ಶಾರೀರಿಕ ಹಾಗು ಭೌದ್ದಿಕ ಬೆಳೆವಣೆಗೆಗೆ ಕ್ರೀಡೆ ಅತ್ಯವಶ್ಯಕ ಶಾಸಕ-ಕೆ.ರಾಘವೇಂದ್ರ ಹಿಟ್ನಾಳ.

ಕೊಪ್ಪಳ, ೧೩, ಕ್ಷೇತ್ರದ ಹಲಗೇರಿ ಗ್ರಾಮದಲ್ಲಿ ಹಾರ್ಡ ಟೇನಿಸ್‌ಬಾಲ್ ಹಲಗೇರಿ ಪ್ರಿಮೀಯರ್ ಲೀಗ್ ಕ್ರಿಕೇಟ್ ಪಂದ್ಯವನ್ನು ಉದ್ಘಾಟಿಸಿ ಮಾತನಾಡಿದ ಕೊಪ್ಪಳದ ಜನಪ್ರೀಯ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳರವರು ಕ್ರೀಡೆಯಿಂದ ಮನುಷ್ಯನ ಶಾರೀರಿಕ ಬೆಳೆವಣೆಗೆ ಜೋತೆಗೆ ಬೌದ್ಧಿಕ ಅಭಿವೃದ್ದಿಗೆ ಸಹಾಯಕಾರಿಯಾಗುತ್ತದೆ. ಸರ್ಕಾರವು ಶಿಕ್ಷಣದ ಜೋತೆಗೆ ಕ್ರೀಡೆಗೂ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದು ವಿದ್ಯಾರ್ಥಿಗಳು ಶಿಕ್ಷಣದ ಜೋತೆಗೆ ಕ್ರೀಡೆಗಳ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಪಾಲಕರು ತಮ್ಮ ಮಕ್ಕಳನ್ನು ಕ್ರೀಡೆಯಲ್ಲಿ ಪಾಲ್ಗೋಳ್ಳಲು ಉತ್ತೇಜಿಸಬೇಕು. ಜಿಲ್ಲೆ, ರಾಜ್ಯ, ರಾಷ್ಠ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಆಟಗಾರರೂ ಮುಂದೆ ಬರಬೇಕು ನಾಡಿನ ಕೀರ್ತಿ ಹೆಚ್ಚಿಸಬೇಕೆಂದು ಆಟಗಾರರಿಗೆ ಕರೆ ನೀಡಿದರು. ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷರು ದೇವಪ್ಪ ಓಜನಹಳ್ಳಿ, ಬಾಳಪ್ಪ ಬಾರಕೇರ, ಪ್ರಸನ್ನ ಗಡಾದ, ಮುತ್ತುರಾಜ ಕುಷ್ಟಗಿ, ಶಂಕ್ರಪ್ಪ ಅಂಗಡಿ, ಹನುಮಂತ ಹಳ್ಳಿಕೇರಿ, ವೀರಭದ್ರಗೌಡ ಪಾಟೀಲ, ದೇವಣ್ಣ, ಮಹಂತೇಶ ವಡ್ಡರ, ಜಗದೀಶ ಓಜನಹಳ್ಳಿ, ಇನ್ನೂ ಅನೇಕ ಕ್ರೀಡಾ ಪಟುಗಳು ಪಾಲ್ಗೊಂಡಿದ್ರು.

Please follow and like us:
error