You are here
Home > Koppal News > ಇಟಿಗಿ ಉತ್ಸವದಲ್ಲಿ ಸಾಂಸ್ಕೃತಿಕ ಕಲಾ ಪ್ರದರ್ಶನಕ್ಕೆ ಕಲಾ ತಂಡಗಳ ಆಹ್ವಾನ.

ಇಟಿಗಿ ಉತ್ಸವದಲ್ಲಿ ಸಾಂಸ್ಕೃತಿಕ ಕಲಾ ಪ್ರದರ್ಶನಕ್ಕೆ ಕಲಾ ತಂಡಗಳ ಆಹ್ವಾನ.

ಕೊಪ್ಪಳ,ಡಿ.೧೨ ಜನೇವರಿ ೦೭ ೦೮ ಮತ್ತು ೦೯, ೨೦೧೫ ರಂದು ೧೧ನೇ ಬಾರಿಗೆ ಕೊಪ್ಪಳ ಜಿಲ್ಲಾ ನಾಗರಿಕ ವೇದಿಕೆಯಿಂದ ನಡೆಯಲಿರುವ ಇಟಿಗಿ ಉತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನ ನೀಡಲು ಕಲಾ ತಂಡಗಳನ್ನು ಆಹ್ವಾನಿಸಿದೆ. ಮಹಾದೇವ ದಂಡನಾಯಕ ವೇದಿಕೆಯಲ್ಲಿ ಪ್ರದರ್ಶನ ನೀಡಲು ವಿವಿಧ ಸಾಂಸ್ಕೃತಿಕ ಪ್ರಕಾರಗಳಾದ ಭರತನಾಟ್ಯ,  ನೃತ್ಯ ರೂಪಕ, ಜನಪದ ನೃತ್ಯ, ಸಮೂಹ ನೃತ್ಯ, ಸಿನಿಮಾ ನೃತ್ಯ, ಜನಪದ ಗಾಯನ, ಸುಗಮ ಸಂಗೀತ, ತತ್ವಪದ, ಜಾನಪದ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಳನ್ನು ನಾಟಕ, ದೊಡ್ಡಾಟ, ಬಯಲಾಟ, ಮಹಿಳಾ ನೃತ್ಯ, ಗ್ರಾಮೀಣ ನೃತ್ಯ, ಕೋಲಾಟ, ಡೊಳ್ಳು ಕುಣಿತ, ವೀರಗಾಸೆ, ಭಜನೆ, ಚಿತ್ರಕಲೆ ಮುಂತಾದ ಕಲಾ ಪ್ರದರ್ಶನ ನೀಡಬಯಸುವ ಕಲಾವಿದರು, ೯೮೪೫೩೩೮೧೬೦, ೯೪೪೮೦೨೫೦೬೭ ಹಾಗೂ ೯೫೩೮೮೨೫೧೭೩ ಈ ಮೊಬೈಲ್‌ಗಳಿಗೆ ಸಂಪರ್ಕಿಸಿ ಹೆಸರು ನೊಂದಾಯಿಸಿಕೊಳ್ಳಬಹುದು. ಎಂದು  ಉತ್ಸವ ಸಂಚಾಲಕ ಮಹೇಶ ಬಾಬು ಸುರ್ವೆ ತಿಳಿಸಿದ್ದಾರೆ.

Leave a Reply

Top