ದುರ್ಗಾದೇವಿ ಜಾತ್ರೆ: ಕುರಿ,ಕೋಣ ಬಲಿ

ಕೊಪ್ಪಳ : ನಗರದ ಸಮೀಪದ ಚಿಲವಾಡಗಿ ಗ್ರಾಮದಲ್ಲಿ ದುರ್ಗಾದೇವಿ ಜಾತ್ರೆ ನಿಮಿತ್ತ ಭಕ್ತರು ಕೋಣ ಮತ್ತು ಕುರಿಗಳನ್ನು ಬಲಿ ನೀಡಿದ್ದಾರೆ ಎನ್ನಲಾಗಿದೆ. ರಾತ್ರಿ ಪೂಜೆಯ ನಂತರ ಕೋಣಗಳನ್ನು ದೇವಸ್ಥಾನದ ಎದುರು ಬಲಿ ನೀಡಲಾಯಿತು ಎನ್ನಲಾಗಿದ್ದು, ಬಲಿ ನೀಡಲಾದ ಕುರಿ ಮತ್ತು ಕೋಣಗಳ ಮಾಂಸವನ್ನು ಊರಿನ ತುಂಬೆಲ್ಲಾ ಹಂಚಲಾಗಿದ್ದು ಎಲ್ಲೆಡೆ ಮಾಂಸದ ಅಡುಗೆ ನಡೆದಿದೆ. ಪ್ರಾಣಿ ಬಲಿಯನ್ನು ನಿಷೇಧಿಸಿದ್ದರೂ ಎಲ್ಲರಿಗೂ ಗೊತ್ತಿದ್ದರೂ ರಹಸ್ಯವಾಗಿ ಈ ಕಾರ್ಯಕ್ರಮ ನಡೆದೇ ಇದೆ.

Leave a Reply