ದೈಹಿಕ, ಮಾನಸಿಕ ಸದೃಢತೆಗೆ ಕ್ರೀಡೆ ಅಗತ್ಯ ಸಯ್ಯದ್.

ಕೊಪ್ಪಳ,ಅ.೧೮ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಮಾಡಲು ಪ್ರತಿಯೊಬ್ಬ ಮನುಷ್ಯ ಕ್ರೀಡಾಸಕ್ತಿ ಬೆಳೆಸಿಕೊಳ್ಳಬೇಕು. ಕ್ರೀಡೆಯಿಂದ ದೈಹಿಕವಾಗಿ, ಮಾನಸಿಕವಾಗಿ ಸದೃಢತೆಯಾಗಲು ಸಾಧ್ಯವಾಗಿದೆ ಎಂದು ಸೈಯ್ಯದ್ ಫೌಂಡೇಶನ್ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಕೆ.ಎಂ.ಸಯ್ಯದ್ ಹೇಳಿದರು.
ಅವರು ರವಿವಾರ ತಾಲೂಕಿನ ಅಳವಂಡಿ ಗ್ರಾಮದ ಶ್ರೀ ಸಿದ್ಧೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಬಿ.ಬಿ.ಸಿ.ಸಿ. ಇವರ ವತಿಯಿಂದ ದಸರಾ ಹಬ್ಬದ ಪ್ರಯುಕ್ತ ಮುಕ್ತ ಸ್ಟಂಪರ್ ಬಾಲ್ ಕ್ರಿಕೆಟ್ ಟೂರ್ನಾಮೆಂಟ್‌ನ ಉದ್ಘಾಟನೆ ನೆರವೇರಿಸಿ ರಿಬ್ಬನ್ ಕಟ್ ಮಾಡಿ ನಂತರ ಬ್ಯಾಟಿಂಗ್ ಮಾಡುವುದರ ಮೂಲಕ ಚಾಲನೆ ನೀಡಿದರು.
ಮುಂದುವರೆದು ಮಾತನಾಡಿದ ಅವರು, ಕ್ರೀಡೆಯು ಮನುಷ್ಯನ ಅವಿಭಾಜ್ಯ ಅಂಗವಾಗಿದೆ. ಪ್ರತಿಯೊಬ್ಬ ಮನುಷ್ಯ ದಿನದ ೨೪ ತಾಸುಗಳನ್ನು ಕನಿಷ್ಟ ಪಕ್ಷ ಒಂದು ತಾಸಾದರೂ ಕ್ರೀಡೆಯಲ್ಲಿ ಪಾಲ್ಗೊಂಡರೆ
ಸಮಾರಂಭದಲ್ಲಿ ಅಳವಂಡಿ ಗ್ರಾಮದ ಜನಪ್ರತಿನಿಧಿಗಳಾದ ಹಾಗೂ ರಾಜಕೀಯ ನಾಯಕರಾದ ಗುರು ಬಸವರಾಜ ಹಳ್ಳಿಕೇರಿ, ಸುರೇಶ ದಾಸರೆಡ್ಡಿ, ಸಿದ್ದಣ್ಣ ಗಿಣಗೇರಿ, ಹನುಮಂತಪ್ಪ ಬೀರಾದರ, ಮಂಜುನಾಥ ಭಾವಿಕಟ್ಟಿ, ಮುಖ್ಯೋಪಾಧ್ಯಾಯ ತಿರುಪತಿ ವಡ್ಡರ್, ರೇಣುಕಪ್ಪ ಹಳ್ಳಿಕೇರಿ, ಭೀಮಣ್ಣ ಅವಳಣ್ಣವರ, ಅಡಿವೆಪ್ಪ ರಾಟಿ, ರಾಮನಗೌಡ ಮಾಲಿ ಪಾಟೀಲ್, ಬಸವರಾಜ ಬೆಟಗೇರಿ, ಫಕೀರಪ್ಪ, ಪರಶುರಾಮ ಮೇಕಿ, ಮಂಜಪ್ಪ, ರಾಮಣ್ಣ, ವೆಂಕಟೇಶ, ಮಂಜುನಾಥ ಹಿರೇಮಠ, ಶಿವು ಕಣವಿ, ಪ್ರತಾಪ್ ಬಾವಿಹಳ್ಳಿ, ವಿರುಪಾಕ್ಷಿ ಕಟ್ಟಿ ಅಲ್ಲದೇ ಪತ್ರಕರ್ತರಾದ ಎಂ.ಸಾದಿಕ್ ಅಲಿ, ಹನುಮಂತ ಹಳ್ಳಿಕೇರಿ ಸೇರಿದಂತೆ ಅನೇಕ ಜನ ಪಾಲ್ಗೊಂಡಿದ್ದರು.

ಆತ್ಮಸ್ಥೈರ್ಯ ಬೆಳೆಯುತ್ತದೆ. ದೈಹಿಕ ಮತ್ತು ಮಾನಸಿಕ ವೃದ್ಧಿಯಾಗುತ್ತದೆ. ಮನಸ್ಸಿಗೆ ಶಾಂತಿ, ನೆಮ್ಮದಿ ದೊರೆಯುತ್ತದೆ. ಹೀಗಾಗಿ ಕ್ರೀಡಾಸಕ್ತಿ ಬೆಳೆಸಿಕೊಳ್ಳುವುದು ಅವಶ್ಯಕತೆಯಾಗಿದೆ ಎಂದ ಅವರು, ನಮ್ಮ ಜಿಲ್ಲೆಯಲ್ಲಿ ಕ್ರೀಡಾಭಿಮಾನಿ ಮತ್ತು ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದು ಉತ್ತಮ ಬೆಳವಣಿಗೆಯಾಗಿದೆ. ಕ್ರೀಡೆಯಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳು ತಮ್ಮ ಉತ್ತಮ ಆಟದ ಪ್ರದರ್ಶನ ಮಾಡಿ ಸ್ಪರ್ಧೆಗಳಲ್ಲಿ ಸೋಲು-ಗೆಲವುಗಳಿಗೆ ಮಾನ್ಯತೆ ನೀಡದೇ ಉತ್ತಮ ಆಟ ಪ್ರದರ್ಶಿಸಿ ಒಳ್ಳೆಯ ಕ್ರೀಡಾಪಟುಗಳಾಗುವಲ್ಲಿ ಶ್ರಮಿಸಬೇಕೆಂದು ಸೈಯ್ಯದ್ ಫೌಂಡೇಶನ್ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಕೆ.ಎಂ.ಸಯ್ಯದ್ ಹೇಳಿದರು.

Please follow and like us:
error