ಅಪರಾಧಗಳ ತಡೆಗೆ ನಾಗರಿಕರ ಸಹಕಾರ ಅಗತ್ಯ : ಐಜಿಪಿ ಮಹ್ಮದ್ ವಜೀರ

  ಇತ್ತೀಚಿನ ದಿನಗಳಲ್ಲಿ ಅಪರಾಧಗಳು  ಹೆಚ್ಚಾಗುತ್ತಿದ್ದು, ಅಪರಾಧಗಳನ್ನು ತಡೆಗಟ್ಟಲು  ಪ್ರತಿಯೊಬ್ಬ ನಾಗರಿಕರ ಸಹಕಾರ ಅಗತ್ಯವಾಗಿದೆ ಎಂದು ಈಶಾನ್ಯ ವಲಯದ ಪೊಲೀಸ್ ಮಹಾನಿರ್ದೇಶಕ ಮಹ್ಮದ್ ವಜೀರ್ ಅವರು ಹೇಳಿದರು.
ಅವರು ಕೊಪ್ಪಳ ನಗರ ಪೊಲೀಸ್ ಠಾಣೆ ಆವರಣದಲ್ಲಿ  ಏರ್ಪಡಿಸಲಾಗಿದ್ದ ಜನ ಸಂಪರ್ಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಮಹಿಳಾ ಮತ್ತು ಮಕ್ಕಳ ರಕ್ಷಣೆ ಮಾಡುವುದು ಸೇರಿದಂತೆ ಅಪರಾಧಗಳನ್ನು ತಡೆಗಟ್ಟಲು ಸಾರ್ವಜನಿಕರ ಸಹಕಾರ ಅತ್ಯಂತ ಅಗತ್ಯವಾಗಿದೆ.  ಸಾರ್ವಜನಿಕರು ತಪ್ಪದೆ ಸಂಚಾರ ನಿಯಮಗಳನ್ನು ಪಾಲಿಸಬೇಕು. ಪೊಲೀಸ್ ಅಧಿಕಾರಿಗಳು ಪ್ರತಿಯೊಬ್ಬ ವ್ಯಕ್ತಿಯೊಂದಿಗೆ ಸರಳವಾದ ರೀತಿಯಲ್ಲಿ ವ್ಯವಹರಿಸಲು ಸಾಧ್ಯವಾಗುವುದಿಲ್ಲ. ಕೆಲವು ಸಂದರ್ಭದಲ್ಲಿ ರೌಡಿಗಳು ಮತ್ತು ಕೊಲೆಗಡುಕರೊಂದಿಗೆ ಕಠಿಣವಾದ ರೀತಿಯಲ್ಲಿ ವರ್ತಿಸಬೇಕಾಗುತ್ತದೆ. ನಾಗರಿಕರ ಯಾವುದೇ ಸಮಸ್ಯೆಗಳಿಗೆ ಖುದ್ದಾಗಿ ನಮ್ಮನ್ನು ಕಾಣಬಹುದಾಗಿದೆ ಎಂದು ಹೇಳಿದರು.
ಜನಸಂಪರ್ಕ ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ಪ್ರಕಾಶ, ಡಿವೈಎಸ್‌ಪಿ ಸುರೇಶ ಮಸೂತಿ ಅವರು ಮಾತನಾಡಿದರು.  ಸಭೆಯಲ್ಲಿ ಕೊಪ್ಪಳ ನಗರದ ನಾಗರಿಕರು ಪಾಲ್ಗೊಂಡಿದ್ದರು.
Please follow and like us:
error