ಏ.೧೫ ರಂದು ಹುಲಿಗಿಯಲ್ಲಿ ಗ್ರಾಮೀಣ ನಾಟಕೋತ್ಸವ

 ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಏ.೧೫ ಮತ್ತು ೧೬ ರಂದು ಎರಡು ದಿನಗಳ ಗ್ರಾಮೀಣ ನಾಟಕೋತ್ಸವ ತಾಲೂಕಿನ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಗ್ರಾಮೀಣ ನಾಟಕೋತ್ಸವದ ಉದ್ಘಾಟನಾ ಸಮಾರಂಭ ಏ. ೧೫ ರಂದು ಸಂಜೆ ೬ ಗಂಟೆಗೆ ಜರುಗಲಿದ್ದು, ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ಉದ್ಘಾಟನೆ ನೆರವೇರಿಸುವರು.  ಶ್ರೀ ಹುಲಿಗೆಮ್ಮ ದೇವಸ್ಥಾನ ಸಮಿತಿ ಅಧ್ಯಕ್ಷ ರಮೇಶ ವೈದ್ಯ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀ ಹುಲಿಗೆಮ್ಮ ದೇವಸ್ಥಾನ ಸಮಿತಿಯ ಕಾರ್ಯನಿರ್ವಹಣಾಧಿಕಾರಿ ಸಿ.ಎಸ್.ಚಂದ್ರಮೌಳಿ, ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ, ಹುಲಿಗಿಯ ಕಲಾವಿದ ಅಶ್ವತ್ಥ್ ದೇಸಾಯಿ ಅವರು ಭಾಗವಹಿಸುವರು.
ಕೊಪ್ಪಳ ತಾಲೂಕು ರಂಗ ಕಲಾವಿದರಿಂದ ಏ.೧೫ ರಂದು ಸಂಜೆ ೬.೩೦ ಕ್ಕೆ ಐತಿಹಾಸಿಕ ನಾಟಕ ವಿಜಯನಗರದ ವೀರನಾಯಕ (ಎಚ್ಚಮ್ಮನಾಯಕ) ಐತಿಹಾಸಿಕ ನಾಟಕ ಪ್ರದರ್ಶನಗೊಳ್ಳಲಿದೆ.  ಏ. ೧೬ ರಂದು ಮಯೂರ ಕಲಾ ಸಂಘ ಬಳ್ಳಾರಿ ಇವರಿಂದ ಸಾಮಾಜಿಕ ನಾಟಕ ಅನುಬಂಧವೋ ? ಅಣುಬಂಧವೋ ? ಹಾಗೂ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹವ್ಯಾಸಿ ಕಲಾ ವೃಂದ ಇವರಿಂದ ‘ರಕ್ತರಾತ್ರಿ’ ಪೌರಾಣಿಕ ನಾಟಕ ಜರುಗಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಸೌಭಾಗ್ಯ ಅವರು ತಿಳಿಸಿದ್ದಾರೆ.

Related posts

Leave a Comment