕ್ತ ತ್ಯಾಜ್ಯ ವಸ್ತುಗಳನ್ನು ನಗರಸಭೆಯ ಸಂಗ್ರಹಣಾ ಕೇಂದ್ರಗಳಲ್ಲಿ ನೀಡುವಂತೆ ಹಾಗೂ ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸುವಂತೆ  ತಿಳಿಸಿದ್ದಾರೆ.

Leave a Reply