ವಿದ್ಯಾರ್ಥಿಗಳಿಂದ ಕ್ರಾಂತಿಕಾರಿ ಸಂಗೋಳ್ಳಿ ರಾಯಣ್ಣ ನ ನಾಟಕ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಂಡರಗಿಯಲ್ಲಿ ೬೭ ನೇ ಸ್ವಾತಂತ್ರ್ಯ ದಿನಾಚರಣೆ  
ಕೊಪ್ಪಳ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಂಡರಗಿ ಯಲ್ಲಿ  

೬೭ ನೇ ಸ್ವತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಭಿಮನಗೌಡ ಮಾಲೀಪಾಟೀಲ ನೆರವೆರಿಸಿದರು. ನಂತರ ಮಕ್ಕಳಿಂದ ಸಾಮೂಹಿಕ ಕಾರ್ಯಕ್ರಮದ ಸೀರೆ ನೃತ್ಯ ಮಾಡಿಸಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮವನ್ನು ಎಸ್.ಡಿ.ಎಂ.ಸಿ ಅಧ್ಯಕ್ಷತೆ ವಹಿಸಿದ್ದು ಮಕ್ಕಳಿಂದ ನೃತ್ಯ,  ಹಳೆ ವಿದ್ಯಾರ್ಥಿಗಳಿಂದ ಕ್ರಾಂತಿಕಾರಿ ಸಂಗೋಳ್ಳಿ ರಾಯಣ್ಣ ನ ನಾಟಕವನ್ನು ವಿದ್ಯಾರ್ಥಿಗಳು ಅಭಿನಯಿಸಿದರು.

ಈ ಕಾರ್ಯಕ್ರಮದಲ್ಲಿ ಗ್ರಾ.ಪಂ ಸದ್ಯರಾದ ಶಿವಪ್ಪ ಬುರಡಿ ಇವರು ಶಾಲೆಗೆ ೫೦ ಲೋಟಗಳನ್ನು ಕಾಣಿಕೆಯಾಗಿ ನೀಡಿದರು.   ಲೋಟಗಳಿಗೆ ಇನ್ನೂ ಅನೇಕ ಧಾನಿಗಳು ಧನ ಸಹಾಯವನ್ನು ಮಾಡಿದರು. 
ಈ ಸಂದರ್ಭದಲ್ಲಿ ವೇಧಿಕೆಯ ಮೇಲೆ ಎಸ್.ಡಿ.ಎಂ.ಸಿ ಸರ್ವ ಸದಸ್ಯರು ಮತ್ತು ಸದಸ್ಯನಿಯರು ಗ್ರಾ.ಪಂ ಸದಸ್ಯರು ಶಾಲಾ ಮುಖ್ಯೋಪಾಧ್ಯರು ಅಂಗನವಾಡಿಯ ಕಾರ್ಯಕರ್ತರು ಭಾಗವಹಿಸಿದ್ದರು. ಕಾರ್ಯಕ್ರಮದ ಸ್ವಾಗತವನ್ನು ವಿಶ್ವನಾಥ.ಸಿ. ಸ.ಶಿ. ಇವರು ನೆರವೆರಿಸದರು. ನಿರೂಪಣೆಯನ್ನು ಗವೀಸಿದ್ದಪ್ಪ ಸಂಗಟಿ ನಿರೂಪಿಸದರು, ವಂದನಾರ್ಪಣೆಯನ್ನು ಬಸವರಾಜ ಸ.ಶಿ. ಇವರು ನೇರವೆರಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಯರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಶಾಲಾ ಮಕ್ಕಳು ಮತ್ತು ಹಳೆ ವಿದ್ಯಾರ್ಥಿಗಳಿಂದ ಸ್ವತಂತ್ರ್ಯ ದಿನಾಚರಣೆಯ ಬಗ್ಗೆ ಉದ್ದೇಶಿಸಿ ಮಾತನಾಡಿದರು.  

Leave a Reply