ಜಿಲ್ಲಾ ಕ.ಸಾ.ಪ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಸಿ.ಹೆಚ್.ನಾರಿನಾಳ ಗೆಲುವಿನ ವಿಶ್ವಾಸ.

ಯಲಬುರ್ಗಾ-25- ಕನ್ನಡ ಸಾಹಿತ್ಯ ಸೇವೆಗಾಗಿ ನನ್ನನ್ನು ಆಯ್ಕೆಗೊಳಿಸುವ ಮೂಲಕ ಸಾಹಿತ್ಯ ಸೇವೆಗೆ ಅನುವು ಮಾಡಿಕೊಡಿ ಎಂದು ಜಿಲ್ಲಾ ಕ.ಸಾ.ಪ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಸಿ.ಹೆಚ್.ನಾರಿನಾಳ ಮತದಾರರಲ್ಲಿ ಮನವಿ ಮಾಡಿಕೊಂಡರು.
      ಯಲಬುರ್ಗಾದಲ್ಲಿ ಮತಯಾಚನೆಗಾಗಿ ಜಿಲ್ಲಾ ಅಜೀವ ಸದಸ್ಯರ ಮನೆಗೆ ಬೇಟಿ ನೀಡಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು ನಾನು ೪೦ ವರ್ಷಗಳಿಂದಲೂ ಕನ್ನಡ ನಾಡು ನುಡಿಗೆ ಸೇವೆ ಸಲ್ಲಿಸುತ್ತಾ ಬಂದಿದ್ದೆನೆ . ಶಿಕ್ಷಕ ವೃತ್ತಿಯಿಂದ ನಿವೃತ್ತಿ ಪಡೆದ ನಂತರ  ಸುದ್ದಿ ಚಿಂತನ  ವೆಂಬ ವೈಚಾರಿಕ ಪಾಕ್ಷಿಕ ಪತ್ರಿಕೆಯೊಂದನ್ನು ಪ್ರಾರಂಭಿಸಿ ಸಾಹಿತ್ಯಿಕ,  ಸಾಮಾಜಿಕ ,ಧಾರ್ಮಿಕ , ,ರಾಜಕೀಯ ಚಿಂತನೆಗಳನ್ನು ಮುಟ್ಟಿಸುವಲ್ಲಿ ಸತತ ಪ್ರಯತ್ನಿಸುತ್ತಿದ್ದೆನೆ. ಅನೇಕ ಅನುಭಾವಿಗಳಿಗೆ , ಯುವಕ-ಯುವತಿಯರಿಗೆ ,ಕವಿ,ಸಾಹಿತಿಗಳಿಗೆ ನನ್ನ ಕೈಲಾದ ಮಟ್ಟಿಗೆ ಅವಕಾಶ ಒದಗಿಸಿಕೊಡುವ ಮೂಲಕ ಕನ್ನಡ ಸಾಹಿತ್ಯ ವಲಯಕ್ಕೆ ಚಿರಪರಿಚಿತನಾಗಿದ್ದೆನೆ.
      ನನ್ನ ಸ್ಪರ್ಧೆ ಅನೇಕರಿಗೆ ಆಶ್ಚರ್ಯವನ್ನುಂಟು ಮಾಡಿರಬಹುದು ,ಪರಿಸ್ಥಿತಿಯ ಅನಿವಾರ್ಯತೆಯಿಂದ ಸ್ಫರ್ಧಿಸಿದ್ದೆನೆ ಸುಮಾರು
ಒಂದು ದಶಕದಿಂದಲೂ ಪರಿಷತ್ತಿನ ಕಾರ್ಯ ವೈಖರಿಯನ್ನು ಗಮನಿಸುತ್ತಾ ಬರಲಾಗಿ ಜಿಲ್ಲಾ ಕನ್ನಡ
ಸಾಹಿತ್ಯ ಪರಿಷತ್ತಿನ ಮೂಲ ಆಶಯಗಳು ಬಲಿಯಾಗುತ್ತಾ ನಡೆದಿವೆ ಇದನ್ನು ತಿಳಿದುಕೊಂಡು
ಸ್ಪರ್ಧಿಸಿದ್ದನೆ. ಕುಲ,ಜಾತಿ,ಮತ,ಪಕ್ಷ ಪಂಗಡಗಳನ್ನು ಮರೆತು ಕನ್ನಡವನ್ನು ಕಟ್ಟಬಲ್ಲ
,ಬೆಳೆಸಬಲ್ಲ ಎಲ್ಲ ಮತದಾರರು ವಿಚಾರಶೀಲತೆಯಿಂದ ಮತ ನೀಡುತ್ತಾರೆ ಎಂದು ನಂಬಿದ್ದೆನೆ
.ನಾನು ಮತ ಪ್ರಚಾರಕ್ಕೆ ಹೋದ ಕಡೆಗಳಲ್ಲೆಲ್ಲಾ ಉತ್ತಮ ಪ್ರತಿಕ್ರಿಯೆ ದೊರೆತಿದ್ದು
ಜಿಲ್ಲಾ ಕಸಾಪ ಚುನಾವಣೆಯಲ್ಲಿ ನನಗೆ ಗೆಲ್ಲುವ ವಿಶ್ವಾಸವಿದೆ ಎಂದರು.
    ಈ ಸಂಧರ್ಭದಲ್ಲಿ ಕೆ.ಬಸವರಾಜ , ಶಿವಲಿಂಗಯ್ಯ ಸಾಲೀಮಠ ,ಶ್ರೀನಿವಾಸ ತಾಂದಳೆ ಮತ್ತಿತರರು ಇದ್ದರು.

Please follow and like us:
error