You are here
Home > Koppal News > ವಿಧಾನಸಭೆ ಚುನಾವಣೆ : ಕ್ಷೇತ್ರ ಚುನಾವಣಾಧಿಕಾರಿಗಳ ನೇಮಕ

ವಿಧಾನಸಭೆ ಚುನಾವಣೆ : ಕ್ಷೇತ್ರ ಚುನಾವಣಾಧಿಕಾರಿಗಳ ನೇಮಕ

 : ವಿಧಾನಸಭೆ ಸಾರ್ವತ್ರಿಕ ಹಿನ್ನಲೆಯಲ್ಲಿ ಕೊಪ್ಪಳ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ೦೫ ವಿಧಾನಸಭಾ ಕ್ಷೇತ್ರಗಳಿಗೆ,  ಕ್ಷೇತ್ರ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಕುಷ್ಟಗಿ ವಿಧಾನಸಭಾ ಕ್ಷೇತ್ರಕ್ಕೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸುಜ್ಞಾನಮೂರ್ತಿ ಕೊಪ್ಪಳ ಮೊ.೯೩೪೨೮೧೪೦೭೬, ಕಛೇರಿ, ೦೮೫೩೯-೨೩೧೧೦೧ ಅವರನ್ನು ಕ್ಷೇತ್ರ ಚುನಾವಣಾ ಅಧಿಕಾರಿಯನ್ನಾಗಿ ಹಾಗೂ ಸಹಾಯಕ ಚುನಾವಣಾಧಿಕಾರಿಯನ್ನಾಗಿ ಕುಷ್ಟಗಿ ತಹಶೀಲ್ದಾರ್ ವಿರೇಶ ಬಿರಾದರ ಮೊ.೯೭೪೧೦೯೭೫೮೨, ಕಛೇರಿ ದೂರವಾಣಿ ೦೮೫೩೬-೨೬೭೦೩೧, ಫ್ಯಾಕ್ಸ್ ೨೬೮೧೬೮, ೨೬೭೧೬೨ ಇವರನ್ನು ನೇಮಿಸಲಾಗಿದೆ.
     ಕನಕಗಿರಿ ವಿಧಾನಸಭಾ ಕ್ಷೇತ್ರಕ್ಕೆ ಕ್ಷೇತ್ರ ಚುನಾವಣಾ ಅಧಿಕಾರಿಯನ್ನಾಗಿ ಜಿ.ಪಂ. ಉಪಕಾರ್ಯದರ್ಶಿ ರವಿ ಬಸರಿಹಳ್ಳಿ ಮೊ.೯೪೮೦೮೭೧೦೦೧, ಕಛೇರಿ ೦೮೫೩೩-೨೦೦೮೦೬ ಅವರನ್ನು ನೇಮಿಸಲಾಗಿದ್ದು, ಸಹಾಯಕ ಚುನಾವಣಾ ಅಧಿಕಾರಿಯನ್ನಾಗಿ ಕಾರಟಗಿಯ ವಿಶೇಷ ತಹಶೀಲ್ದಾರ್  ದೂರವಾಣಿ ೦೮೫೩೩-೨೦೦೮೦೬ ಅವರನ್ನು ನೇಮಕ ಮಾಡಲಾಗಿದೆ.
      ಗಂಗಾವತಿ ವಿಧಾನಸಭಾ ಕ್ಷೇತ್ರಕ್ಕೆ ಕ್ಷೇತ್ರ ಚುನಾವಣಾಧಿಕಾರಿಯಾಗಿ ಸಹಾಯಕ ಆಯುಕ್ತ ಪಿ.ಎಸ್.ಮಂಜುನಾಥ ಕೊಪ್ಪಳ ಮೊ.೯೯೮೬೬೪೭೨೩೬, ಕಛೇರಿ ದೂರವಾಣಿ ೦೮೫೩೯-೨೨೦೨೪೭, ಸಹಾಯಕ ಚುನಾವಣಾಧಿಕಾರಿಯಾಗಿ ಗಂಗಾವತಿ ತಹಶೀಲ್ದಾರ್ ದಿನೇಶ ಕುಮಾರ ಜಿ.ಟಿ. ಮೊ.೯೭೪೨೭೨೭೯೭೯, ಕಛೇರಿ ದೂರವಾಣಿ ೦೮೫೩೩-೨೩೦೯೨೯, ಫ್ಯಾಕ್ಸ್ ೨೩೦೯೨೯, ೨೩೦೪೬೮ ಅವರನ್ನು ನೇಮಕ ಮಾಡಲಾಗಿದೆ.
     ಯಲಬುರ್ಗಾ ವಿಧಾನಸಭಾ ಕ್ಷೇತ್ರಕ್ಕೆ ಕ್ಷೇತ್ರ ಚುನಾವಣಾಧಿಕಾರಿಯಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ವಿ.ದೊರೆಸ್ವಾಮಿ ಮೊ.೯೪೪೮೬೪೩೮೨೦, ಕಛೇರಿ ದೂರವಾಣಿ ೦೮೫೩೯-೨೨೨೭೦೩, ಸಹಾಯಕ ಚುನಾವಣಾಧಿಕಾರಿಯಾಗಿ ಯಲಬುರ್ಗಾ ತಹಶೀಲ್ದಾರ್ ಎಂ.ಬಿ.ಬಿರಾದರ ಮೊ.೯೪೪೮೫೭೯೮೨೯, ಕಛೇರಿ ದೂರವಾಣಿ ೦೮೫೩೪-೨೨೦೧೩೦, ಫ್ಯಾಕ್ಸ್ ೨೨೦೪೬೩ ನೇಮಕವಾಗಿದೆ.
      ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೆ ಕ್ಷೇತ್ರ ಚುನಾವಣಾಧಿಕಾರಿಯನ್ನಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಅಶೋಕ ಕಲಘಟಗಿ ಮೊ.೯೪೪೯೦೨೭೧೮೩, ಕಛೇರಿ ದೂರವಾಣಿ ೦೮೫೩೯-೨೨೧೫೧೫ ನೇಮಿಸಲಾಗಿದ್ದು, ಸಹಾಯಕ ಚುನಾವಣಾಧಿಕಾರಿಯನ್ನಾಗಿ ಕೊಪ್ಪಳ ತಹಶೀಲ್ದಾರ್ ಬಿ.ಎಲ್.ಘೋಟೆ ಮೊ.೯೪೪೮೩೪೭೮೯೫, ಕಛೇರಿ ೦೮೫೩೯-೨೨೦೩೮೧, ಫ್ಯಾಕ್ಸ್ ೦೮೫೩೯-೨೨೦೩೮೧ ಇವರನ್ನು ನೇಮಿಸಲಾಗಿದೆ

Leave a Reply

Top