ಕಲಾಗ್ರಾಮದಲ್ಲಿ ‘ಮಲೆಗಳಲ್ಲಿ ಮದುಮಗಳು’ ಮೂರನೇ ಸರಣಿ ಪ್ರದರ್ಶನ

ಬೆಂಗಳೂರು,  : ರಾಷ್ಟ್ರಕವಿ ಕುವೆಂಪು ಅವರ ಜನಪ್ರಿಯ “ಮಲೆಗಳಲ್ಲಿ ಮದುಮಗಳು” ಕಾದಂಬರಿಯ ರಂಗಪ್ರಯೋಗ ಮೂರನೆ ಬಾರಿ ಫೆಬ್ರವರಿ 16 ರಿಂದ ಮಾಚ್ 21 ರವರೆಗೆ ಪ್ರತಿ ಸೋಮವಾರ, ಬುಧವಾರ, ಶುಕ್ರವಾರ ಹಾಗೂ ಶನಿವಾರ ರಾತ್ರಿ 8-30 ರಿಂದ ಬೆಳಿಗ್ಗೆ 5-30 ರವರೆಗೆ ಬೆಂಗಳೂರು ವಿಶ್ವವಿದ್ಯಾಲಯದ ಕಲಾಗ್ರಾಮದಲ್ಲಿ ನಡೆಯಲಿದೆ.
ರಾಷ್ಟ್ರೀಯ ನಾಟಕ ಶಾಲೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಈ ರಂಗಪ್ರಯೋಗ ನಡೆಯಲಿದ್ದು, ಇದು ಅಹೋರಾತ್ರಿ ಸತತ ಒಂಭತ್ತು ಗಂಟೆಗಳ ಕಾಲ ನಡೆಯಲಿದೆ.
ರಾಷ್ಟ್ರೀಯ ನಾಟಕ ಶಾಲೆ ಹಾಗೂ ದಕ್ಷಿಣ ಭಾರತದ ರಾಜ್ಯಗಳ ಸುಮಾರು 70 ನಟರು ಈ ನಾಟಕದಲ್ಲಿ ಪಾಲ್ಗೊಳ್ಳಲಿದ್ದು ನಾಟಕವನ್ನು ರಂಗರೂಪಕ್ಕೆ ಕೆ. ವೈ. ನಾರಾಯಣಸ್ವಾಮಿ ಅವರು ಅಳವಡಿಸಿದ್ದು, ರಂಗವಿನ್ಯಾಸವನ್ನು ಶಶಿಧರ ಅಡಪ ಮಾಡಿದ್ದಾರೆ. ಪರಿಕಲ್ಪನೆ ಹಾಗೂ ನಿರ್ದೇಶನವನ್ನು ರಾಷ್ಟ್ರೀಯ ನಾಟಕ ಶಾಲೆ, ಬೆಂಗಳೂರು ಕೇಂದ್ರದ ನಿರ್ದೇಶಕ ಸಿ. ಬಸವಲಿಂಗಯ್ಯ ಹಾಗೂ ಸಂಗೀತ ನಿರ್ದೇಶನವನ್ನು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಮಾಡಿದ್ದಾರೆ.
ಈ ನಾಟಕ ಕಲಾಗ್ರಾಮದಲ್ಲಿ 20 ಪ್ರದರ್ಶನಗಳನ್ನು ಕಾಣಲಿದೆ ಹಾಗೂ ಸುಮಾರು 40 ಹಾಡುಗಳು ರಂಗಾಸಕ್ತರ ಮನಸ್ಸನ್ನು ಆಕರ್ಷಿಸಲಿದೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕರಾದ ಎನ್. ಆರ್. ವಿಶುಕುಮಾರ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ನಿರ್ದೇಶಕರಾದ ಕೆ. ಎ. ದಯಾನಂದ್, ಸಂತಕವಿ ಕನಕ ಅಧ್ಯಯನ ಸಂಶೋಧನಾ ಕೇಂದ್ರದ ಸಮನ್ವಯ ಅಧಿಕಾರಿ ಕಾ. ತ. ಚಿಕ್ಕಣ್ಣ ಮುಂತಾದವರು ಈ ರಂಗಪ್ರಯೋಗಕ್ಕೆ ಸಂಪೂರ್ಣ ಸಹಕಾರ ನೀಡಿದ್ದಾರೆ.
Please follow and like us:
error