ರಕ್ತ ದಾನ ಶ್ರೇಷ್ಠವಾದದ್ದು : ಡಾ.ಕೆ.ಜಿ. ಕುಲಕರ್ಣಿ

ಎಲ್&ಟಿ ವತಿಯಿಂದ ರಕ್ತದಾನ ಶಿಬಿರ
ಕೊಪ್ಪಳ:ಜ,೦೫: ಅನ್ನದಾನ ಅಕ್ಷರ ದಾನದಂತೆ ರಕ್ತ ದಾನ ಕೂಡ ಮಹತ್ವ ಮತ್ತು ಶ್ರೇಷ್ಠವಾದದ್ದು, ರಕ್ತ ದಾನ ಮಾಡಿ ಜೀವ ಉಳಿಸುವ ಕಾರ್ಯ ಪ್ರತಿಯೊಬ್ಬರು ಮಾಡಬೇಕು ಅದೇ ಮಾನವಿಯತೆ ಎಂದು ಹಿರಿಯ ವೈದ್ಯ ಡಾ. ಕೆ.ಜಿ.ಕುಲಕರ್ಣಿ ಹೇಳಿದರು.
ಅವರು ನಗರದ ರೈಲ್ವೇ ಸ್ಟೇಷನ್ ಭಾಗ್ಯನಗರ ಗೇಟ್ ಬಳಿ ಎಲ್.ಎಂಡ್ ಟಿ ಇಂಡಿಯನ್ ರೆಡ್ ಕ್ರಾಸ್ ಸೋಸೈಟಿ ಮೆ|| ಲಾರಸನ್ ಆಂಡ್ ಟೋಬ್ರೋ ಲಿಮಿಟೆಡ್ ಹಾಗೂ ಇನ್ನರ ವೀಲ್ ಸಂಸ್ಥೆ ಕೊಪ್ಪಳ ಇವುಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿ ರಕ್ತ ದಾನ ಶಿಬಿರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಮುಂದುವರೆದು ಮಾತನಾಡಿದ ಅವರು ಅನ್ನದಾನ ದಾನದಿಂದ ಮನುಷ್ಯನಿಗೆ ಒಂದು ದಿನ ಹಸಿವು ನಿಗಿಸಬಹುದು, ಅಕ್ಷರದಾನದಿಂದ ಮನುಷ್ಯನಿಗೆ ತಿಳಿವಳಿಕೆ ನೀಡುವಂತೆ ಆಗಬಹುದು ಆದರೆ ರಕ್ತದಾನದಿಂದ ಒಂದು ಜೀವ ಮತ್ತು ಅವರ ಅವಲಂಬಿತವಾದ ಒಂದು ಕುಟುಂಬ ಉಳಿಸಿದಂತೆ ಪುಣ್ಯ ಸಿಗಲಿದೆ.  ಹೀಗಾಗಿ ಇದಕ್ಕೆ ಬಹಳಷ್ಟು ಮಹತ್ವ ಪಡೆದಿದೆ. ಈ ದಿಸೆಯಲ್ಲಿ ಎಲ್‌ಅಂಡ್‌ಟಿ ಸಂಸ್ಥೆಯವರು ಇತರ ಸಂಸ್ಥೆಗಳ ಸಂಯೋಗದೊಂದಿಗೆ ಕೈಜೋಡಿಸಿ ರಕ್ತದಾನ ಶಿಬಿರ ಹಮ್ಮಿಕೊಂಡಿರುವ ಇವರ ಕಾರ್ಯ ಅತ್ಯಂತ ಶ್ಲಾಘನೀಯವಾಗಿದೆ ಎಂದು ಹಿರಿಯ ವೈದ್ಯ ಡಾ. ಕೆ.ಜಿ.ಕುಲಕರ್ಣಿ ಹೇಳಿದರು.

Leave a Reply