ಆದಾಯ ತೆರಿಗೆ ಇಲಾಖೆಯು ತೆರಿಗೆದಾರರ ಸ್ನೇಹಿ ಇಲಾಖೆಯಾಗುತ್ತಿದೆ- ನೂತನ್ ಒಡೆಯರ್.

ಕೊಪ್ಪಳ ಸೆ. ೨೪ (ಕ ವಾ) ಭಾರತ ಸರ್ಕಾರದ ಆದಾಯ ತೆರಿಗೆ ಇಲಾಖೆಯು ತೆರಿಗೆದಾರರಿಗೆ ಅನುಕೂಲವಾಗುವಂತೆ ಸೌಲಭ್ಯ ಹಾಗೂ ನಿಯಮಗಳನ್ನು ಸಾಕಷ್ಟು ಸರಳೀಕರಿಸುತ್ತಿದ್ದು, ತೆರಿಗೆದಾರರ ಸ್ನೇಹಿ ಇಲಾಖೆಯಾಗಿ ಬದಲಾಗುತ್ತಿದೆ ಎಂದು ಆದಾಯ ತೆರಿಗೆ ಇಲಾಖೆ ಬೆಂಗಳೂರಿನ ಮುಖ್ಯ ಆಯುಕ್ತೆ ನೂತನ್ ಒಡೆಯರ್ ಅವರು ಹೇಳಿದರು.
     ನಗರದ ಹೊಸಪೇಟೆ ರಸ್ತೆಯಲ್ಲಿ ಶಿವಬೆಳಗು ಕಾಂಪ್ಲೆಕ್ಸ್‌ನಲ್ಲಿ ಆದಾಯ ತೆರಿಗೆ ಇಲಾಖೆಯ ಕೊಪ್ಪಳ ಜಿಲ್ಲಾ ನೂತನ ಕಚೇರಿಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
     ಆದಾಯ ತೆರಿಗೆ ಇಲಾಖೆ ಕಾರ್ಯವೈಖರಿಯಲ್ಲಿ ಇದೀಗ ಸಾಕಷ್ಟು ಬದಲಾವಣೆಗಳು ಆಗುತ್ತಿವೆ.  ತೆರಿಗೆದಾರರಿಗೆ ತೆರಿಗೆ ಪಾವತಿ, ರಿಟರ್ನ್ಸ್ ಫೈಲ್ ಮಾಡುವುದು, ಆನ್‌ಲೈನ್ ವ್ಯವಸ್ಥೆ ಹೀಗೆ ಸೌಲಭ್ಯಗಳಲ್ಲಿ ಸುಧಾರಣೆಯನ್ನು ತರಲು ನಿಯಮಗಳನ್ನು ಸರಳೀಕರಣ ಮಾಡಲಾಗುತ್ತಿದ್ದು, ತೆರಿಗೆದಾರರ ಸ್ನೇಹಿ ಇಲಾಖೆಯಾಗಿ ಮಾರ್ಪಡುತ್ತಿದೆ.  ಕೊಪ್ಪಳ ಜಿಲ್ಲೆ ೧೯೯೮ ರಲ್ಲಿ ಅಸ್ತಿತ್ವಕ್ಕೆ ಬಂದಿದ್ದರೂ, ಆದಾಯ ತೆರಿಗೆ ಇಲಾಖೆ ಕಚೇರಿ, ಕೊಪ್ಪಳದಲ್ಲಿ ಪ್ರಾರಂಭವಾಗಿರಲಿಲ್ಲ. ಬದಲಿಗೆ ನೆರೆಯ ಹೊಸಪೇಟೆಯಲ್ಲಿಯೇ ಜಿಲ್ಲೆಯ ಆದಾಯ ತೆರಿಗೆಗೆ ಸಂಬಂಧಿತ ಕಡತಗಳು ನಿರ್ವಹಣೆಯಾಗುತ್ತಿದ್ದವು.  ತಡವಾಗಿ ಆದರೂ, ಉತ್ತಮ ಸೌಲಭ್ಯದೊಂದಿಗೆ, ಇದೀಗ ಕೊಪ್ಪಳದಲ್ಲಿ ಕಚೇರಿ ಕಾರ್ಯಾರಂಭಗೊಂಡಿದೆ.  ಕೊಪ್ಪಳ ಜಿಲ್ಲೆ ೨೦೧೧ ರ ಜನಗಣತಿ ಪ್ರಕಾರ ಸುಮಾರು ೧೪ ಲಕ್ಷ ಜನಸಂಖ್ಯೆಯನ್ನು ಹೊಂದಿದ್ದು, ಜಿಲ್ಲೆಯಲ್ಲಿ ತೆರಿಗೆ ಪಾವತಿಸುವವರ ಸಂಖ್ಯೆ ಸುಮಾರು ಕೇವಲ ೮ ಸಾವಿರ ನಷ್ಟಿದೆ.  ದೇಶದ ಜನಸಂಖ್ಯೆ ಹಾಗೂ ತೆರಿಗೆ ಪಾವತಿದಾರರ ಅನುಪಾತವನ್ನು ಗಮನಿಸಿದಾಗ, ಕೊಪ್ಪಳ ಜಿಲ್ಲೆಯ ಜನಸಂಖ್ಯೆಗೂ ತೆರಿಗೆ ಪಾವತಿದಾರರ ಸಂಖ್ಯೆಯ ಅನುಪಾತಕ್ಕೂ ಬಹಳಷ್ಟು ವ್ಯತ್ಯಾಸವಿದೆ.  ಅಂದರೆ ಜಿಲ್ಲೆಯಲ್ಲಿ ತೆರಿಗೆ ಪಾವತಿದಾರರ ಸಂಖ್ಯೆ ಬಹಳಷ್ಟು ಕಡಿಮೆ ಇದೆ.  ಜಿಲ್ಲೆಯಲ್ಲಿ ಕಳೆದ ವರ್ಷ ಸುಮಾರು ೭ ಕೋಟಿ ರೂ. ಗಳಷ್ಟು ತೆರಿಗೆ ಸಂಗ್ರಹವಾಗಿದೆ.  ಈ ವರ್ಷ ಕೊಪ್ಪಳದಲ್ಲಿಯೇ ಕಚೇರಿಯನ್ನು ಪ್ರಾರಂಭಿಸಲಾಗಿರುವುದರಿಂದ ತೆರಿಗೆ ಸಂಗ್ರಹ ೧೦ ಕೋಟಿ ರೂ. ಮೀರುವ ವಿಶ್ವಾಸವಿದೆ.  ಕೊಪ್ಪಳ ಜಿಲ್ಲೆಯಲ್ಲಿ ತೆರಿಗೆ ಪಾವತಿ ಕ್ರಮ, ರಿಟರ್ನ್ಸ್ ಫೈಲ್ ಕ್ರಮಗಳ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಇಲಾಖೆ ಉದ್ದೇಶಿಸಿದೆ.  ಅಲ್ಲದೆ ಇ-ಫೈಲಿಂಗ್, ಟಿಡಿಎಸ್ ಕ್ರಮಗಳ ಬಗ್ಗೆಯೂ ತರಬೇತಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು.  ಈ ಮೂಲಕ ಕೊಪ್ಪಳ ಕಚೇರಿಯು ಉತ್ತಮ ತೆರಿಗೆ ಸಂಗ್ರಹಿಸುವ ಮೂಲಕ ದೇಶದ ಅಭಿವೃದ್ಧಿಗೆ ನೆರವಾಗುವ ವಿಶ್ವಾಸವಿದೆ.  ಕೊಪ್ಪಳದ ನೂತನ ಕಚೇರಿಗೆ ಎಲ್ಲ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಕ್ರಮ ಜರುಗಿಸಲಾಗುವುದು ಎಂದು ಆದಾಯ ತೆರಿಗೆ ಇಲಾಖೆ ಬೆಂಗಳೂರಿನ ಮುಖ್ಯ ಆ
     ಆದಾಯ ತೆರಿಗೆ ಇಲಾಖೆ ಕಲಬುರಗಿ-ಹುಬ್ಬಳ್ಳಿ ವಲಯದ ಆಯುಕ್ತ (ಅಪೀಲ್ಸ್) ಕೆ. ಗಣೇಶನ್, ಅವರು ಕಾರ್ಯಕ್ರಮ ಕುರಿತು ಮಾತನಾಡಿದರು.  ಕೊಪ್ಪಳದ ಜವಾಹರ ಜೈನ್, ಬಸವರಾಜ ಬಳ್ಳೊಳ್ಳಿ, ವೆಂಕಟಕೃಷ್ಣ ಕಾರ್ಯಕ್ರಮ ಕುರಿತು ಮಾತನಾಡಿದರು.   ಬಳ್ಳಾರಿ ವಲಯದ ಜಂಟಿ ಆದಾಯ ತೆರಿಗೆ ಆಯುಕ್ತ ಎ.ಎನ್. ಹೊನಾವರ್, ಉಪ ಆಯುಕ್ತ ರತ್ನಾಕರ್, ಕೊಪ್ಪಳ ಆದಾಯ ತೆರಿಗೆ ಇಲಾಖೆ ಅಧಿಕಾರಿ ಪ್ರಸನ್ನ, ಆದಾಯ ತೆರಿಗೆ ನಿರೀಕ್ಷಕ ಮಲ್ಲಿಕಾರ್ಜುನ ಸೇರಿದಂತೆ ಹಲವು ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.  ಆದಾಯ ತೆರಿಗೆ ಇಲಾಖೆ ಕಲಬುರಗಿಯ ಪ್ರಧಾನ ಆಯುಕ್ತೆ ಕೆ. ಕಾಮಾಕ್ಷಿ ಅವರು ಸ್ವಾಗತಿಸಿದರು. ಮಹೇಂದ್ರ ಸಿಂಗ್ ಕಾರ್ಯಕ್ರಮ ನಿರೂಪಿಸಿದರು.

ಯುಕ್ತೆ ನೂತನ್ ಒಡೆಯರ್ ಅವರು ಹೇಳಿದರು.

Please follow and like us:
error